ಮುದ್ದಿನ ಮಗನ ಜೊತೆ ಗೋವಾದಲ್ಲಿ ಬರ್ತ್ ಡೇ ಆಚರಿಸಿದ ಮೇಘನಾ ರಾಜ್
ಚಂದನವನದ ನಟಿ ಮೇಘನಾ ರಾಜ್ ತಮ್ಮ ಮಗ ಹಾಗೂ ಫ್ಯಾಮಿಲಿ ಜೊತೆ ಗೋವಾದಲ್ಲಿ ಹುಟ್ಟುಹಬ್ಬ ಆಚರಿಸಿದ್ದಾರೆ.

ನಟಿ ಮೇಘನಾ ರಾಜ್ (Meghana Raj) ಇತ್ತೀಚೆಗೆ ತಮ್ಮ 35ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಇದೀಗ ಸೆಲೆಬ್ರೇಶನ್ ಗಾಗಿ ಗೋವಾಕ್ಕೆ ತೆರಳಿದ್ದು ಅಲ್ಲಿ ಮಗ ಹಾಗೂ ತಾಯಿ ಜೊತೆ ಎಂಜಾಯ್ ಮಾಡ್ತಿದ್ದಾರೆ.
ಸೋಶಿಯಲ್ ಮಿಡಿಯಾದಲ್ಲಿ ಆಕ್ಟಿವ್ ಆಗಿರುವ ಮೇಘನಾ ರಾಜ್ ತಮ್ಮ ಇನ್’ಸ್ಟಾಗ್ರಾಂನಲ್ಲಿ ಗೋವಾ ಡೈರಿಯ ಫೋಟೊಗಳನ್ನು ಶೇರ್ ಮಾಡಿದ್ದು, ಹುಟ್ಟುಹಬ್ಬವನ್ನು ಸಖತ್ತಾಗಿ ಎಂಜಾಯ್ ಮಾಡಿರೋದಾಗಿ ತಿಳಿಸಿದ್ದಾರೆ.
ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಮೇಘನಾ ಈ ಹುಟ್ಟುಹಬ್ಬವು (Birthday) ವಿಭಿನ್ನವಾಗಿತ್ತು... ಹಲವು ವಿಧಗಳಲ್ಲಿ... ನಾನು ಅನುಭವಿಸಿದ ಭಾವನೆಯನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ಆದರೂ, ನಾನು ನಿಜವಾಗಿಯೂ ನಿಮ್ಮೆಲ್ಲರೊಂದಿಗೆ ಧನ್ಯವಾದಗಳನ್ನು ತಿಳಿಸಲು ಇಷ್ಟ ಪಡುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಅಷ್ಟೇ ಅಲ್ಲದೇ ನೀವೆಲ್ಲರೂ ನನ್ನ ಮೇಲೆ ಸುರಿಸಿದ ಪ್ರೀತಿ, ಬಂದ ಆಶೀರ್ವಾದಗಳು, ನಾವು ಒಂದು ಕುಟುಂಬವಾಗಿ ಎಷ್ಟು ಪ್ರೀತಿಸಲ್ಪಟ್ಟಿದ್ದೇವೆ ಎಂಬುದಕ್ಕೆ ಸಾಕ್ಷಿಯಾಗಿದೆ! ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ ಮೇಘನಾ ರಾಜ್.
ಇನ್ನು ಗೋವಾದಲ್ಲಿ ಮೇಘನಾ ರಾಜ್ ಸಮ್ಮರ್ ವೆಕೇಶನ್ ಕೂಡ ಎಂಜಾಯ್ ಮಾಡುತ್ತಿದ್ದಾರೆ. ಮಗ (Raayan Sarja) ಹಾಗೂ ತಾಯಿ ಜೊತೆ ಬೀಚ್, ಹಾಗೂ ಇನ್ನಿತರ ಸ್ಥಳಗಳಲ್ಲಿ ಎಂಜಾಯ್ ಮಾಡ್ತಿದ್ದಾರೆ.
ಮೇಘನಾ ರಾಜ್ ಜೀವನವನ್ನು ಎಂಜಾಯ್ ಮಾಡುತ್ತಿರೋದನ್ನು ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಇತ್ತಿಚೆಗಷ್ಟೇ ಮೇಘನಾ, ಚಿರಂಜೀವಿ ಸರ್ಜಾ ಫೋಟೊ ಶೇರ್ ಮಾಡಿ ತಮ್ಮ ಆನಿವರ್ಸರಿಯ ಶುಭ ಕೋರಿದ್ದರು.
ಚಿರಂಜೀವಿ ಸರ್ಜಾ (Chiranjeevi Sarja) ಹಾಗೂ ಮೇಘನಾ ರಾಜ್ ಪ್ರೀತಿಸಿ ಮದುವೆಯಾಗಿದ್ದರು. ಈ ಜೋಡಿಯನ್ನು ನೋಡಿ ಮೇಡ್ ಫಾರ್ ಈಚ್ ಅದರ್ ಎನ್ನುತ್ತಿದ್ದವರೇ ಹೆಚ್ಚು, ಆದರೆ ವಿಧಿಯಾಟ ಹೇಗಿತ್ತು ಅಂದ್ರೆ ಇಬ್ಬರನ್ನು ಜೊತೆಯಾಗಿರಲು ಬಿಡಲೇ ಇಲ್ಲ.
2020ರಲ್ಲಿ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಈ ಸಂದರ್ಭದಲ್ಲಿ ಮೇಘನಾ 3 ತಿಂಗಳ ಗರ್ಭಿಣಿಯಾಗಿದ್ದರು. ತನ್ನ ಮಗುವಿಗಾಗಿ ಮೇಘನಾ ಮತ್ತೆ ಸ್ಟ್ರಾಂಗ್ ಆಗಿ ಬದುಕು ಸಾಗಿಸಿದರು.
ಮುದ್ದಿನ ಮಗ ರಾಯನ್ ನ ಮಾತಿನಲ್ಲಿ ನಗುವಿನಲ್ಲಿ ಚಿರಂಜೀವಿಯನ್ನು ಕಾಣುವ ಮೇಘನಾ ಇತ್ತೀಚೆಗಷ್ಟೇ ತಮ್ಮದೇ ಆದ ಸ್ವಂತ ಮನೆಯ ಗೃಹಪ್ರವೇಶ ಮಾಡಿಸಿದ್ದರು. ತನ್ನ ಮಗನ ಆಟ ಪಾಟದಲ್ಲೇ ಸಮಯ ಕಳೆಯುತ್ತಿದ್ದಾರೆ ನಟಿ.