- Home
- Entertainment
- Sandalwood
- ಅವಮಾನಗಳನ್ನು ಎದುರಿಸಿ ಮಾಡಿರುವ ಚಿತ್ರ ಸಿದ್ಲಿಂಗು 2: ಲೂಸ್ ಮಾದ ಯೋಗಿ ಹೀಗೆ ಹೇಳಿದ್ಯಾಕೆ?
ಅವಮಾನಗಳನ್ನು ಎದುರಿಸಿ ಮಾಡಿರುವ ಚಿತ್ರ ಸಿದ್ಲಿಂಗು 2: ಲೂಸ್ ಮಾದ ಯೋಗಿ ಹೀಗೆ ಹೇಳಿದ್ಯಾಕೆ?
ವಿಜಯಪ್ರಸಾದ್ ಜೊತೆ ಮತ್ತೊಮ್ಮೆ ಸಿನಿಮಾ ಮಾಡಿದ್ದೇನೆ. ಈ ಪ್ರಯಾಣದಲ್ಲಿ ಜಗಳ ಆಗಿದೆ, ಇರಿಸುಮುರುಸು ಆಗಿದೆ. ಆದರೆ ಒಬ್ಬ ಪರಿಪೂರ್ಣ ನಟ ಆಗಬೇಕು ಅಂದರೆ ಅವರ ಜೊತೆಗೆ ಕೆಲಸ ಮಾಡಬೇಕು’ ಎಂದು ಹೇಳಿದ್ದು ಲೂಸ್ ಮಾದ ಯೋಗಿ.

‘ಶ್ರಮ ಪಟ್ಟು ಈ ಸಿನಿಮಾ ಮಾಡಿದ್ದೀವಿ. ಅವಮಾನಗಳನ್ನು ಎದುರಿಸಿ ಸಿನಿಮಾ ಮಾಡಿದ್ದೇವೆ. ವಿಜಯಪ್ರಸಾದ್ ಜೊತೆ ಮತ್ತೊಮ್ಮೆ ಸಿನಿಮಾ ಮಾಡಿದ್ದೇನೆ. ಈ ಪ್ರಯಾಣದಲ್ಲಿ ಜಗಳ ಆಗಿದೆ, ಇರಿಸುಮುರುಸು ಆಗಿದೆ. ಆದರೆ ಒಬ್ಬ ಪರಿಪೂರ್ಣ ನಟ ಆಗಬೇಕು ಅಂದರೆ ಅವರ ಜೊತೆಗೆ ಕೆಲಸ ಮಾಡಬೇಕು’ ಎಂದು ಹೇಳಿದ್ದು ಲೂಸ್ ಮಾದ ಯೋಗಿ.
ವಿಜಯಪ್ರಸಾದ್ ನಿರ್ದೇಶನದ, ಲೂಸ್ ಮಾದ ಯೋಗಿ ನಟನೆಯ ‘ಸಿದ್ಲಿಂಗು 2’ ಚಿತ್ರದ ‘ಕಥೆಯೊಂದು’ ಎಂಬ ಹಾಡು ಬಿಡುಗಡೆ ಸಂದರ್ಭದಲ್ಲಿ ಅವರು ಮಾತನಾಡಿದರು. ಈ ಸಿನಿಮಾ ಫೆ.14ರಂದು ಪ್ರೇಮಿಗಳ ದಿನ ಬಿಡುಗಡೆಯಾಗುತ್ತಿದೆ.
ನಿರ್ದೇಶಕ ವಿಜಯಪ್ರಸಾದ್, ‘ಕಥೆಯೊಂದು ಸೊಗಸಾದ ಹಾಡನ್ನು ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಮತ್ತು ಅರಸು ಅಂತಾರೆ ಕೊಟ್ಟಿದ್ದಾರೆ. ಎಲ್ಲರೂ ಈ ಚಿತ್ರಕ್ಕೆ ಬೆಂಬಲಿಸಿ’ ಎಂದರು.
ಸೋನು ಗೌಡ, ‘ಈ ತಂಡಕ್ಕೆ ನಾನು ಹೊಸಬಳು. ವಿಜಯಪ್ರಸಾದ್ ಅವರಿಂದ ಸಾಕಷ್ಟು ಪಾಠ ಕಲಿತಿದ್ದೇನೆ. ಒಂದೊಳ್ಳೆ ಸಿನಿಮಾದಲ್ಲಿ ನಟಿಸಿರುವುದಕ್ಕೆ ಖುಷಿ ಇದೆ’ ಎಂದರು.
ಶ್ರೀಹರಿ ಮತ್ತು ರಾಜು ಶೇರಿಗಾರ್ ಈ ಸಿನಿಮಾ ನಿರ್ಮಿಸಿದ್ದಾರೆ. ಸುಮನ್ ರಂಗನಾಥ್, ಗಿರಿಜಾ ಲೋಕೇಶ್, ಮಹಾಂತೇಶ್, ಆ್ಯಂಟೋನಿ ಕಮಲ್, ಮಂಜುನಾಥ ಹೆಗಡೆ ಪ್ರಮುಖ ಪಾತ್ರದಲ್ಲಿದ್ದಾರೆ.
ನೋ ಡಬಲ್ ಮೀನಿಂಗ್: ನನ್ನ ಈ ಹಿಂದಿನ ಚಿತ್ರಗಳಂತೆ ಸಿದ್ಲಿಂಗು 2 ಸಿನಿಮಾದಲ್ಲಿ ಚೇಷ್ಟೆಗಳು ಇರುವುದಿಲ್ಲ. ಓನ್ಲಿ ಮೀನಿಂಗ್, ನೋ ಡಬಲ್ ಮೀನಿಂಗ್. ಇದನ್ನು 6 ವರ್ಷದವರಿಂದ 60 ವರ್ಷದವರೆಗಿನವರು ನೋಡಬಹುದು’ ಎಂದು ನಿರ್ದೇಶಕ ವಿಜಯ ಪ್ರಸಾದ್ ಹೇಳಿದ್ದಾರೆ.
‘ಸಿದ್ಲಿಂಗು 2’ ಸಿನಿಮಾದ ಮುಹೂರ್ತದ ಬಳಿಕ ಸುದ್ದಿಗೋಷ್ಠಿಯಲ್ಲಿ, ‘ಸಿದ್ಲಿಂಗು ರಿಲೀಸ್ ಆದಾಗ ಥಿಯೇಟರ್ ಖಾಲಿ ಹೊಡೆಯುತ್ತಿತ್ತು. ಅದನ್ನು ನೋವಿನಿಂದ ನೋಡುತ್ತಿದ್ದೆ. ಸಿನಿಮಾ ಟಿವಿಗೆ ಬಂದ ಮೇಲೆ ಜನ ಚಿತ್ರದ ಬಗ್ಗೆ, ಇದರಲ್ಲಿ ಬರುವ ಚೇಷ್ಟೆಗಳ ಬಗ್ಗೆ ಮಾತನಾಡಿದರು.