ಮಾಲ್ಡೀವ್ಸ್‌ನಲ್ಲಿ ಅಜಯ್ ರಾವ್ ದಂಪತಿ; ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ಸ್ವಪ್ನ ರಾವ್
ಸ್ಯಾಂಡಲ್ ವುಡ್ ಕೃಷ್ಣ ಅಜಯ್ ರಾವ್ ದಂಪತಿ ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ್ದಾರೆ. ಸೆಲೆಬ್ರಿಟಿಗಳ ಸ್ವರ್ಗ ಅಂತನೇ ಕರೆಸಿಕೊಳ್ಳುತ್ತಿರುವ ಮಾಲ್ಡೀವ್ಸ್‌ನಲ್ಲಿ ಕನ್ನಡ ನಟ ಅಜಯ್ ರಾವ್ ದಂಪತಿ ವಸ್ತ್ ಮಜಾ ಮಾಡುತ್ತಿದ್ದಾರೆ.

ಸ್ಯಾಂಡಲ್ ವುಡ್ ಕೃಷ್ಣ ಅಜಯ್ ರಾವ್ ದಂಪತಿ ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ್ದಾರೆ. ಸೆಲೆಬ್ರಿಟಿಗಳ ಸ್ವರ್ಗ ಅಂತನೇ ಕರೆಸಿಕೊಳ್ಳುತ್ತಿರುವ ಮಾಲ್ಡೀವ್ಸ್‌ನಲ್ಲಿ ಕನ್ನಡ ನಟ ಅಜಯ್ ರಾವ್ ದಂಪತಿ ವಸ್ತ್ ಮಜಾ ಮಾಡುತ್ತಿದ್ದಾರೆ.
ಕೃಷ್ಣ ಅಜಯ್ ರಾವ್ ಮತ್ತು ಪತ್ನಿ ಸ್ವಪ್ನ ರಾವ್ ಇಬ್ಬರೂ ಮಾಲ್ಡೀವ್ಸ್ ಪ್ರವಾಸದಲ್ಲಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇಬ್ಬರೂ ಮಾಲ್ಡೀವ್ಸ್‌ನಲ್ಲಿ ಕ್ಯಾಮರಾಗೆ ಮಸ್ತ್ ಪೋಸ್ ನೀಡಿದ್ದಾರೆ. ಅಜಯ್ ರಾವ್ ಪತ್ನಿ ಸ್ವಪ್ನ ರಾವ್ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಸಖತ್ ರೊಮ್ಯಾಂಟಿಕ್ ಆಗಿರುವ ಫೋಟೋಗಳನ್ನು ಶೇರ್ ಮಾಡಿರುವ ಅಜಯ್ ರಾವ್ ದಂಪತಿಗೆ ಹಾರ್ಟ್ ಇಮೋಜಿ ಇರಿಸಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಅಂದಹಾಗೆ ಇಬ್ಬರೂ ಮಾಲ್ಡೀವ್ಸ್ ಪ್ರವಾಸಕ್ಕೆ ಹೋಗಿದ್ದು ಮದುವೆ ಮಾರ್ಷಿಕೋತ್ಸವ ಎಂಜಾಯ್ ಮಾಡಲು.
ಅಜಯ್ ರಾವ್ ಮತ್ತು ಸ್ವಪ್ನ ರಾವ್ ಮದುವೆಯಾಗಿ 8 ವರ್ಷಗಳಾಗಿದೆ. ಮದುವೆ ವಾರ್ಷಿಕೋತ್ಸವ ಸಂಭ್ರಮಿಸಲು ಇಬ್ಬರೂ ಮಾಲ್ಡೀವ್ಸ್‌ಗೆ ಹಾರಿದ್ದಾರೆ. ಫೋಟೋಗಳನ್ನು ಶೇರ್ ಮಾಡಿ ಸ್ವಪ್ನ ರಾವ್ ಪ್ರೀತಿಯ ಸಾಲುಗಳನ್ನು ಬರೆದುಕೊಂಡಿದ್ದಾರೆ.
'ನಮಗೆ 8ನೇ ವಾರ್ಷಿಕೋತ್ಸವದ ಶುಭಾಶಯಗಳು. ಒಳ್ಳೆಯ ಸಮಯಕಳೆಯುವುದು, ಕಷ್ಟದ ಸಮಯವನ್ನು ಸಹಿಸಿಕೊಳ್ಳುವುದು, ಪ್ರೀತಿಯಲ್ಲಿ ವಿಶ್ವಾಸವಿಡುವುದು, ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವುದು, ನಗುವುದು ಮತ್ತು ಬದುಕುವುದು, ಕ್ಷಮಿಸುವುದು' ಸ್ವಪ್ನ ರಾವ್ ಪತಿಗೆ ವಿಶ್ ಮಾಡಿದ್ದಾರೆ.
ಅಂದಹಾಗೆ ಸ್ಯಾಂಡಲ್ ವುಡ್ ಕೃಷ್ಣ ಅಜಯ್ ರಾವ್ ಮತ್ತು ಸ್ವಪ್ನ ರಾವ್ ಇಬ್ಬರು 2014 ಡಿಸೆಂಬರ್ 8ರಂದು ಹಸೆಮಣೆ ಏರಿದರು. ಅದ್ದೂರಿಯಾಗಿ ಮದುವೆಯಾಗದೆ ಸಿಂಪಲ್ ಆಗಿ ಕೃಷ್ಣ ಅಜಯ್ ರಾವ್ ಹಸೆಮಣೆ ಏರಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.