ದೇಹ ದಂಡಿಸಿ ಸಿದ್ಧಳಾದ ಜ್ಯೋತಿ ಪೂರ್ವಜ್: ಗನ್ ಹಿಡಿದು ಕಿಲ್ಲರ್ ಆಗಿದ್ಯಾಕೆ?
ಜ್ಯೋತಿ ಪೂರ್ವಜ್, ‘ಸಾಕಷ್ಟು ಆ್ಯಕ್ಷನ್‌ಗಳಿವೆ. ಹಾಗಾಗಿ ದೇಹ ದಂಡಿಸಿ ಸಿದ್ಧಳಾಗಿದ್ದೇನೆ. ನಾಲ್ಕೈದು ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳುತ್ತೇನೆ’ ಎನ್ನುತ್ತಾರೆ.

‘ಜೋಗುಳ’, ’ಗೆಜ್ಜೆಪೂಜೆ’ ಮುಂತಾದ ಧಾರಾವಾಹಿಗಳ ಮೂಲಕ ಕನ್ನಡಿಗರ ಜನಮನ ಗೆದ್ದ ಜ್ಯೋತಿ ರೈ ಈಗ ಜ್ಯೋತಿ ಪೂರ್ವಜ್ ಎಂಬ ಹೆಸರಿನಲ್ಲಿ ‘ಕಿಲ್ಲರ್’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ಅವರ ಪತಿ ಪೂರ್ವಜ್ ಅವರು ಬರೆದು, ನಿರ್ದೇಶಿಸಿರುವ ಈ ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ಮೂಡಿ ಬರಲಿದೆ. ಪೂರ್ವಜ್ ಅವರು ವಿಶೇಷ ಪಾತ್ರದಲ್ಲಿಯೂ ನಟಿಸಿದ್ದಾರೆ.
ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಜ್ಯೋತಿ ಪೂರ್ವಜ್ ಅವರು ನಿರ್ಮಾಣ ಜವಾಬ್ದಾರಿಯೂ ಹೊತ್ತಿದ್ದಾರೆ. ಅವರಿಗೆ ಪ್ರಜಯ್ ಕಾಮತ್, ಪದ್ಮನಾಭ ರೆಡ್ಡಿ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ.
ಜ್ಯೋತಿ ಪೂರ್ವಜ್, ‘ಸಾಕಷ್ಟು ಆ್ಯಕ್ಷನ್‌ಗಳಿವೆ. ಹಾಗಾಗಿ ದೇಹ ದಂಡಿಸಿ ಸಿದ್ಧಳಾಗಿದ್ದೇನೆ. ನಾಲ್ಕೈದು ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳುತ್ತೇನೆ’ ಎನ್ನುತ್ತಾರೆ.
ಇದೀಗ ರಿಲೀಸ್ ಆಗಿರುವ ಟೀಸರ್‌ನಲ್ಲಿ ಜ್ಯೋತಿ ಬೋಲ್ಡ್ ಆಗಿ ನಟಿಸಿದ್ದಾರೆ. ರೋಬೋಟ್ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ನಾಯಕಿ ಯಾಕೆ ರೋಬೋಟ್ ಆಗಿ ಬದಲಾಗುತ್ತಾಳೆ.
ಅದರ ಅಸಲಿಯತ್ತು ಏನು, ಯಾಕೆ ಎಲ್ಲರನ್ನು ನಾಯಕಿ ಕೊಲ್ಲುತ್ತಾಳೆ ಎಂಬುದು ಟೀಸರ್‌ನಲ್ಲಿ ಕುತೂಹಲ ಮೂಡಿಸಿದೆ. ಕನ್ನಡ ಹಾಗೂ ತೆಲುಗಿನಲ್ಲಿ ಸಿನಿಮಾ ಮೂಡಿ ಬರಲಿದೆ.
40 ರ ಆಸುಪಾಸಿನಲ್ಲಿರುವ ನಟಿ ಜ್ಯೋತಿ ರೈ ಮೂಲತಃ ಮಂಗಳೂರಿನಲ್ಲಿ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದು, ಈಗ ತೆಲುಗಿನಲ್ಲೇ ನೆಲೆಯೂರಿದ್ದಾರೆ.