ಏಪ್ರಿಲ್ ಮೊದಲ ವಾರ ವಿಕ್ರಾಂತ್ ರೋಣ ಟೀಸರ್ ಬಿಡುಗಡೆ!
ಸುದೀಪ್ ಅಭಿಮಾನಿಗಳನ್ನು ಸಮಾಧಾನಿಸಿದ ನಿರ್ಮಾಪಕ ಜಾಕ್ ಮಂಜುನಾಥ್. ಏಪ್ರಿಲ್ ತಿಂಗಳಿನಲ್ಲಿ ಗುಡ್ ನ್ಯೂಸ್

ವಿಕ್ರಾಂತ್ ರೋಣದಲ್ಲಿ ಜಾಕ್ವೆಲಿನ್
ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಚಿತ್ರದ ಟೀಸರ್ ಅನ್ನು ಏಪ್ರಿಲ್ ಮೊದಲ ವಾರ ಬಿಡುಗಡೆ ಮಾಡುವುದಾಗಿ ನಿರ್ಮಾಪಕ ಜಾಕ್ ಮಂಜುನಾಥ್ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಆ ಮೂಲಕ ಕಿಚ್ಚ ಸುದೀಪ್ ಅಭಿಮಾನಿಗಳನ್ನು ಸಮಾಧಾನಿಸಿದ್ದಾರೆ.
ಕಿಚ್ಚ ಅದ್ಭುತ ಲುಕ್
ಸುದೀಪ್ ಅಭಿಮಾನಿಗಳು ‘ವಿಕ್ರಾಂತ್ ರೋಣ’ ಚಿತ್ರದ ಅಪ್‌ಡೇಟ್ಸ್‌ಗೆ ಪಟ್ಟು ಹಿಡಿದಿದ್ದರು. ಸಾಲು ಸಾಲು ಸ್ಟಾರ್ ಚಿತ್ರಗಳು ಹೊರಬೀಳುತ್ತಿರುವಾಗ ಸುದೀಪ್ ಚಿತ್ರದ ಬಗ್ಗೆ ಯಾವುದೇ ಹೊಸ ಮಾಹಿತಿ ಇಲ್ಲದಿರುವುದು ಬೇಸರ ತಂದಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.
ಅಭಿಮಾನಿಗಳಿಗೆ ಗುಡ್ ನ್ಯೂಸ್
ಇದಕ್ಕೂ ಚಿತ್ರತಂಡ ಪ್ರತಿಕ್ರಿಯೆ ನೀಡದಿದ್ದಾಗ, ತಾವೇ ಸೆಲೆಬ್ರೇಶನ್‌ಗೆ ಮುಂದಾಗಿ, ಊರಿನ ಉತ್ಸವಗಳಲ್ಲಿ ವಿಕ್ರಾಂತ್ ರೋಣ ಕಟೌಟ್, ಪೋಸ್ಟರ್‌ಗಳನ್ನು ಹಾಕಿ ಸಂಭ್ರಮಿಸಿದ್ದಾರೆ. ಇತ್ತ ಸಿನಿಮಾದ ಪ್ರಚಾರಕ್ಕೆ ಪ್ಲಾನ್ ಮಾಡಿಕೊಂಡಿರುವ ನಿರ್ಮಾಪಕ ಮಂಜುನಾಥ್ ಸದ್ಯಕ್ಕೆ ಟೀಸರ್ ಹೊರಬಿಡೋದಾಗಿ ಹೇಳಿದ್ದಾರೆ.
ಪಂಚ ಭಾಷೆಯಲ್ಲಿ ಸಿನಿಮಾ ರಿಲೀಸ್
‘ವಿಕ್ರಾಂತ್ ರೋಣ’ ಕನ್ನಡ, ತೆಲುಗು, ,ತಮಿಳು, ಹಿಂದಿ, ಮಲಯಾಳಂ ಜತೆಗೆ ಇಂಗ್ಲಿಷ್‌ನಲ್ಲೂ ಬಿಡುಗಡೆ ಆಗುತ್ತಿದೆ. ಮಲಯಾಳಂ ಭಾಷೆಯ ಹೊರತಾಗಿ ಎಲ್ಲಾ ಭಾಷೆಗಳಲ್ಲೂ ಸುದೀಪ್ ಅವರೇ ಡಬ್ ಮಾಡಿದ್ದಾರೆ. ಇದು ನಮ್ಮ ಚಿತ್ರದ ನಾಯಕ ಸುದೀಪ್ ಪ್ರೀತಿಯಿಸಿದ ಸ್ವೀಕರಿಸಿ ನಿಭಾಯಿಸಿದ ದೊಡ್ಡ ಸವಾಲು ಎಂಬುದು ನನ್ನ ಭಾವನೆ.
ಡಬ್ಬಿಂಗ್ ಮುಗಿಸಿದ ಕಿಚ್ಚ
ಚಿತ್ರಕ್ಕೆ ಇಂಗ್ಲಿಷ್ ಡಬ್ಬಿಂಗ್ ನಡೆಯುತ್ತಿದೆ. ಸುದೀಪ್ ಪಾತ್ರದ ಡಬ್ಬಿಂಗ್ ಕೆಲಸ ಮಾತ್ರ ಮುಗಿದ್ದು, ಉಳಿದವರ ಪಾತ್ರಗಳಿಗೆ ಡಬ್ಬಿಂಗ್ ನಡೆಯುತ್ತಿದೆ. ನನಗೆ ಗೊತ್ತಿರುವಂತೆ ಒಂದು ಕಮರ್ಷಿಯಲ್ ಚಿತ್ರದಲ್ಲಿ ನಾಯಕ ನಟನೊಬ್ಬ ತಮ್ಮ ಪಾತ್ರಕ್ಕೆ ತಾವೇ ಇಂಗ್ಲಿಷ್‌ನಲ್ಲಿ ಡಬ್ ಮಾಡಿರುವುದು ಇದೇ ಮೊದಲು. ದಕ್ಷಿಣ ಭಾರತದ ಯಾವ ಹೀರೋಗಳು ಕೂಡ ತಮ್ಮ ಪಾತ್ರಕ್ಕೆ ತಾವೇ ಸಂಪೂರ್ಣವಾಗಿ ಇಂಗ್ಲಿಷ್‌ನಲ್ಲಿ ವಾಯ್‌್ಸ ಕೊಟ್ಟಿಲ್ಲ.
ಶೀಘ್ರದಲ್ಲಿ ಸಿನಿಮಾ ರಿಲೀಸ್
ಬಿಡುಗಡೆ ದಿನಾಂಕವನ್ನು ಇನ್ನೂ ಪಕ್ಕಾ ಮಾಡಿಲ್ಲ. ಅದನ್ನು ನಿರ್ಮಾಪಕ ಜಾಕ್ ಮಂಜು ಅವರೇ ಹೇಳಬೇಕು. ಆದರೆ, ಏಕಕಾಲಕ್ಕೆ ಎಲ್ಲಾ ಭಾಷೆಗಳಲ್ಲೂ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ.