- Home
- Entertainment
- Sandalwood
- ಭಟ್ಕಳದ ಪೆಟ್ಟಿ ಅಂಗಡಿಯಲ್ಲಿ ಹೆಂಡ್ತಿ ಮಕ್ಕಳಿಗೆ ಐಸ್ ಕ್ರೀಂ ಕೊಡಿಸಿದ ಯಶ್; ಫೋಟೋ ವೈರಲ್
ಭಟ್ಕಳದ ಪೆಟ್ಟಿ ಅಂಗಡಿಯಲ್ಲಿ ಹೆಂಡ್ತಿ ಮಕ್ಕಳಿಗೆ ಐಸ್ ಕ್ರೀಂ ಕೊಡಿಸಿದ ಯಶ್; ಫೋಟೋ ವೈರಲ್
ಶಿರಾಲಿಯ ಚಿತ್ರಾಪುರ ಮಠದ ರಸ್ತೆಯಲ್ಲಿ ಕಾಣಿಸಿಕೊಂಡ ಯಶ್ ಫ್ಯಾಮಿಲಿ. ಸರಳತೆ ಮೆಚ್ಚಿಕೊಂಡ ನೆಟ್ಟಿಗರು....

ಕನ್ನಡ ಚಿತ್ರರಂಗ ರಾಕಿಂಗ್ ಸ್ಟಾರ್ ಯಶ್ ತಮ್ಮ ಫ್ಯಾಮಿಲಿ ಜೊತೆ ಭಟ್ಕಳದ ಶಿರಾಲಿಯ ಚಿತ್ರಾಪುರ ಮಠದ ರಸ್ತೆಯಲ್ಲಿ ಪ್ರಯಾಣ ಮಾಡುವಾಗ ಕಾಣಿಸಿಕೊಂಡಿದ್ದಾರೆ.
ಮಠದ ರಸ್ತೆಯಲ್ಲಿರುವ ಪೆಟ್ಟಿ ಅಂಗಡಿಯಲ್ಲಿ ಯಶ್ ತಮ್ಮ ಪತ್ನಿ ಮತ್ತು ಮಕ್ಕಳಿಗೆ ಐಸ್ ಕ್ರೀಂ ಮತ್ತು ಚಾಕೋಲೇಟ್ ಕೊಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಫೋಟೋದಲ್ಲಿ ಯಶ್ ಅಂಗಡಿಯಲ್ಲಿ ಖರೀದಿ ಮಾಡುತ್ತಿದ್ದಾರೆ ಹಾಗೂ ಪಕ್ಕದಲ್ಲಿ ರಾಧಿಕಾ ಐಸ್ ಕ್ರೀಂ ತಿನ್ನುತ್ತಿದ್ದಾರೆ.
ಐಷಾರಾಮಿ ಜೀವನ, ಏನು ಬೇಕಿದ್ದರೂ ಖರೀದಿ ಮಾಡುವ ತಾಕತ್ತಿದ್ದರೂ ಎಲ್ಲೂ ಶೋ ಆಫ್ ಮಾಡದೆ ಸರಳ ಜೀವನ ನಡೆಸುವುದು ಯಶ್ ಎನ್ನುತ್ತಾರೆ ಫ್ಯಾನ್ಸ್.
ಅಂಗಡಿ ಅಕ್ಕ ಪಕ್ಕದ ಮನೆಯವರು ಹಾಗೂ ಊರಿನ ಜನರು ತಕ್ಷಣವೇ ಸೇರಿಕೊಂಡು ಸೆಲ್ಫಿ ಪಡೆದು ಸಂಭ್ರಮಿಸಿದ್ದಾರೆ. ಫೋಟೋಗಳು ವೈರಲ್ ಆಗುತ್ತಿದೆ.
ಕೆಲವು ದಿನಗಳ ಹಿಂದೆ ತಮ್ಮ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗ ಮನೆಗೆ ಸರ್ಪ್ರೈಸ್ ಭೇಟಿ ನೀಡಿ ಅವರ ಮಗುವಿಗೆ ಚಿನ್ನದ ಸರವನ್ನು ಗಿಫ್ಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.