ಯಶ್ ರಾಧಿಕಾ ಪಂಡಿತ್ ಮನೆಯಲ್ಲಿ ಯುಗಾದಿ ಹಬ್ಬದ ಸಂಭ್ರಮ ಹೀಗಿತ್ತು!
ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಹೇಗಿತ್ತು ಯುಗಾದಿ ಸಂಭ್ರಮ? ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್.

ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ಮತ್ತು ಸಿಂಡ್ರೆಲಾ ರಾಧಿಕಾ ಪಂಡಿತ್ ಹೊಸ ಮನೆಯಲ್ಲಿ ಯುಗಾದಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.
ರೇಶ್ಮೆ ಪಂಚೆ ಹಳದಿ ಶರ್ಟ್‌ನಲ್ಲಿ ಯಶ್, ಪಿಂಕ್ ಬಣ್ಣದ ರೇಶ್ಮೆ ಸೀರೆಯಲ್ಲಿ ರಾಧಿಕಾ ಪಂಡಿತ್ ಕಾಣಿಸಿಕೊಂಡಿದ್ದಾರೆ. ಇನ್ನು ಇಬ್ಬರು ಸ್ಟಾರ್ ಕಿಡ್‌ಗಳು ಒಂದೇ ಕಾಂಬಿನೇಷನ್ ರೆಡ್ ಆಂಡ್ ವೈಟ್‌ನಲ್ಲಿ ಮಿಂಚಿದ್ದಾರೆ.
ಯಶ್ ಮನೆಯಲ್ಲಿ ಹಬ್ಬದ ಊಟ ಭರ್ಜರಿಯಾಗಿ ನಡೆದಿದೆ. ಬಾಳೆ ಎಲೆ ಊಟ ಮಾಡಿದ್ದಾರೆ. ಒಬ್ಬಟ್ಟು, ಕೋಸಂಬರಿ ಸೇರಿದಂತೆ ವೆರೈಟಿ ವೆರೈಟಿ ಅಡುಗೆ ಮಾಡಿದ್ದಾರೆ.
ಒಂದು ಹಬ್ಬವನ್ನು ಮಿಸ್ ಮಾಡದೆ ರಾಧಿಕಾ ಪಂಡಿತ್ ತಮ್ಮ ಮನೆಯಲ್ಲಿ ಆಚರಿಸುತ್ತಾರೆ. ಪ್ರತಿ ಹಬ್ಬದ ಮಹತ್ವವನ್ನು ಮಕ್ಕಳಿಗೂ ಮತ್ತು ತಮ್ಮ ಫಾಲೋವರ್ಸ್‌ಗೆ ಸಾರುತ್ತಾರೆ.
'ಈ ವರ್ಷ ಬೇವಿಗಿಂತ ಬೆಲ್ಲ ಜಾಸ್ತಿ ಇರಲಿ. ತುಂಬಾ ಒಬ್ಬಟ್ಟು ತಿನ್ನಿ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶುಯಗಳು' ಎಂದು ರಾಧಿಕಾ ಬರೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.