ಪತ್ನಿ ರಾಧಿಕಾ ಪಂಡಿತ್‌ಗೆ ಮುತ್ತಿಟ್ಟ ಕೆಜಿಎಫ್ ನಟ ಯಶ್ ಫೋಟೋ ವೈರಲ್!
ಕಲರ್ ಗ್ಲಾಸ್ ಧರಿಸಿ ಒಬ್ಬರನ್ನೊಬ್ಬರು ನೋಡಿದ ಸ್ಟಾರ್ ಕಪಲ್ ಫೋಟೋ ವೈರಲ್. ಐರಾ ಮತ್ತು ಯಥರ್ವ್ ಎಲ್ಲಿ ಎಂದ ನೆಟ್ಟಿಗರು...
ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ (Yash) ಮತ್ತು ರಾಧಿಕಾ ಪಂಡಿತ್ (Radhika Pandit) ಗೋವಾದಲ್ಲಿ ಜಾಲಿಯಾಗಿ ಎಂಜಾಯ್ ಮಾಡುತ್ತಿದ್ದಾರೆ.
ಕೆಜಿಎಫ್ ಚಾಪ್ಟರ್ 2 ಸಿನಿಮಾ ಯಶಸ್ಸಿನ ಬೆನ್ನಲೆ ಇಡೀ ಚಿತ್ರತಂಡ ಗೋವಾದಲ್ಲಿ ಸಕ್ಸಸ್ ಮೀಟ್ ಹಮ್ಮಿಕೊಂಡಿದೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಆಗುತ್ತಿದೆ.
ಇದೇ ಸಮಯದಲ್ಲಿ ರಾಧಿಕಾ ಪಂಡಿತ್ ಯಶ್ ಜೊತೆ ಫೋಟೋ ಹಂಚಿಕೊಂಡಿದ್ದಾರೆ. ಯಶ್ ಮತ್ತು ರಾಧಿಕಾ ಕೂಲಿಂಗ್ ಗ್ಲಾಸ್ ಧರಿಸಿದ್ದಾರೆ.
'ಕಲರ್ ಗ್ಲಾಸ್ ಮೂಲಕ ಒಬ್ಬರನ್ನೊಬ್ಬರು ನೋಡುತ್ತಿದ್ದೀನಿ' ಎಂದು ರಾಧಿಕಾ ಬರೆದುಕೊಂಡಿದ್ದಾರೆ. ಫೋಟೋ ಕ್ಲಿಕ್ ಮಾಡಿರುವುದು ಭುವನ್ ಫೋಟೋಗ್ರಾಫಿ.
ಇಬ್ಬರು ಫ್ಲೋರಲ್ ಕಾಂಬಿನೇಷನ್ ಉಡುಪು ಧರಿಸಿದ್ದಾರೆ. ಎರಡೂ ಫೋಟೋದಲ್ಲಿ ಒಬ್ಬರನ್ನೊಬ್ಬರು ನೋಡುತ್ತಿದ್ದಾರೆ, ಮತ್ತೊಂದು ಫೋಟೋದಲ್ಲಿ ಯಶ್ ಮುತ್ತಿಟ್ಟಿದ್ದಾರೆ.
ನಟ ಯಶ್ , ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ಇಡೀ ಕೆಜಿಎಫ್ ತಂಡ ಮತ್ತು ಅವರ ಫ್ಯಾಮಿಲಿ ಗೋವಾದಲ್ಲಿ ಎಂಜಾಯ್ ಮಾಡುತ್ತಿದ್ದಾರೆ.