- Home
- Entertainment
- Sandalwood
- ಬ್ಲೌಸ್ ನೋಡ್ಬೇಕಾ....ಒಡವೆ ನೋಡ್ಬೇಕಾ ತಿಳಿಯದು ಎಂದ ನೆಟ್ಟಿಗರು; ಕಾವ್ಯಾ ಶಾ ಫೋಟೋ ವೈರಲ್
ಬ್ಲೌಸ್ ನೋಡ್ಬೇಕಾ....ಒಡವೆ ನೋಡ್ಬೇಕಾ ತಿಳಿಯದು ಎಂದ ನೆಟ್ಟಿಗರು; ಕಾವ್ಯಾ ಶಾ ಫೋಟೋ ವೈರಲ್
ಆಭರಣ ಜಾಹೀರಾತಿನಲ್ಲಿ ಮಿಂಚಿದ ಕಾವ್ಯಾ ಶಾ. ಪಿಂಕ್ ಕಲರ್ ಮತ್ತು ದುಬಾರಿ ಅಭರಣದ ಮೇಲೆ ಬಿತ್ತು ನೆಟ್ಟಿಗರ ಕಣ್ಣು....

ಕನ್ನಡ ಚಿತ್ರರಂಗದ ಪ್ರಸಿದ್ಧ ನಟ ನಾಗೇಂದ್ರ ಶಾ ಅವರ ಪುತ್ರಿ ಕಾವ್ಯಾ ಶಾ ಕೂಡ ನಟಿ, ನಿರೂಪಕಿ ಹಾಗೂ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಕಾವ್ಯಾ ಶಾ ವಿಭಿನ್ನ ರೀತಿಯಲ್ಲಿ ವಿಡಿಯೋಗಳನ್ನು ಕ್ರಿಯೇಟ್ ಮಾಡುತ್ತಾ ತಮ್ಮ ಪ್ರತಿಭೆಯನ್ನು ಜನರಿಗೆ ತೋರಿಸಿ ಮನೋರಂಜಿಸುತ್ತಿದ್ದಾರೆ.
ಈ ಹಿಂದೆ ಆಭರಣ ಅಂಗಡಿಯ ಆನ್‌ಲೈನ್ ಜಾಹೀರಾತಿನಲ್ಲಿ ಕಾವ್ಯಾ ಶಾ ಮಿಂಚಿದ್ದರು. ಈ ಲುಕ್ ಸಖತ್ ವೈರಲ್ ಆಗಿತ್ತು. ಕಾವ್ಯಾ ಸಿನಿಮಾ ಮಾಡಬೇಕು ಅನ್ನೋ ಮಾತುಗಳು ಶುರುವಾಗಿತ್ತು.
ಪಿಂಕ್ ಬಣ್ಣದ ಸಿಲ್ಕ್ ಸ್ಕರ್ಟ್, ಕ್ರೀಂ ಆಂಡ್ ಪಿಂಕ್ ಬಣ್ಣದ ಬ್ಲೌಸ್‌ನಲ್ಲಿ ಕಾವ್ಯಾ ಶಾ ಮಿಂಚಿದ್ದಾರೆ. ಇದಕ್ಕೆ ಹೈ ಲೈಟ್ ಆಗುವಂತೆ ಚಿನ್ನದ ಆಭರಣಗಳನ್ನು ಧರಿಸಿ ಪೋಸ್ ಕೊಟ್ಟಿದ್ದಾರೆ.
ಆಭರಣ ಮತ್ತು ಒಡವೆ ಎರಡೂ ಸೂಪರ್ ಆಗಿರುವ ಕಾರಣ 'ಮೇಡಂ ಇಲ್ಲಿ ನಿಮ್ಮ ಬ್ಲೌಸ್ ಡಿಸೈನ್ ನೋಡಬೇಕಾ ಅಥವಾ ಒಡವೆ ಡಿಸೈನ್ ನೋಡಬೇಕು ತಿಳಿಯುತ್ತಿಲ್ಲ' ಎಂದು ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದರು.
ತಾರೈ ಥಪ್ಪಟ್ಟೈ, ಮುಕುಂದ ಮುರಾರಿ, ಚಕ್ರವ್ಯೂಹ, ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ ಸಿನಿಮಾದಲ್ಲಿ ಕಾವ್ಯಾ ನಟಿಸಿದ್ದಾರೆ. ಒಂದೆರಡು ಧಾರಾವಾಹಿಗಳು ಹಾಗೂ ಹಲವು ಟಿವಿ ಶೋಗಳನ್ನು ನಿರೂಪಣೆ ಮಾಡಿದ್ದಾರೆ.