MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ಸಾಗರದಲ್ಲಿ‌ ಸಿನಿಮಾ ಶೂಟಿಂಗ್, ಮಧ್ಯರಾತ್ರಿ ಆ ನಿರ್ಮಾಪಕ..; ಕರಾಳ ಮುಖ ಬಿಚ್ಚಿಟ್ಟ ಕಾಂತಾರ ಸಿನಿಮಾದ ವಸಂತಕ್ಕ!

ಸಾಗರದಲ್ಲಿ‌ ಸಿನಿಮಾ ಶೂಟಿಂಗ್, ಮಧ್ಯರಾತ್ರಿ ಆ ನಿರ್ಮಾಪಕ..; ಕರಾಳ ಮುಖ ಬಿಚ್ಚಿಟ್ಟ ಕಾಂತಾರ ಸಿನಿಮಾದ ವಸಂತಕ್ಕ!

Actress Prathima Naik: ಕಾಂತಾರ ಸಿನಿಮಾದಲ್ಲಿ ನಟಿಸಿದ್ದ ನಟಿ ಪ್ರತಿಮಾ ನಾಯಕ್ ಅವರು ಚಿತ್ರರಂಗದಲ್ಲಿ ಕಾಸ್ಟಿಂಗ್‌ ಕೌಚ್‌ ಅನುಭವವನ್ನು ಹಂಚಿಕೊಂಡಿದ್ದಾರೆ. ಓರ್ವ ನಿರ್ಮಾಪಕ ರಾತ್ರಿ ಅನುಚಿತವಾಗಿ ವರ್ತಿಸಲು ರೆಡಿಯಾದ ಘಟನೆಯನ್ನು ಕನ್ನಡ ಪಿಚ್ಚರ್‌ ಯುಟ್ಯೂಬ್‌ ಚಾನೆಲ್‌ ಜೊತೆ ಮಾತನಾಡಿದ್ದಾರೆ. 

2 Min read
Author : Padmashree Bhat
Published : Apr 18 2026, 01:07 PM IST
Share this Photo Gallery
  • FB
  • TW
  • Linkdin
  • Whatsapp
16
ಕಾಸ್ಟಿಂಗ್ ಕೌಚ್ ಅನುಭವ ಆಗಿತ್ತು
Image Credit : instagram

ಕಾಸ್ಟಿಂಗ್ ಕೌಚ್ ಅನುಭವ ಆಗಿತ್ತು

ಚಿತ್ರರಂಗವು ಒಂಥರ ಬಣ್ಣದ ಲೋಕ. ಇಲ್ಲಿ ಒಂದಿಷ್ಟು ಕರಾಳ ಮುಖಗಳೂ ಇವೆ. 'ಕಾಂತಾರ' ಸಿನಿಮಾದಲ್ಲಿ 'ವಸಂತಕ್ಕ' ಪಾತ್ರದ ಮೂಲಕ ಜನಪ್ರಿಯರಾದ ಪ್ರತಿಮಾ ಅವರು, ಕಾಸ್ಟಿಂಗ್ ಕೌಚ್ ಮಾದರಿಯ ಕಿರುಕುಳ ಎದುರಿಸಿದ್ದೆ, ನಿರ್ಮಾಪಕ ಬೆದರಿಕೆ ಹಾಕಿದ್ದನು ಎಂದು ಹೇಳಿದ್ದಾರೆ.

26
ಸಾಗರದಲ್ಲಿ ಒಂದಿನ ಆ ನಿರ್ಮಾಪಕ
Image Credit : instagram

ಸಾಗರದಲ್ಲಿ ಒಂದಿನ ಆ ನಿರ್ಮಾಪಕ

ಸಾಗರದಲ್ಲಿ ಒಂದು ಸಿನಿಮಾದ ಶೂಟಿಂಗ್ ನಡೆಯುತ್ತಿದ್ದಾಗ, ದಿನವಿಡೀ ಶೂಟಿಂಗ್ ಮುಗಿಸಿ ಪ್ರತಿಮಾ ನಾಯಕ್ ಅವರು ತಮ್ಮ ರೂಮಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಸರಿಯಾಗಿ‌ ಮಧ್ಯರಾತ್ರಿ 12 ಗಂಟೆಗೆ ಯಾರೋ ಬಂದು ಅವರ ರೂಮ್‌ ಬಾಗಿಲನ್ನು ಜೋರಾಗಿ ಬಡಿದಿದ್ದಾರೆ. ಯಾರೆಂದು ಕಿಟಕಿಯಲ್ಲಿ ನೋಡಿದಾಗ ಅಲ್ಲಿ ಆ ಸಿನಿಮಾದ ನಿರ್ಮಾಪಕ ನಿಂತಿದ್ದಾರೆ. 

ಪ್ರತಿಮಾ ಅವರು ಆಗ "ಯಾಕೆ ಸರ್ ಈ ಟೈಮ್‌ಗೆ ಬಂದಿದ್ದೀರಿ?" ಎಂದು ಪ್ರತಿಮಾ ಕೇಳಿದಾಗ, ಆ ನಿರ್ಮಾಪಕ "ನಿಮ್ಮ ಪಾತ್ರದ ಬಗ್ಗೆ ಡಿಸ್ಕಸ್ ಮಾಡಬೇಕು, ಬಾಗಿಲು ತೆರೆಯಿರಿ" ಎಂದಿದ್ದಾನೆ. ಆಗ ಪ್ರತಿಮಾ ಅವರು "ಸರ್, ಪಾತ್ರದ ಬಗ್ಗೆ ಚರ್ಚೆ ಮಾಡಲು ಇದು ಸಮಯವಲ್ಲ. ಏನಿದ್ದರೂ ಬೆಳಗ್ಗೆ ಡೈರೆಕ್ಟರ್ ಜೊತೆ ಮಾತಾಡಿ. ಈಗ ಬಾಗಿಲು ತೆಗೆಯಲು ಸಾಧ್ಯವಿಲ್ಲ" ಎಂದು ನೇರವಾಗಿ ಹೇಳಿದ್ದಾರೆ. ಇದು ನಿರ್ಮಾಪಕನಿಗೆ ಸಿಟ್ಟು ತರಿಸಿದೆ.

Related Articles

Related image1
800 ಕೋಟಿ ಕ್ಲಬ್‌ಗೆ ಎಂಟ್ರಿ ಕೊಟ್ಟ ಧುರಂಧರ್ ಸಿನಿಮಾ.. ಅಗ್ರಸ್ಥಾನದಲ್ಲಿ ಕಾಂತಾರ ಚಾಪ್ಟರ್ 1
Related image2
ಪೈರಸಿ ವಿರುದ್ಧ ಗರ್ಜಿಸಿದ ‘ಕಾಂತಾರ’ ಸ್ಟಾರ್: ವಿಜಯ್ 'ಜನ ನಾಯಕನ್' ವಿಡಿಯೋ ಲೀಕ್ ಬೆನ್ನಲ್ಲೇ ಕಿಡಿಕಿಡಿಯಾದ ರಿಷಬ್ ಶೆಟ್ಟಿ!
36
ಆ ನೋವಿನಲ್ಲಿ 3km ನಡೆದುಕೊಂಡು ಹೋದೆ
Image Credit : instagram

ಆ ನೋವಿನಲ್ಲಿ 3km ನಡೆದುಕೊಂಡು ಹೋದೆ

ಬಾಗಿಲು ತೆಗೆಯದಿದ್ದಕ್ಕೆ ಆ ನಿರ್ಮಾಪಕ ಪ್ರತಿಮಾ ಅವರ ಮೇಲೆ ಸೇಡು ತೀರಿಸಿಕೊಳ್ಳಲು ರೆಡಿಯಾಗಿದ್ದನು. ಮಾರನೇ ದಿನ ಕಾಡಿನ ಮಧ್ಯೆ ಶೂಟಿಂಗ್ ನಡೆಯುತ್ತಿದ್ದಾಗ ಪ್ರತಿಮಾ ಅವರಿಗೆ ಪಿರಿಯಡ್ಸ್ (Menstruation) ಸಮಸ್ಯೆಯಾಗಿ ಆರೋಗ್ಯ ಹದಗೆಟ್ಟಿತ್ತು. ಅತೀವ ನೋವಿನಲ್ಲಿದ್ದ ಅವರು ರೂಮಿಗೆ ಹೋಗಲು ಗಾಡಿಯ ವ್ಯವಸ್ಥೆ ಮಾಡಿ ಎಂದು ಕೇಳಿಕೊಂಡರು. 

ಆದರೆ, ನಿರ್ಮಾಪಕ ಉದ್ದೇಶಪೂರ್ವಕವಾಗಿಯೇ ಗಾಡಿ ಕಳಿಸದೆ ಸತಾಯಿಸಿದ್ದಾನೆ. ಗಂಟೆಗಳ ಕಾಲ ಕಾದರೂ ಯಾರೂ ಸಹಾಯಕ್ಕೆ ಬಾರದಿದ್ದಾಗ, ಪ್ರತಿಮಾ ಅವರು ಅನಿವಾರ್ಯವಾಗಿ ಆ ಕಾಡಿನ ದಾರಿಯಲ್ಲೇ ಸುಮಾರು 2-3 ಕಿಲೋಮೀಟರ್ ನಡ್ಕೊಂಡು ಮುಖ್ಯ ರಸ್ತೆಗೆ ಬಂದು ತಲುಪಿದ್ದರು.

46
ಇಂಡಸ್ಟ್ರಿಯಲ್ಲಿ ನೀನು ಇಲ್ಲದ ಹಾಗೆ ಮಾಡ್ತೀನಿ
Image Credit : instagram

ಇಂಡಸ್ಟ್ರಿಯಲ್ಲಿ ನೀನು ಇಲ್ಲದ ಹಾಗೆ ಮಾಡ್ತೀನಿ

ಪ್ರತಿಮಾ ಅವರು ಒಬ್ಬರೇ ನಡೆದುಕೊಂಡು ಹೋಗುತ್ತಿರುವುದನ್ನು ಕಂಡು ಗಾಬರಿಯಾದ ನಿರ್ಮಾಪಕ, ಕಾರ್ ತೆಗೆದುಕೊಂಡು ಬಂದು ಅವರನ್ನು ತಡೆದಿದ್ದಾನೆ. ಅಲ್ಲಿಯೂ ಆತನ ಅಹಂಕಾರ ಕಡಿಮೆಯಾಗಿರಲಿಲ್ಲ. "ಏನಮ್ಮಾ ಸೀನ್ ಕ್ರಿಯೇಟ್ ಮಾಡ್ತಾ ಇದ್ದೀಯಾ? ನೀನು ಬಾಗಿಲು ತೆಗಿತಿಯೋ ಇಲ್ವೋ ನೋಡ್ತೀನಿ. ನಿನ್ನನ್ನ ಈ ಇಂಡಸ್ಟ್ರಿಯಲ್ಲಿ ಇಲ್ಲದ ಹಾಗೆ ಮಾಡ್ತೀನಿ" ಎಂದು ಬಹಿರಂಗವಾಗಿಯೇ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಪ್ರತಿಮಾ ಅವರು "ನೋಡಪ್ಪ, ನನಗೆ ಈ ಇಂಡಸ್ಟ್ರಿಯಿಂದಲೇ ಬದುಕು ಆಗಬೇಕಿಲ್ಲ. ನನ್ನ ಕೆಲಸವನ್ನು ನಾನು ದೇವರೆಂದು ನಂಬಿದ್ದೇನೆ. ನೀನು ಏನು ಮಾಡ್ತೀಯೋ ಮಾಡಿಕೋ, ನಾನು ನಿನ್ನ ಗಾಡಿಯಲ್ಲಿ ಬರಲ್ಲ" ಎಂದು ಹೇಳಿದ್ದಾರೆ.

56
ಸುಳ್ಳು ಸುದ್ದಿಗಳ ನಡುವೆಯೂ ಗೆದ್ದು ನಿಂತ ನಟಿ
Image Credit : instagram

ಸುಳ್ಳು ಸುದ್ದಿಗಳ ನಡುವೆಯೂ ಗೆದ್ದು ನಿಂತ ನಟಿ

ಆ ಘಟನೆಯ ನಂತರ ಆ ನಿರ್ಮಾಪಕ ಚಿತ್ರರಂಗದಲ್ಲಿ ಪ್ರತಿಮಾ ನಾಯಕ್ ಅವರ ಬಗ್ಗೆ ಅಪಪ್ರಚಾರ ಮಾಡಿದ್ದರಂತೆ. "ಪ್ರತಿಮಾ ಸೆಟ್ಟಿಗೆ ಬಂದರೆ ಕೆಲಸ ಕೆಡಿಸ್ತಾರೆ, ಕಿರಿಕಿರಿ ಮಾಡ್ತಾರೆ" ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರಂತೆ. ಇದರಿಂದಾಗಿ ಒಂದೆರಡು ವರ್ಷ ಅವರಿಗೆ ಅವಕಾಶಗಳು ಕಡಿಮೆಯಾಗಿದ್ದವು. ಆದರೆ, ಸತ್ಯ ಹೆಚ್ಚು ಕಾಲ ಅಡಗಿರಲಿಲ್ಲ. ಈ ಬಗ್ಗೆ ಪ್ರತಿಮಾ ಅವರೇ ಹೇಳಿಕೊಂಡಿದ್ದಾರೆ.

66
60 ಸಿನಿಮಾಗಳಲ್ಲಿ ನಟನೆ
Image Credit : actress prathima naik instagram

60 ಸಿನಿಮಾಗಳಲ್ಲಿ ನಟನೆ

ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಮತ್ತು ಗಿರೀಶ್ ಕಾಸರವಳ್ಳಿ ಅವರಂತಹ ದಿಗ್ಗಜ ನಿರ್ದೇಶಕರು ಪ್ರತಿಮಾರ ಪ್ರತಿಭೆಯನ್ನು ಗುರುತಿಸಿ ಅವಕಾಶ ನೀಡಿದರು. ಇಂದು ಅವರು 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ತಮ್ಮದೇ ಆದ ಗೌರವ ಸಂಪಾದಿಸಿದ್ದಾರೆ. "ನನ್ನನ್ನು ಪ್ರೀತಿಸುವ ಒಂದು ಗುಂಪು ಇವತ್ತಿಗೂ ನನ್ನ ಕೈ ಬಿಟ್ಟಿಲ್ಲ" ಎನ್ನುವ ಪ್ರತಿಮಾ ನಾಯಕ್, ಶೋಷಣೆಯ ವಿರುದ್ಧ ಧ್ವನಿ ಎತ್ತುವ ಮೂಲಕ ಹೊಸ ಕಲಾವಿದರಿಗೆ ಸ್ಫೂರ್ತಿಯಾಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಸ್ಯಾಂಡಲ್‌ವುಡ್
ಕಾಂತಾರ ಚಲನಚಿತ್ರ
ಕಾಸ್ಟಿಂಗ್ ಕೌಚ್

Latest Videos
Recommended Stories
Recommended image1
INCA Award ಸಮಾರಂಭದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದು ಬೀಗಿದ ರುಕ್ಷ್ಮಿಣಿ ವಸಂತ್
Recommended image2
ಬಿಗ್‌ ಬಾಸ್‌ನಿಂದ 2-3 ಸಲ ಆಫರ್‌ ಬಂದರೂ ‌'ರಾಮಾಚಾರಿ' ನಟ ರಿತ್ವಿಕ್ ಹೋಗದಿರುವ ಸೀಕ್ರೆಟ್ ಕೊನೆಗೂ ಬಯಲಾಯ್ತು!
Recommended image3
ಪ್ರಶಸ್ತಿ ಸ್ವೀಕಾರ ಸಂದರ್ಭದಲ್ಲಿ ಹೊಂಬಾಳೆ ಫಿಲಂಸ್‌ ಹೆಸರು ಹೇಳದ ರಿಷಬ್‌ ಶೆಟ್ಟಿ
Related Stories
Recommended image1
800 ಕೋಟಿ ಕ್ಲಬ್‌ಗೆ ಎಂಟ್ರಿ ಕೊಟ್ಟ ಧುರಂಧರ್ ಸಿನಿಮಾ.. ಅಗ್ರಸ್ಥಾನದಲ್ಲಿ ಕಾಂತಾರ ಚಾಪ್ಟರ್ 1
Recommended image2
ಪೈರಸಿ ವಿರುದ್ಧ ಗರ್ಜಿಸಿದ ‘ಕಾಂತಾರ’ ಸ್ಟಾರ್: ವಿಜಯ್ 'ಜನ ನಾಯಕನ್' ವಿಡಿಯೋ ಲೀಕ್ ಬೆನ್ನಲ್ಲೇ ಕಿಡಿಕಿಡಿಯಾದ ರಿಷಬ್ ಶೆಟ್ಟಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved