ಕ್ಯಾಲಿಫೋರ್ನಿಯಾ ಪ್ರವಾಸದಲ್ಲಿ ಯುವ ಬೆಡಗಿ ಸಪ್ತಮಿ ಗೌಡ ಮೋಜು ಮಸ್ತಿ
ಕಾಂತಾರ ಮತ್ತು ಯುವ ಸಿನಿಮಾ ಮೂಲಕ ಜನಪ್ರಿಯತೆ ಗಳಿಸಿದ ಬೆಡಗಿ ಸಪ್ತಮಿ ಗೌಡ ಸದ್ಯ ಹಾಲಿಡೇ ಮೂಡ್ ನಲ್ಲಿದ್ದು, ಕ್ಯಾಲಿಫೋರ್ನಿಯಾದಲ್ಲಿ ಎಂಜಾಯ್ ಮಾಡ್ತಿದ್ದಾರೆ.

ಕಾಂತಾರ ಸಿನಿಮಾದಲ್ಲಿ ಲೀಲಾ ಆಗಿ ನಟಿಸಿ ಕನ್ನಡಿಗರ ಮನ ಗೆದ್ದ ನಟಿ ಸಪ್ತಮಿ ಗೌಡ (Sapthami Gowda), ಬಳಿಕ ಯುವ ಚಿತ್ರದಲ್ಲಿ ನಟಿಸೋ ಮೂಲಕ ಯುವಕರ ನೆಚ್ಚಿನ ನಟಿಯರ ಸಾಲಿನಲ್ಲಿ ಸೇರಿದ್ರು. ಸಪ್ತಮಿಯ ಪರ್ಸನಾಲಿಟಿ, ಸ್ಟೈಲ್, ನಟನೆಗೆ ಜನರು ಫಿದಾ ಆಗಿದ್ದಾರೆ.
ಸದ್ಯ ಸಿನಿಮಾ, ನಟನೆಯಿಂದ ಬ್ರೇಕ್ ಪಡೆದಿರುವ ನಟಿ ಸಪ್ತಮಿ ಗೌಡ, ತಮ್ಮ ಫ್ಯಾಮಿಲಿ, ಫ್ರೆಂಡ್ಸ್ ಜೊತೆ ಫಾರಿನ್ ಟ್ರಿಪ್ ಎಂಜಾಯ್ ಮಾಡ್ತಿದ್ದಾರೆ. ನ್ಯೂಯಾರ್ಕ್, ಕ್ಯಾಲಿಫೋರ್ನಿಯಾ (California), ಸೈಂಟ್ ಫ್ರಾನ್ಸಿಸ್ಕೋ ಮೊದಲಾದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದು, ಅಲ್ಲಿನ ವಿವಿಧ ತಾಣಗಳಲ್ಲಿ ಎಂಜಾಯ್ ಮಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಬೆಡಗಿ ಸಪ್ತಮಿ, ತಮ್ಮ ಟ್ರಾವೆಲ್ ಫೋಟೊಗಳನ್ನು (travel photos) ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಫೋಟೊ ನೋಡಿ ಅಭಿಮಾನಿಗಳು ಸಹ ಮೆಚ್ಚಿಕೊಂಡಿದ್ದು, ಕಾಮೆಂಟ್ ಮೂಲಕ ಹೊಗಳಿದ್ದಾರೆ.
ಕ್ಯಾಲಿಫೋರ್ನಿಯಾದ ಸುಂದರ ನಗರಗಳಲ್ಲಿ ಸುಂದರ ಪ್ರವಾಸಿ ತಾಣಗಳಲ್ಲಿ ಎಂಜಾಯ್ ಮಾಡುತ್ತಾ, ಅಲ್ಲಿನ ಪರಿಸರ, ಆಹಾರಗಳನ್ನು ತಿಂದು ಎಂಜಾಯ್ ಮಾಡುತ್ತಾ ತಿರುಗಾಡಿದ್ದಾರೆ ಸಪ್ತಮಿ ಗೌಡ.
ಒಂದು ಫೋಟೊದಲ್ಲಿ ಕೆಂಪು ಬಣ್ಣದ ಸ್ವೆಟ್ ಶರ್ಟ್, ಕ್ರೀಂ ಬಣ್ಣದ ಸ್ಕರ್ಟ್ ಧರಿಸಿ ಪೋಸ್ ನೀಡಿದ್ರೆ, ಮತ್ತೊಂದರಲ್ಲಿ ಲೈಟ್ ಪಿಂಕ್ ಟೀ ಶರ್ಟ್ ಜೊತೆಗೆ ಬ್ಲ್ಯಾಕ್ ಪ್ಯಾಂಟ್ ಧರಿಸಿದ್ದಾರೆ. ಮತ್ತೊಂದರಲ್ಲಿ ಡೆನಿಮ್ ಡ್ರೆಸ್ ಜೊತೆಗೆ ಕಪ್ಪು ಬಣ್ಣದ ಸ್ಟಾಕಿಂಗ್ ಧರಿಸಿದ್ರೆ, ಮತ್ತೊಂದರಲ್ಲಿ ಡೆನಿಮ್ ಶಾರ್ಟ್ಸ್ ಜೊತೆಗೆ ಬ್ಯಾಕ್ ಲೆಸ್ ಕ್ರಾಪ್ ಟಾಪ್ ಧರಿಸಿದ್ದಾರೆ.
ಕ್ಯಾಲಿಫೋರ್ನಿಯಾದ ಗೋಲ್ಡನ್ ಗೇಟ್ ಬ್ರಿಡ್ಜ್ (Golden Gate Bridge), ಲೇಕ್ ತಾಹೇ, ರೆಡ್ ಹುಡ್ ನ್ಯಾಷನಲ್ ಪಾರ್ಕ್, ಮೊದಲಾದ ವಿಶ್ವ ಪ್ರಸಿದ್ಧ ತಾಣಗಳಿಗೆ ತೆರಳಿ ಅಲ್ಲಿನ ಸುಂದರ ಪ್ರಕೃತಿ, ಕಟ್ಟಡ, ಪರಿಸರದ ನಡುವೆ ಎಂಜಾಯ್ ಮಾಡಿದ್ದಾರೆ.
ಕಾಂತಾರಾ ಸಿನಿಮಾ ಮೂಲಕ ಭರ್ಜರಿ ಯಶಸ್ಸು ಪಡೆದ ಸಪ್ತಮಿ ಗೌಡ, ನ್ಯಾಷನಲ್ ಲೆವೆಲ್ ಸ್ವಿಮ್ಮರ್ ಆಗಿದ್ದಾರೆ, ಇವರು ಹಲವು ಮೆಡಲ್ ಗಳನ್ನೂ ಕೂಡ ಗೆದ್ದಿದ್ದಾರೆ. ಇವರು ಕನ್ನಡ ಸಿನಿಮಾಕ್ಕೆ ಎಂಟ್ರಿ ಕೊಟ್ಟಿದ್ದು ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ.
ಮೊದಲ ಚಿತ್ರದಲ್ಲಿ ಅಷ್ಟೇನೂ ಯಶಸ್ಸು ಕಾಣದ ಈ ಚೆಲುವೆ, ಮುಂದೆ ಕಾಂತಾರ ಸಿನಿಮಾದಲ್ಲಿ (Kantara Film) ಫಾರೆಸ್ಟ್ ಆಫೀಸರ್ ಲೀಲಾ ಪಾತ್ರದಲ್ಲಿ ಅಭಿನಯಿಸುವ ಮೂಲಕ ಜನಪ್ರಿಯತೆ ಪಡೆದರು, ಇದೀಗ ಕಾಂತಾರ ಚಾಪ್ಟರ್ 1 ರಲ್ಲೂ ಸಪ್ತಮಿ ನಟಿಸುತ್ತಿದ್ದಾರೆ.
ಕನ್ನಡದಲ್ಲಿ ಯುವ ಸಿನಿಮಾದಲ್ಲೂ ಸಪ್ತಮಿ ಗೌಡ ನಟಿಸಿದ್ದರು. ಹಿಂದಿಯಲ್ಲಿ ವ್ಯಾಕ್ಸಿನ್ ವಾರ್ ಸಿನಿಮಾದಲ್ಲಿ ಸಪ್ತಮಿ ನಟಿಸಿದ್ದರು. ಆ ಮೂಲಕ ಬಾಲಿವುಡ್ ಡೆಬ್ಯೂ ಕೂಡ ಮಾಡಿದ್ದರು. ಅಷ್ಟೇ ಅಲ್ಲ ಇದೀಗ ತಮಿಳು ಸಿನಿಮಾ ಒಂದರಲ್ಲೂ ಸಪ್ತಮಿ ಗೌಡ ನಟಿಸುತ್ತಿದ್ದಾರೆ.
ಸಪ್ತಮಿ ಗೌಡ ಇತ್ತೀಚೆಗೆ ಕಾಂಟ್ರವರ್ಸಿಗೆ ಸಿಲುಕಿಕೊಂಡಿದ್ದರು. ಯುವನ ಜೊತೆ ಸಪ್ತಮಿ ಹೆಸರು ತಳುಕು ಹಾಕಿಕೊಂಡಿತ್ತು. ದೊಡ್ಮನೆ ಹುಡುಗನ ಡಿವೋರ್ಸ್ ಗೆ ಸಪ್ತಮಿ ಗೌಡ ಕಾರಣ ಎಂದೂ, ಸಪ್ತಮಿ ಮತ್ತು ಯುವ ಲವ್ ಮಾಡುತ್ತಿರೋದಾಗಿಯೂ ಸುದ್ದಿಯಾಗಿತ್ತು. ಆದರೆ ಸಪ್ತಮಿ ಇದನ್ನೆಲ್ಲಾ ಅಲ್ಲಗಳೆದಿದ್ದರು. ಸದ್ಯಕ್ಕೆ ಈ ಸುದ್ದಿ ತಣ್ಣಗಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.