ಮೊದಲ ಸಿನಿಮಾ ರಿಲೀಸ್ ಮುನ್ನವೇ 3 ಕನ್ನಡ ಸಿನಿಮಾಗೆ ಸಹಿ ಮಾಡಿದ Yasha Shivakumar ಯಾರು?
ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗಿ ಮಿಂಚುತ್ತಿರುವ ಯಶ ಶಿವಕುಮಾರ್. ಈಗ ಪ್ರಜ್ವಲ್‌ಗೂ ಜೋಡಿ...
ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ಕೈ ತುಂಬಾ ಸಿನಿಮಾಗಳನ್ನು ಇಟ್ಟುಕೊಂಡು ಸಖತ್ ಡಿಮ್ಯಾಂಡ್ ಇರುವ ನಟಿ ಅಂದ್ರೆ ಯಶ ಶಿವಕುಮಾರ್.
ಬಹದ್ದೂರು ಗಂಡು, ದಂತಕತೆ, ಪದವಿ ಪೂರ್ವಿ (Padavi Purva) ಮತ್ತು ಭೈರಾಗಿ (Bairaagi) ಸಿನಿಮಾದಲ್ಲಿ ಯಶ ನಟಿಸಿದ್ದಾರೆ.
ಯಶ ನಟಿಸಿರುವ ಒಂದು ಸಿನಿಮಾನೂ ಇನ್ನೂ ಬಿಡುಗಡೆ ಆಗಿಲ್ಲ ಆದರೆ ಅವಕಾಶಗಳು ಹರಿದು ಬರುತ್ತಿರುವುದನ್ನು ನೋಡಿ ಅನೇಕರು ಶಾಕ್ ಆಗಿದ್ದಾರೆ.
ಇದೀಗ ಗಾನ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್‌ಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅರ್ಚನಾ ಮತ್ತು ವೇದಿಕಾ ನಟಿಸುತ್ತಿದ್ದಾರೆ.
ಇತ್ತೀಚಿಗೆ ಬೆಂಗಳೂರಿನ ದೇವಸ್ಥಾನದಲ್ಲಿ ಗಾನ ಸಿನಿಮಾ ಮುಹೂರ್ತ ನಡೆದಿತ್ತು. ಅನೂಪ್ ಸ್ಟ್ಯಾಲಿನ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.
ಜೈ ಅನಂದ್ ಸಿನಿಮ್ಯಾಟೋಗ್ರಫಿ ಮಾಡುತ್ತಿರುವ ಗಾನ ಶೀಘ್ರದಲ್ಲಿ ಚಿತ್ರೀಕರಣ ಆರಂಭಿಸಲಿದ್ದಾರೆ. ಲೋಕೇಶನ್ ಬಗ್ಗೆ ತಂಡ ಮಾಹಿತಿ ನೀಡಿಲ್ಲ.
ರಾಜು ಸೈಂಡ್ ಆಂಡ್ ಲೈಟ್ ಸಿನಿಮಾದಲ್ಲಿ ಯಶ ನಟಿಸಿದ್ದಾರೆ. ಇದು ತುಳು ಸಿನಿಮಾ ಆಗಿದ್ದು ಇದೇ ಫಬ್ರವರಿ 11ರಂದು ಬಿಡುಗಡೆ ಆಗುತ್ತಿದೆ.
ಚಿತ್ರರಂಗದಲ್ಲಿ ಕಾಲಿಡುವ ಮುನ್ನ ಯಶ ಮಾಡಲ್ ಆಗಿ ವೃತ್ತಿ ಆರಂಭಿಸಿದ್ದರು. ಭರತನಾಟ್ಯ ಕಲಿತಿರುವ ಯಶ ಮಲ್ಟಿಟ್ಯಾಲೆಂಟ್ ಹುಡುಗಿ ಎಂದು ಚಿತ್ರರಂಗದಲ್ಲಿ ಮಾತನಾಡಿಕೊಳ್ಳುತ್ತಾರೆ.