ನಟಿ ವೇದಿಕಾಗೆ ಕೊರೋನಾ ಪಾಸಿಟಿವ್; ಹೈ ಫೀವರ್ ಮೈ ಕೈ ನೋವು ಎಂದ ಚೆಲುವೆ
ಒಬ್ಬರಿರಲ್ಲಿ 100 ಜನರಿರಲ್ಲಿ ಮಾಸ್ಕ್ ಧರಿಸುವುದನ್ನು ನಿರ್ಲಕ್ಷ್ಯ ಮಾಡಬೇಡಿ. ಕೋವಿಡ್ ಸೋಂಕು ತಗುಲಿರುವುದರ ಬಗ್ಗೆ ಬರೆದುಕೊಂಡ ನಟಿ...
ಸಂಗಮಾ, ಶಿವಲಿಂಗ್, ಗೌಡರ ಹೋಟೆಲ್ ಮತ್ತು ಹೋಮ್ ಮಿನಿಸ್ಟರ್ ಸಿನಿಮಾದಲ್ಲಿ ಅಭಿನಯಿಸಿರುವ ನಟಿ ವೇದಿಕಾಗೆ ಕೊರೋನಾ ಸೋಂಕು ತಗುಲಿದೆ.
'ಎಲ್ಲರಿಗೂ ನಮಸ್ಕಾರ. ದುರಾದೃಷ್ಟ ನನಗೆ ಕೊರೋನಾ ಸೋಂಕು ತಗುಲಿದೆ. ಇದೇ ಮೊದಲ ಸಲ. ಎಲ್ಲರಿಗೂ ಸಣ್ಣ ಪುಟ್ಟ ರೋಗಲಕ್ಷಣಗಳು ಇರುವುದಿಲ್ಲ' ಎಂದು ಬರೆದುಕೊಳ್ಳು ಮೂಲಕ ಅಭಿಮಾನಿಗಳಿಗೆ ವಿಚಾರ ಮುಟ್ಟಿಸಿದ್ದಾರೆ.
'ಕಳೆದು ಮೂರ್ನಾಲ್ಕು ದಿನಗಳಿಂದ ನನಗೆ ಹೈ ಫೀವರ್ ಬರುವುದು ಹೋಗುವುದು ಆಗುತ್ತಿದೆ. ರೋಗಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬೇಡಿ'
'ನನಗೆ 103 ಡಿಗ್ರಿ ಜ್ವರ ಇದೆ ಮೈಕೈ ನೋವು ಹೆಚ್ಚಾಗಿದೆ. ಒಂದು ಸಲ ಸೋಂಕು ತಗುಲಿದರೆ ಮತ್ತೆ ಬರುವುದಿಲ್ಲ ಅಂದುಕೊಳ್ಳಬೇಡಿ'
'ಕೆಲವರಿಗೆ ಎರಡು ಮೂರು ಸಲ ಕೊರೋನಾ ಬಂದಿರುವುದು ನಾನು ನೋಡಿದ್ದೀನಿ. ಜನರ ತಪ್ಪ ಸಲಹೆಗೆ ಬೀಳಬೇಡಿ. ಸಾರಿ ಹೇಳುವ ಬದಲು ರುಕ್ಷಿತವಾಗಿರುವುದೇ ಬೆಸ್ಟ್'
'ಒಬ್ಬರಿರಲ್ಲಿ 100 ಜನರಿರಲ್ಲಿ ತಪ್ಪದೆ ಮಾಸ್ಕ್ ಧರಿಸಿ. ನಿಮ್ಮಗಲ್ಲದಿದ್ದರೂ ನಿಮ್ಮ ಪ್ರೀತಿ ಪಾತ್ರರಿಗಾದರೂ ಈ ರೀತಿ ಮಾಡಿ. ಇಂದು ನಾನು ಆರಾಮ್ ಆಗಿರುವೆ, ಬೇಗ ಚೇತರಿಸಿಕೊಳ್ಳುವೆ' ಎಂದು ವೇದಿಕಾ ಬರೆದುಕೊಂಡಿದ್ದಾರೆ.