Upendra ಮನೆಯಲ್ಲಿ ಸಂಕ್ರಾಂತಿ ಸಂಭ್ರಮ!
ಮಕರ ಸಂಕ್ರಾಂತಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ ಉಮೇಂದ್ರ ಮತ್ತು ಪ್ರಿಯಾಂಕಾ. ಫ್ಯಾಮಿಲಿ ಫೋಟೋ ವೈರಲ್....
ಸ್ಯಾಂಡಲ್‌ವುಡ್ ರಿಯಲ್ ಸ್ಟಾರ್ ಉಪೇಂದ್ರ (Upendra) ಮತ್ತು ಬೆಂಗಾಲಿ ಬೆಡಗಿ ಪ್ರಿಯಾಂಕಾ (Priyanka) ಉಪೇಂದ್ರ ಅದ್ಧೂರಿಯಾಗಿ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ..
ಮನೆಯಲ್ಲಿ ಹಬ್ಬ ಆಚರಣೆ ಮಾಡಿದ್ದು, ಪುತ್ರ ಆಯುಷ್ (Ayush) ಮತ್ತು ಪುತ್ರಿ ಐಶ್ಚರ್ಯಾ (Aishwarya) ಹಳ್ಳಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಕೇಸರಿ ಬಣ್ಣದ ಸೀರೆಯಲ್ಲಿ (Saree) ಪ್ರಿಯಾಂಕಾ ಹಾಗೂ ಹಳದಿ ಬಣ್ಣದ ಶೇರ್ವಾನಿಯಲ್ಲಿ (Sherwani) ರಿಯಲ್ ಸ್ಟಾರ್ ಮಿಂಚುತ್ತಿದ್ದಾರೆ.
ಇಡೀ ಮನೆಯನ್ನು ಹೂವಿನಿಂದ (Flower) ಅಲಂಕರಿಸಲಾಗಿತ್ತು.ಹಾಗೆಯೇ ದೇವರ ಮನೆ ಬಾಗಿಲಿಗೆ ಕಬ್ಬಿನ (Sugarcane) ಅಲಂಕಾರ ಮಾಡಿದ್ದಾರೆ.
ಸಿನಿಮಾ ಮತ್ತು ರಾಜಕೀಯ ಕ್ಷೇತ್ರದಲ್ಲಿ ಬ್ಯುಸಿಯಾಗಿರುವ ಉಪೇಂದ್ರ ಪ್ರತಿ ಹಬ್ಬವನ್ನೂ ಮಿಸ್ ಮಾಡದೇ ಕುಟುಂಬಸ್ಥರ ಜೊತೆ ಆಚರಿಸುತ್ತಾರೆ.
ಬೆಂಗಾಳಿ ಬೆಡಗಿ ಪ್ರಿಯಾಂಕಾ ಅವರು ಯಾವ ಸಣ್ಣ ಹಬ್ಬವನ್ನೂ ಮಿಸ್ ಮಾಡುವುದಿಲ್ಲ. ಪ್ರತಿ ಹಬ್ಬವನ್ನೂ ಅದ್ಧೂರಿಯಾಗಿಯೇ ಆಚರಿಸಿ ಕುಟುಂಬಸ್ಥರು ಹಾಗೂ ಸಿನಿ ಸ್ನೇಹಿತರನ್ನು ಆಹ್ವಾನಿಸುತ್ತಾರೆ.