ನಟಿ ಶ್ವೇತಾ ಶ್ರೀವಾತ್ಸವ್ ಪುತ್ರಿ ಅಶ್ಮಿತಾ ಚಿತ್ರರಂಗಕ್ಕೆ ಎಂಟ್ರಿ?
ಮಗಳು ಅದ್ಭುತವಾಗಿ ಇಮಿಟೇಟ್ ಮಾಡುತ್ತಾಳೆ. ಅಶ್ಮಿಕಾ ಸಿನಿ ಎಂಟ್ರಿ ಬಗ್ಗೆ ಕ್ಲಾರಿಟಿ ಕೊಟ್ಟ ನಟಿ ಶ್ವೇತಾ ಶ್ರೀವಾತ್ಸವ್...

'ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ನಟಿ ಶ್ವೇತಾ ಶ್ರೀವಾತ್ಸವ್ (Shwetha Srivatsav) ಪುತ್ರಿ ಈಗ ಸೆಲೆಬ್ರಿಟಿ ಕಿಡ್.
ಶ್ವೇತಾ ಮತ್ತು ಅಮಿತ್ ಶ್ರೀವಾತ್ಸವ್ ಪುತ್ರಿ ಅಶ್ಮಿಕಾ (Ashmitha Srivatsav) ಹುಟ್ಟಿದ ದಿನದಿಂದಲ್ಲೂ ಸೆಲೆಬ್ರಿಟಿ ಕಿಡ್. ಇನ್‌ಸ್ಟಾಗ್ರಾಂನಲ್ಲಿ 1 ಲಕ್ಷ 76 ಸಾವಿರ ಫಾಲೋವರ್ಸ್‌ನ ಹೊಂದಿದ್ದಾಳೆ ಈ ಪುಟ್ಟಾಣಿ.
ನಾಲ್ಕು ವರ್ಷದ ಅಶ್ಮಿಕಾ ಫೋಟೋ ಮತ್ತು ವಿಡಿಯೋ ನೋಡಿ ನೆಟ್ಟಿಗರು ಆಕೆ ಸಿನಿಮಾಗಳಲ್ಲಿ ನಟಿಸಬೇಕು ಎಂದು ಕಾಮೆಂಟ್ಸ್ ಮೂಲಕ ತಮ್ಮ ಆಸೆ ವ್ಯಕ್ತ ಪಡಿಸುತ್ತಿದ್ದಾರೆ.
'ಅಶ್ಮಿತಾ ತುಂಬಾ ಚೆನ್ನಾಗಿ ಅಭಿನಯಿಸುತ್ತಾಳೆ. ಅವಳಿಗೆ ಅಭಿನಯ ಅಂದ್ರೆ ಗೊತ್ತಿಲ್ಲ ಆದರೂ ಬೇರೆಯವರ ರೀತಿ ಇಮಿಟೇಟ್ ಮಾಡುತ್ತಾಳೆ' ಎಂದು ಶ್ವೇತಾ ಖಾಸಗಿ ವೆಬ್ ಸಂದರ್ಶನದಲ್ಲಿ ಹೇಳಿದ್ದಾರೆ.
'ಅಜ್ಜಿ ರೀತಿ ಇಮಿಟೇಟ್ ಮಾಡುತ್ತಾಳೆ. ಮೂಖದಲ್ಲಿ ಹಲವು ಭಾವನೆಗಳನ್ನು ತೋರಿಸುತ್ತಾಳೆ. ಅವಳು ಮುಂದೆ ಏನು ಆಗುತ್ತಾಳೋ ಗೊತ್ತಿಲ್ಲ' ಎಂದಿದ್ದಾರೆ ಶ್ವೇತಾ.
'7-8 ವರ್ಷದಲ್ಲಿದ್ದಾಗ ಅವಳು ಸಿನಿಮಾದಲ್ಲಿ ನಟಿಸಲಿ ಅನ್ನುವ ಆಸೆ ಇದೆ. ಆದರೆ ಅವಳಿಗೆ ತಕ್ಕನಾದ ಉತ್ತಮ ಕಥೆ ಬಂದರೆ ಮಾತ್ರ ಅಶ್ಮಿತಾ ನಟಿಸುತ್ತಾಳೆ' ಎಂದು ಶ್ವೇತಾ ಕ್ಲಾರಿಟಿ ಕೊಟ್ಟಿದ್ದಾರೆ.
'ಅಶ್ಮಿತಾ ಸಿನಿಮಾದಲ್ಲಿ ನಟಿಸಲು ಕಳುಹಿಸುತ್ತೇನೆ ಆದರೆ ಒತ್ತಾಯ ಮಾಡುವುದಿಲ್ಲ. ಮುಂದದೆ ಅವಳು ಸಿನಿಮಾ ರಂಗದಲ್ಲಿ ಇರಬೇಕು ಎಂದೇನನು ಇಲ್ಲ' ಎಂದು ಶ್ವೇತಾ ಮಾತನಾಡಿದ್ದಾರೆ.