ಮಿಸ್ ಮಾಡದೆ ನೋಡಲೇ ಬೇಕು Puneeth Rajkumar ನಟನೆಯ ಈ ಟಾಪ್ 13 ಸಿನಿಮಾ
ಬೆಟ್ಟದ ಹೂವು ಚಿತ್ರದ ಮೂಲಕ ಬಾಲ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಲೋಹೀತ್ ಅಪ್ಪು ಚಿತ್ರದ ಮೂಲಕ ನಾಯಕನಾಗಿ ಲಾಂಚ್ ಆದರು. ತಮ್ಮ ಸ್ವಂತ ಬ್ಯಾನರ್‌ನಲ್ಲಿ ಲಾಂಚ್ ಆದ ಅಪ್ಪು ಅಂದಿನಿಂದ ನಟಿಸಿದ ಪ್ರತಿಯೊಂದು ಸಿನಿಮಾವೂ ಸೂಪರ್ ಹಿಟ್.

1985ರಲ್ಲಿ ಬಿಡುಗಡೆಯಾದ ಬೆಟ್ಟದ ಹೂವು (Bettada hoovu) ಎನ್.ಲಕ್ಷ್ಮಿನಾರಾಯಣ (S. LakshmiNarayana) ನಿರ್ದೇಶನ ಮಾಡಿದ್ದಾರೆ.
1982ರಲ್ಲಿ ರಿಲೀಸ್ ಆದ ಚಲಿಸುವ ಮೋಡಗಳು (Chalisuva Modagalu) ಸಂಗೀತಮ್ ಶ್ರೀನಿವಾಸ್ ರಾವ್ (Singeetam Srinivasa Rao)
1983ರಲ್ಲಿ ಬಿಡುಗಡೆಯಾದ ಭಕ್ತ ಪ್ರಹ್ಲಾದ (Bhakta Prahlada) ವಿಜಯ್ ನಿರ್ದೇಶನ ಮಾಡಿದ ಈ ಚಿತ್ರದಲ್ಲಿ ಡಾ.ರಾಜ್‌ಕುಮಾರ್ ಕೂಡ ನಟಿಸಿದ್ದಾರೆ.
2002ರಲ್ಲಿ ಬಿಡುಗಡೆಯಾದ ಅಪ್ಪು (Appu). ಪೂರಿ ಜನಾರ್ಧನ್ ನಿರ್ದೇಶಿಸಿದ ಈ ಚಿತ್ರದಲ್ಲಿ ರಕ್ಷಿತ್ ಪ್ರೇಮ್ ಮತ್ತು ಪುನೀತ್ ಇಬ್ಬರು ಚಿತ್ರರಂಗಕ್ಕೆ ಲಾಂಚ್ ಆದರು.
2003ರಲ್ಲಿ ಬಿಡುಗಡೆಯಾದ ಅಭಿ(Abhi) ಸಿನಿಮಾ. ದಿನೇಶ್ ಬಾಬು ನಿರ್ದೇಶಿಸಿರುವ ಈ ಚಿತ್ರಲ್ಲಿ ಅಪ್ಪುಗೆ ಜೋಡಿಯಾಗಿ ರಮ್ಯಾ ನಟಿಸಿದ್ದಾರೆ.
2005ರಲ್ಲಿ ಬಿಡುಗಡೆಯಾದ ಆಕಾಶ್ (Akash) ಸಿನಿಮಾ. ಮಹೇಶ್ ಬಾಬು ನಿರ್ದೇಶನದ ಈ ಚಿತ್ರದಲ್ಲಿಯೂ ರಮ್ಯಾ ಜೋಡಿಯಾಗಿ ನಟಿಸಿದ್ದಾರೆ.
2007ರಲ್ಲಿ ಬಿಡುಗಡೆಯಾದ ಅರಸು (Arasu) ಸಿನಿಮಾ. ಮಹೇಶ್ ಬಾಬು ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಮೀರಾ ಜಾಸ್ಮಿನ್ ಮತ್ತು ರಮ್ಯಾ ನಟಿಸಿದ್ದಾರೆ.
2010ರಲ್ಲಿ ಬಿಡುಗಡೆಯಾದ ಪೃಥ್ವಿ (Prithvi). ಜಾಕೋಬ್ (Jacob) ನಿರ್ದೇಶಿಸಿರುವ ಈ ಚಿತ್ರದಲ್ಲಿ ಪಾರ್ವತಿ ನಟಿಸಿದ್ದಾರೆ.
2007ರಲ್ಲಿ ಬಿಡುಗಡೆಯಾದ ಮಿಲನ (Milana). ಪ್ರಕಾಶ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ಮತ್ತೆ ಪಾರ್ವತಿ ಜೋಡಿಯಾಗಿ ನಟಿಸಿದ್ದಾರೆ.
2010ರಲ್ಲಿ ಬಿಡುಗಡೆಯಾದ ಜಾಕಿ (Jackie). ದುನಿಯಾ ಸೂರಿ (Duniya Suri) ನಿರ್ದೇಶನ ಮಾಡಿದ ಈ ಚಿತ್ರಕ್ಕೆ ಭಾವನ ನಟಿಸಿದ್ದಾರೆ.
2021ರಲ್ಲಿ ಬಿಡುಗಡೆಯಾದ ಯುವರತ್ನ (Yuvarathnaa). ಈ ಚಿತ್ರಕ್ಕೂ ಸಂತೋಷ್ ಆನಂದ್‌ರಾಮ್ (Santhosh Anandraam) ಅವರೇ ನಿರ್ದೇಶನ ಮಾಡಿದ್ದಾರೆ.
2011ರಲ್ಲಿ ಬಿಡುಗಡೆಯಾದ ಪರಮಾತ್ಮ (Paramathma) ಸಿನಿಮಾ. ಯೋಗರಾಜ್ ಭಟ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ದೀಪಾ ಸನ್ನಿಧಿ ಕೂಡ ನಟಿಸಿದ್ದಾರೆ.
2017ರಲ್ಲಿ ಬಿಡುಗಡೆಯಾದ ರಾಜಕುಮಾರ (Raajakumara) ಸಿನಿಮಾ. 75 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರಕ್ಕೆ ಸಂತೋಷ್ ಆನಂದ್‌ರಾಮ್ ನಿರ್ದೇಶನ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.