ಮದ್ವೆ ಆದ್ಮೇಲೆ ರೇವತಿ ಜೊತೆ ನಿಖಿಲ್ ಮೊದಲ ಟ್ರಿಪ್; ಬಿಡದಿ ತೋಟದಲ್ಲಿ!
ಮದುವೆ ನಿಶ್ಚಯವಾದ್ಮೇಲೆ ಭಾವೀ ಪತ್ನಿಯೊಂದಿಗೆ ಒಂದಲ್ಲೊಂದು ಫೋಟೋ ಶೇರ್ ಮಾಡಿ ಕೊಳ್ಳುತ್ತಿದ್ದ ನಿಖಿಲ್, ಮದ್ವೆ ಆದ್ಮೇಲೆ ಫುಲ್ ಸೈಲೆಂಟ್ ಆಗ್ಬಿಟ್ಟಿದ್ದರು. ಅರೇ, ಎಲ್ಲೋದ್ರಪ್ಪ ಸ್ಯಾಂಡಲ್‌ವುಡ್ ಯುವರಾಜ ಎಂದು ಕೊಳ್ಳುತ್ತಿದ್ದ ಅಭಿಮಾನಿಗಳಿಗೆ, ಇಲ್ಲೇ ಬಿಡದಿ ತೋಟದಲ್ಲಿದ್ದೇನೆ ಎಂದು ಉತ್ತರಿಸಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ. ಸೋಷಿಯಲ್ ಮೀಡಿಯಾದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ ಜಾಗ್ವಾರ್ ಹೀರೋ...
ಲಾಕ್‌ಡೌನ್‌ನಲ್ಲಿ ಪತ್ನಿ ರೇವತಿ ಜೊತೆ ನಿಖಿಲ್ ಕುಮಾರಸ್ವಾಮಿ.
ಬಿಡದಿ ತೋಟದ ಮನೆಯ ಆವರಣದಲ್ಲಿ ಇಬ್ಬರು ಕಳೆದ ಸುಂದರ ಕ್ಷಣಗಳು.
ಇನ್‌ಸ್ಟಾಗ್ರಾಂನಲ್ಲಿ ನಿಖಿಲ್ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ಲಾಕ್‌ಡೌನ್‌ನಿಂದಾಗಿ ರಾಮನಗರದ ತೋಟದಲ್ಲಿ ಏಪ್ರಿಲ್ 17ರಂದು ಸರಳ ವಿವಾಹವಾದರು.
ಆದರೆ ಹೊರ ರಾಜ್ಯ ಅಥವಾ ವಿದೇಶ ಟ್ರಿಪ್ ಹೋಗಲು ಸಾಧ್ಯವಾಗಿರಲಿಲ್ಲ.
ಮದುವೆ ನಂತರ ರೇವತಿ ಅತ್ತೆ ಅನಿತಾ ಕುಮಾರಸ್ವಾಮಿ ಅವರೊಂದಿಗೆ ಸಾಮಾಜಿಕ ಚಟುಚಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ.
ಅದ್ಧೂರಿ ಮದುವೆಯ ವೆಚ್ಚದಲ್ಲಿ ಬಡವರಿಗೆ, ನಿರ್ಗತಿಕರಿಗೆ ಬೇಳೆ ಕಾಳು ವಿತರಿಸಿ ಸಹಾಯ ಮಾಡಿದ್ದಾರೆ.
ರಾಮನಗರದ ಜನರಿಗೆ ಫುಡ್ ಕಿಟ್ ವಿತರಿಸಿದೆ ಕುಮಾರಸ್ವಾಮಿ ಕುಟುಂಬ.
ಲಾಕ್‌ಡೌನ್ ತೆರವಾದ ನಂತರ ನಿಖಿಲ್ ಚಿತ್ರ ಶೂಟಿಂಗ್‌ನಲ್ಲಿ ಬ್ಯುಸಿಯಾಗುವ ಸಾಧ್ಯತೆಗಳಿದ್ದು, ಪತ್ನಿಗೆ ಈಗಲೇ ಟೈಂ ನೀಡುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ನಿಖಿಲ್-ರೇವತಿ ಮದುವೆ ಫೋಟೋಗಳೂ ವೈರಲ್ ಆಗುತ್ತಿವೆ.