MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ಡಿಸೈನ್ ಡಿಸೈನ್ ನಿಂದನೆ, 15 ವರ್ಷದಲ್ಲಿ ಎಷ್ಟೊಂದು ಬದಲಾವಣೆ: ವ್ಯತ್ಯಾಸ ಹೇಳಿದ ಕವಿರಾಜ್

ಡಿಸೈನ್ ಡಿಸೈನ್ ನಿಂದನೆ, 15 ವರ್ಷದಲ್ಲಿ ಎಷ್ಟೊಂದು ಬದಲಾವಣೆ: ವ್ಯತ್ಯಾಸ ಹೇಳಿದ ಕವಿರಾಜ್

ಗೀತ ರಚನೆಕಾರ ಕವಿರಾಜ್ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ, 15 ವರ್ಷಗಳ ಹಿಂದೆ ಅಣ್ಣಾ ಹಜಾರೆ ಹೋರಾಟ ಬೆಂಬಲಿಸಿದಾಗ ಸಿಕ್ಕ ಪ್ರತಿಕ್ರಿಯೆಗೂ, ಇಂದು ಸೋನಮ್ ವಾಂಗ್‌ಚುಕ್ ಹೋರಾಟ ಬೆಂಬಲಿಸಿದಾಗ ಸಿಗುತ್ತಿರುವ ದ್ವೇಷದ ಪ್ರತಿಕ್ರಿಯೆಗೂ ಇರುವ ವ್ಯತ್ಯಾಸವನ್ನು ವಿವರಿಸಿದ್ದಾರೆ.

2 Min read
Author : Mahmad Rafik
Published : Jul 20 2026, 11:19 AM IST
Share this Photo Gallery
  • FB
  • TW
  • Linkdin
  • Whatsapp
15
ಗೀತ ರಚನೆಕಾರ ಕವಿರಾಜ್ ಪೋಸ್ಟ್
Image Credit : Kaviraj FB

ಗೀತ ರಚನೆಕಾರ ಕವಿರಾಜ್ ಪೋಸ್ಟ್

ಚಂದನವನ ಸಿನಿಮಾಗಳಿಗೆ ಸುಂದರ ಹಾಡುಗಳನ್ನು ನೀಡಿರುವ ಗೀತ ರಚನೆಕಾರ ಕವಿರಾಜ್ ಅವರ ಫೇಸ್‌ಬುಕ್ ಪೋಸ್ಟ್ ವೈರಲ್ ಆಗುತ್ತಿದೆ. 15 ವರ್ಷಗಳಲ್ಲಿ ಎಷ್ಟೊಂದು ಬದಲಾಗಿದೆ ಎಂಬ ಶೀರ್ಷಿಕೆಯಲ್ಲಿ ತಮ್ಮ ಅನುಭವಗಳನ್ನು ಕವಿರಾಜ್ ಹಂಚಿಕೊಂಡಿದ್ದಾರೆ. 2011 ಮತ್ತು 2013 ಹಾಗೂ 2026ರಲ್ಲಿ ಮಾಡಿದ ಪೋಸ್ಟ್‌ ನಡುವಿನ ವ್ಯತ್ಯಾಸವನ್ನು ಕವಿರಾಜ್ ವಿವರವಾಗಿ ಬರೆದುಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಕವಿರಾಜ್ ಎಫ್‌ಬಿ ಪೋಸ್ಟ್‌ನಲ್ಲಿ ಏನಿದೆ?
Image Credit : Kaviraj FB

ಕವಿರಾಜ್ ಎಫ್‌ಬಿ ಪೋಸ್ಟ್‌ನಲ್ಲಿ ಏನಿದೆ?

15 ವರ್ಷಗಳಲ್ಲಿ ದೇಶ ಎಷ್ಟೊಂದು ಬದಲಾಗಿದೆ. ಜನ ಎಷ್ಟೊಂದು ಬದಲಾಗಿದ್ದಾರೆ. 2011 ಮತ್ತು 2013ರಲ್ಲಿ ನಾನು ಫೇಸ್ ಬುಕ್ ಅಲ್ಲಿ ಮಾಡಿದ ಪೋಸ್ಟ್ ಗಳು ಇವು. ಅಣ್ಣಾ ಹಜಾರೆಯವರ ನಿರಶನ ಬೆಂಬಲಿಸಿ ಮೂರ್ನಾಲ್ಕು ದಿನ ಫ್ರೀಡಂ ಪಾರ್ಕ್ ಅಲ್ಲಿ ಕುಳಿತಿದ್ದೆ. ಅವತ್ತು ಯುಪಿಎ ಅಧಿಕಾರದಲ್ಲಿತ್ತು. ಆ ಸರಕಾರವನ್ನು ಬೈದು ಭಾಷಣ ಕೂಡಾ ಮಾಡಿದ್ದೆ. ಭ್ರಷ್ಟಾಚಾರ ತೊಲಗಬೇಕು ಎಂಬ ನಮ್ಮ ಹಂಬಲ, ಬೆಂಬಲ, ಬದ್ಧತೆ ಮಾತ್ರ ಶುದ್ದವಾಗಿತ್ತು. ಅವತ್ತು ಯಾರೂ ನಿಂದಿಸಿರಲಿಲ್ಲ, ಯಾರೂ ದ್ವೇಷಿಸಿರಲಿಲ್ಲ.

Related Articles

Related image1
Sonam Wangchuk: ಮೆಡಿಕಲ್ ರಿಪೋರ್ಟ್‌ನಲ್ಲಿ ಬಿಗ್ ಟ್ವಿಸ್ಟ್: ಆಸ್ಪತ್ರೆಗೆ ದಾಖಲಾದ ಸೋನಮ್ ವಾಂಗ್ಚುಕ್ ಹೆಲ್ತ್ ಬುಲೆಟಿನ್‌ನಲ್ಲಿ ಏನಿದೆ?
Related image2
ಹಠ ಬಿಡದ ಸೋನಮ್ ವಾಂಗ್ಚುಕ್: ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ನಿರಾಕರಣೆ, ಭಾರೀ ಪ್ರಮಾಣದಲ್ಲಿ ಕುಸಿದ ಶುಗರ್‌ ಲೆವಲ್‌
35
ಡಿಸೈನ್ ಡಿಸೈನ್ ನಿಂದನೆ
Image Credit : Kaviraj FB

ಡಿಸೈನ್ ಡಿಸೈನ್ ನಿಂದನೆ

ಇವತ್ತು ಹೆಚ್ಚು ಕಡಿಮೆ ಅಂತದ್ದೇ ಹೋರಾಟ, ಅದನ್ನು ಬೆಂಬಲಿಸಿ ಪೋಸ್ಟ್ ಹಾಕಿದರೆ ಡಿಸೈನ್ ಡಿಸೈನ್ ನಿಂದನೆ, ದ್ವೇಷ. ಪರವಾಗಿಲ್ಲ. ಇದೆಲ್ಲ ಅಭ್ಯಾಸವಾಗಿದೆ. ಅವತ್ತೂ ನಾನು ಅನ್ಯಾಯದ ವಿರುದ್ಧ, ಇವತ್ತೂ ಕೂಡಾ. ಅಕ್ಕ ಮಹಾದೇವಿ ಹೇಳಿದಂತೆ, ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆಂತಯ್ಯ.

45
ಯಾಕೆ ಈ ಪೋಸ್ಟ್?
Image Credit : Kaviraj FB

ಯಾಕೆ ಈ ಪೋಸ್ಟ್?

ಜುಲೈ 15ರಂದು ದೆಹಲಿಯ ಜಂತರ್‌ಮಂತರ್‌ನಲ್ಲಿ ನಡೆಯುತ್ತಿರುವ ಸಿಜೆಪಿ ಹೋರಾಟ ಮತ್ತು ಶಿಕ್ಷಣ ತಜ್ಞ ಸೋನಮ್ ವಾಂಗ್‌ಚುಕ್ ಉಪವಾಸ ಸತ್ಯಾಗ್ರಹದ ಕುರಿತು ಕವಿರಾಜ್ ತಮ್ಮ ಅಭಿಪ್ರಾಯವನ್ನು ಫೇಸ್‌ಬುಕ್ ಪೋಸ್ಟ್ ಮೂಲಕ ವ್ಯಕ್ತಪಡಿಸಿದ್ದರು. ಹಾಗೆಯೇ ನ್ಯಾಯ ಕೇಳುವವರು, ಆಳುವರರನ್ನು ಪ್ರಶ್ನಿಸುವವರೆಲ್ಲ ದೇಶದ್ರೋಹಿಗಳೆನ್ನುವ ಹೀನ ಮನಸ್ಥಿತಿಯ ಜನ ಅದನ್ನು ಸಂಭ್ರಮಿಸಲು ಕಾತುರರಾಗಿದ್ದಾರೆ. ಈ ದೇಶಕ್ಕೆ, ನಿಜಕ್ಕೂ ದೇಶದ ಒಳಿತು ಬಯಸುವವರಿಗೆ ನೀವು ಬೇಕು ಎಂದಿದ್ದರು.

55
ನೆಗೆಟಿವ್ ಕಮೆಂಟ್
Image Credit : Kaviraj FB

ನೆಗೆಟಿವ್ ಕಮೆಂಟ್

ಕವಿರಾಜ್ ಅವರ ಈ ಪೋಸ್ಟ್‌ಗೆ ಪರ-ವಿರೋಧ ಕಮೆಂಟ್‌ಗಳು ಬಂದಿವೆ. ಈ ಕಮೆಂಟ್ ಗಮನಿಸಿದ ಕವಿರಾಜ್, ಈ ಹಿಂದೆ 2011 ಮತ್ತು 2013ರಲ್ಲಿ ಅಣ್ಣಾ ಹಜಾರೆ ಉಪವಾಸ ಕುರಿತ ಬರೆದುಕೊಂಡ ಪೋಸ್ಟ್‌ಗೆ ಬಂದ ಕಮೆಂಟ್‌ಗಳ ಜೊತೆ ಹೋಲಿಕೆ ಮಾಡಿದ್ದಾರೆ. ಕಳೆದ 15 ವರ್ಷಗಳಲ್ಲಿ ದೇಶ ಮತ್ತು ದೇಶದ ಜನತೆ ಬದಲಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 'ಕೀಬೋರ್ಡ್ ಶೂರರಿಗೆ ಐಶ್ವರ್ಯಾ ಸಿಂಧೋಗಿ ಖಡಕ್ ವಾರ್ನಿಂಗ್.. 'ನಕಲಿ ಫ್ರೊಫೈಲ್' ಖದೀಮರ ವಿರುದ್ಧ ಕೇಸ್!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಸೋನಮ್ ವಾಂಗ್ಚುಕ್
ವೈರಲ್ ಸುದ್ದಿ
ನೀಟ್

Latest Videos
Recommended Stories
Recommended image1
'ಕೀಬೋರ್ಡ್ ಶೂರರಿಗೆ ಐಶ್ವರ್ಯಾ ಸಿಂಧೋಗಿ ಖಡಕ್ ವಾರ್ನಿಂಗ್.. 'ನಕಲಿ ಫ್ರೊಫೈಲ್' ಖದೀಮರ ವಿರುದ್ಧ ಕೇಸ್!
Recommended image2
ಹೀರೋಗಳೇ, ಕ್ಯಾರವಾನ್ ಬಿಟ್ಟು ಆಚೆ ಬನ್ನಿ, ಸಿನಿಮಾ ನಿರ್ಮಿಸಿ: ನಿರ್ಮಾಪಕ ರಮೇಶ್ ಯಾದವ್‌
Recommended image3
ಯಶ್ ಅಭಿಮಾನಿಗಳಿಗೆ ಗುಡ್ ನ್ಯೂಸ್: 'ಟಾಕ್ಸಿಕ್' ಟ್ರೇಲರ್‌ ಬಗ್ಗೆ ಬಂತು ದೊಡ್ಡ ಅಪ್‌ಡೇಟ್!
Related Stories
Recommended image1
Sonam Wangchuk: ಮೆಡಿಕಲ್ ರಿಪೋರ್ಟ್‌ನಲ್ಲಿ ಬಿಗ್ ಟ್ವಿಸ್ಟ್: ಆಸ್ಪತ್ರೆಗೆ ದಾಖಲಾದ ಸೋನಮ್ ವಾಂಗ್ಚುಕ್ ಹೆಲ್ತ್ ಬುಲೆಟಿನ್‌ನಲ್ಲಿ ಏನಿದೆ?
Recommended image2
ಹಠ ಬಿಡದ ಸೋನಮ್ ವಾಂಗ್ಚುಕ್: ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ನಿರಾಕರಣೆ, ಭಾರೀ ಪ್ರಮಾಣದಲ್ಲಿ ಕುಸಿದ ಶುಗರ್‌ ಲೆವಲ್‌
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved