ಮಹಾಸತಿ ನಟಿ Deepa Jagadeesh-ಸಾಗರ್ ಪುರಾಣಿಕ್ ನಿಶ್ಚಿತಾರ್ಥ ಶೀಘ್ರದಲ್ಲಿ!
ನಿರ್ದೇಶಕ ಸಾಗರ್ ಪುರಾಣಿಕ್ ಮತ್ತು ನಟಿ ದೀಪಾ ಜಗದೀಶ್ ಪ್ರೀತಿಸುತ್ತಿರುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಂ ಖಾತೆಯಲ್ಲಿ ನಿರ್ದೇಶಕ ಸುನಿಲ್ ಪುರಾಣಿಕ್ ಮತ್ತು ದೀಪಾ ಜಗದೀಶ್ ಪ್ರೀತಿಸುತ್ತಿರುವ ವಿಚಾರವನ್ನು ಅಧಿಕೃತಗೊಳಿಸಿದ್ದಾರೆ.
'ಮಹಾಸತಿ' ಧಾರಾವಾಹಿಯನ್ನು ಸುನೀಲ್ ಪುರಾಣಿಕ್ ನಿರ್ಮಾಣ ಮಾಡಿದ್ದರು. ಈ ಸೆಟ್‌ನಲ್ಲಿ ಸಾಗರ್ ಮತ್ತು ದೀಪಾ ಮೊದಲು ಭೇಟಿಯಾದರು, ಎಂದು ಖಾಸಗಿ ವೆಬ್‌ವೊಂದು ವರದಿ ಮಾಡಿದೆ.
ಸೋಷಿಯಲ್ ಮೀಡಿಯಾದಲ್ಲಿ ಮಾತನಾಡಲು ಶುರು ಮಾಡಿ, ಇಬ್ಬರೂ ಅರ್ಥ ಮಾಡಿಕೊಂಡರು, ಆನಂತರ ಪೋಷಕರಿಗೆ ವಿಚಾರ ತಿಳಿಸಿ ಮದುವೆಗೆ ಅನುಮತಿ ಪಡೆದು ಕೊಂಡಿದ್ದಾರಂತೆ.
ಇಬ್ಬರೂ ಮನೋರಂಜನಾ ಕ್ಷೇತ್ರದಲ್ಲಿರುವ ಕಾರಣ ಅವರ ಆಸೆ ಆಕಾಂಕ್ಷೆ ಗೊತ್ತಿರುತ್ತದೆ ಹೀಗಾಗಿ ಜೀವನ ಸಂಗಾತಿಯಾಗಿ ಮುಂದುವರಿಸಲು ನಿರ್ಧಾರ ಮಾಡಿದ್ದರು ಎನ್ನಲಾಗಿದೆ.
ಸದ್ಯಕ್ಕೆ ದೀಪಾ ಜಗದೀಶ್ ತೆಲುಗು ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡ 'ಕಾವ್ಯಾಂಜಲಿ' ಧಾರಾವಾಹಿಯಲ್ಲಿ ನಟಿಸಿದ್ದಾರೆ. ಈ ಸೆಟ್‌ನಲ್ಲಿ ತೊಂದರೆ ಆಗಿತ್ತು ಎಂದು ತೊರೆದಿದ್ದರು.
ಕ್ರಿಟಿಕಲ್ ಕೀರ್ತನೆಗಳು ಮತ್ತು ಪ್ರೀತಿ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ ಸಿನಿಮಾದಲ್ಲಿ ದೀಪಾ ಜಗದೀಶ್ ನಟಿಸಿದ್ದಾರೆ. ತೆಲುಗಿನಲ್ಲಿ ಮಹಾಸತಿ ಮತ್ತು ಪ್ರೇಮ ಸಾಗರ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಡೊಳ್ಳು ಸಿನಿಮಾವನ್ನು ಸಾಗರ್ ಪುರಾಣಿಕ್ ನಿರ್ದೇಶನ ಮಾಡಿ ಪ್ರತಿಷ್ಠಿತ ಢಾಕಾ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರೀಮಿಯರ್ ಆಗಲಿದ್ದು. ತಮ್ಮ ಕಿರುಚಿತ್ರ ಮಹಾನ್ ಹುತಾತ್ಮಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು.