ಕೈ ಮೇಲೆ ತಿರಂಗಾ ಅಚ್ಚೆ ಹಾಕಿಸಿಕೊಂಡ ನಿರ್ದೇಶಕ ಕುಮಾರ್!
ವೈರಲ್ ಆಗುತ್ತಿದೆ ಖ್ಯಾತ ನಿರ್ದೇಶಕರ ದೇಶಾಭಿಮಾನ. ಕೈ ಮೇಲೆ ತಿರಂಗಾ ಅಚ್ಚೆ....
ಮಾರಿ ಕಣ್ಣು ಹೋರಿ ಮ್ಯಾಲೆ ಸಿನಿಮಾ ನಿರ್ದೇಶನ ಮಾಡಿರುವ ಕುಮಾರ್ ಅವರು ಕೈ ಮೇಲೆ ಭಾರತದ ಧ್ವಜ ಅಚ್ಚೆ ಹಾಕಿಸಿಕೊಂಡಿದ್ದಾರೆ.
2010ರಲ್ಲಿ ನಿರ್ದೇಶಕ ಕುಮಾರ್ ಅವರು ತಮ್ಮ ಬಲಗೈ ಮೇಲೆ ಭಾರತದ ಧ್ವಜ ಅಚ್ಚೆ ಹಾಕಿಸಿಕೊಂಡಿದ್ದಾರೆ. ಇದು ಅವರ ಬಾಲ್ಯದ ಕನಸ್ಸು ಎಂದು ಹೇಳಿಕೊಂಡಿದ್ದಾರೆ.
'ಬಾಲ್ಯದಿಂದಲ್ಲೂ ನಮ್ಮ ದೇಶದ ಬಗ್ಗೆ ಅಪಾರ ಗೌರವ ಮತ್ತು ಪ್ರೀತಿ ಹೊಂದಿದ್ದ ಕಾರಣ ಧ್ವಜವನ್ನು ಅಚ್ಚೆ ಹಾಕಿಸಿಕೊಂಡಿರುವೆ. ಯಾರೇ ಮೊದಲು ನೋಡಿದ್ದರು ಆಶ್ಚರ್ಯ ಪಡುತ್ತಾರೆ' ಎಂದು ಕುಮಾರ್ ಹೇಳಿದ್ದಾರೆ.
'2010ರಲ್ಲಿ ಹಾಕಿಸಿಕೊಂಡಿರುವ ಈ ಅಚ್ಚೆಯನ್ನು ಅನೇಕರು ನೋಡಿ ಶಾಕ್ ಅಗಿದ್ದು ಉಂಟು. ಇನ್ನೂ ಕೆಲವರು ಧ್ವಜಕ್ಕೆ ಮುತ್ತು ಕೊಟ್ಟಿ ಗ್ರೇಟ್ ಎಂದು ಬೆನ್ನುತ್ತಟ್ಟಿದ್ದಾರೆ' ಎಂದಿದ್ದಾರೆ.
ಕನ್ನಡ, ತೆಲುಗು ಮತ್ತು ತಮಿಳು ಸ್ಟಾರ್ ನಟರಿಗೆ ಕುಮಾರ್ ಸಿನಿಮಾ ಕಥೆ ಬರೆಯುತ್ತಾರೆ. ಸಧ್ಯಕ್ಕೆ ಮೂರು ಪ್ರಾಜೆಕ್ಟ್‌ಗಳು ಅವರ ಕೈಯಲಿದ್ದು, ಹ್ಯಾಟ್ರಿಕ್ ಹೀರೋ ಶಿವಣ್ಣ ಜೊತೆ ಕೆಲಸ ಮಾಡುತ್ತಿದ್ದಾರೆ.
'ಶ್' ಚಿತ್ರದ ಮೂಲಕ ಸಹಾಯ ನಿರ್ದೇಶಕನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಕುಮಾರ್ 1995ರಲ್ಲಿ 'ಆಪರೇಷನ್ ಅಂತ' ಚಿತ್ರದಲ್ಲಿ ಸಹಾಯ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ.