ನಾಯಕಿಯಿಂದ ಗಾಯಕಿ,ಮತ್ತೆ ಹಾಡಲು ಜನರೇ ಸ್ಫೂರ್ತಿ ಕೊಟ್ಟರು ಎಂದ ಆಶಾ ಭಟ್
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ನಟಿ ಆಶಾ ಭಟ್ ಹಾಡಿನ ವಿಡಿಯೋಗಳು. ನೀವು ನಾಯಕಿ ಮಾತ್ರವಲ್ಲ ಗಾಯಕಿ ಎಂದ ಅಭಿಮಾನಿಗಳು.
ಗಾಯಕಿ ಆಶಾ
ರಾಬರ್ಟ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮಾಡೆಲ್ ಆಶಾ ಭಟ್ ಇದೀಗ ಸೋಷಿಯಲ್ ಮೀಡಿಯಾದ ತಮ್ಮ ಹಾಡುಗಳ ಮೂಲಕ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದ್ದಾರೆ. ಅಭಿಮಾನಿಗಳು ಒತ್ತಾಯಿಸಿದಕ್ಕೆ ಮೂರ್ನಾಲ್ಕು ಭಾಷೆಯಲ್ಲಿ ಹಾಡಿ ಅಪ್ಲೋಡ್ ಮಾಡಿದ್ದಾರೆ.
ಆಶಾ ಹೊಸ ಜರ್ನಿ ಶುರು
'ನಾನು ಹಲವು ವರ್ಷಗಳ ಕಾಲ ಸಂಗೀತ ಕಲಿತಿದ್ದರೂ ಹಾಡುವುದನ್ನು ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ ತಕ್ಷಣ ಎಲ್ಲರೂ ಕೇಳುವುದಕ್ಕೆ ಶುರು ಮಾಡಿದ್ದಾರೆ. ಯಾಕೆ ನೀವು ಇನ್ನೂ ಹೆಚ್ಚು ಹಾಡಬಾರದು' ಎಂದು ಆಶಾ ಭಟ್ ತಮ್ಮ ಸಂಗೀತದ ಬಗ್ಗೆ ಮಾತನಾಡಿದ್ದಾರೆ.
ಜನರೇ ಎನರ್ಜಿ ಎಂದ ನಟಿ
'ಜನರ ಪ್ರೀತಿ ನನಗೆ ಸ್ಪೂರ್ತಿ ನೀಡಿತ್ತು. ಕನ್ನಡ, ತಮಿಳು, ತೆಲುಗು, ಹಿಂದೆ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಹಾಡುತ್ತೇನೆ. ಮೊದಲು ನಾನು ಆರಂಭಿಸಿದ್ದು ಅಮೃತವರ್ಷಿಣಿ ಚಿತ್ರದ ತುಂತುರು ಹಾಡು'
ಆಶಾ ಭರತನಾಟ್ಯ ಲುಕ್
'ಸಂಗೀತದ ಜೊತೆ ನಾನು ಡ್ಯಾನ್ಸ್ ಮತ್ತು ಮಾರ್ಷಿಯಲ್ ಆರ್ಟ್ಸ್ ವಿಡಿಯೋ ಹಂಚಿಕೊಳ್ಳುವೆ. ಸಂಗೀತ ಅಭ್ಯಾಸ ತಪ್ಪಿತ್ತು ಆದರೆ ಸಿಗುತ್ತಿರುವ ಪ್ರತಿಕ್ರಿಯೆಯಿಂದ ಮತ್ತೆ ಶುರು ಮಾಡುತ್ತಿರುವೆ'
ವೈಟ್ ಸೆಲ್ವಾರ್‌ನಲ್ಲಿ ಆಶಾ
'ಈ ವಿಡಿಯೋಗಳಿಂದ ನನಗೆ play back ಸಿಂಗರ್ ಆಗಲು ಅವಕಾಶ ಸಿಕ್ಕರೆ ಖಂಡಿತ ಹಾಡುವೆ. ಈ ಹಾಡುಗಳ ಚಿತ್ರೀಕರಣವನ್ನು ನಾನೇ ಮಾಡುತ್ತಿರುವೆ. ನನ್ನ ಪುಟ್ಟ ತಂಡ ಮತ್ತು ನಿರ್ಮಾಣ ಸಂಸ್ಥೆ'
ಆಶಾ ಸೀರೆ ಲುಕ್
'ಹೊಸ ವಿಚಾರಗಳನ್ನು ಕಲಿಯುವುದಕ್ಕೆ ಅವಕಾಶ ಸಿಕ್ಕಿದೆ. ಪ್ಲ್ಯಾನ್ ಮಾಡುವುದರಿಂದ ಹಿಡಿದು ನಿರ್ಮಾಣ ಮಾಡುವವರೆಗೂ ಕಲಿಯುತ್ತಿರುವೆ. ದೊಡ್ಡ ಮಟ್ಟದಲ್ಲಿ ಏನಾದರೂ ಸಾಧನೆ ಮಾಡಬೇಕು ಕಾಯುತ್ತಿರುವೆ' ಎಂದಿದ್ದಾರೆ ಆಶಾ ಭಟ್.