ಸ್ನೇಹಿತೆಯರಿಂದ ನಟಿ ತೇಜಸ್ವಿನಿ ಪ್ರಕಾಶ್‌ಗೆ ಸರ್ಪ್ರೈಸ್ ಬೇಬಿ ಶವರ್; ಫೋಟೋ ವೈರಲ್
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ನಟಿ ತೇಜಸ್ವಿನಿ ಪ್ರಕಾಶ್ ಬೇಬಿ ಶವರ್ ಫೋಟೋಗಳು..........
ಕನ್ನಡ ಬೆಳ್ಳಿ ತೆರೆ ಮತ್ತು ಕಿರುತೆರೆ ಜನಪ್ರಿಯ ನಟಿ ತೇಜಸ್ವಿನಿ ಪ್ರಕಾಶ್ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ಸಿಹಿ ಸುದ್ದಿ ಹಂಚಿಕೊಂಡಿದ್ದರು.
ಶೀಘ್ರದಲ್ಲಿ ಮಗುವಿಗೆ ಜನ್ಮ ನೀಡುವ ನಟಿ ತೇಜಸ್ವಿನಿಗೆ ಸ್ನೇಹಿತರು ಸರ್ಪ್ರೈಸ್ ಬೇಬಿ ಶವರ್ ಪಾರ್ಟಿ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಾರೆ.
ವೈಟ್ ಬಣ್ಣದ ಗೌನ್‌ನಲ್ಲಿ ತೇಜಸ್ವಿನಿ ಮಿಂಚಿದ್ದಾರೆ. ಆಗ Mom to be ಎಂದು ಹೇರ್‌ಬ್ಯಾಂಡ್ ಹಾಗೂ ಸ್ಯಾಷ್ ಧರಿಸಿದ್ದಾರೆ.
ಲಕ್ಷ್ಮಿ ಬಾರಮ್ಮ ಧಾರಾವಾಹಿ ಖ್ಯಾತಿಯ ಸುಪ್ರೀತಾ ಪಾತ್ರಧಾರಿ ರಜನಿ ಪ್ರವೀಣ್ ಕೂಡ ಬೇಬಿ ಶವರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರಜನಿ ಅಪ್ಲೋಡ್ ಮಾಡಿರುವ ಫೋಟೋಗಳು.
2022ರ ಮಾರ್ಚ್ ತಿಂಗಳಿನಲ್ಲಿ ತೇಜಸ್ವಿನಿ ಪ್ರಕಾಶ್ ಮತ್ತು ಫಣಿ ವರ್ಮ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ನಿಮಗೆ ಹೆಣ್ಣು ಮಗು ಹುಟ್ಟಬೇಕು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ ಇನ್ನೂ ಕೆಲವರು ಗಂಡು ಮಗುವಾಗಲಿ ಎಂದಿದ್ದಾರೆ. ಒಟ್ಟಾರೆ ಮಗು ಆರೋಗ್ಯವಾಗಿ ಜನಿಸಲಿ ಎಂದು ವಿಶ್ ಮಾಡಿದ್ದಾರೆ.