ಭಾವಿ ಪತಿ ಜೊತೆ ಸ್ವಿಮ್ಮಿಂಗ್ ಪೂಲ್‌ನಲ್ಲಿ ನಟಿ Shubra Aiyappa!
ವಿಶಾಲ್ ಶಿವಪ್ಪಗೆ ಯಸ್ ಹೇಳಿದ ನಟಿ ಶುಭ್ರಾ. ಪೂಲ್ ಫೋಟೋ ವೈರಲ್

ವಜ್ರಕಾಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮಾಡೆಲ್ ಶುಭ್ರಾ ಅಯ್ಯಪ್ಪ ಇದೀಗ ಭಾವಿ ಪತಿ ಜೊತೆಗಿನ ಫೋಟೋ ರಿವೀಲ್ ಮಾಡಿದ್ದಾರೆ.
ಶುಭ್ರಾ ಅಯ್ಯಪ್ಪ ಇಷ್ಟು ದಿನ ಸಿಂಗಲ್ ಆಗಿದ್ದರು. ಈಗ ಮಿಂಗಲ್ ಫೇಸ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಹುಡುಗನ ಹೆಸರು ವಿಶಾಲ್ ಶಿವಪ್ಪ.
ಶುಭ್ರಾ ಮತ್ತು ವಿಶಾಲ್ ಅಯ್ಯಪ್ಪ ಅವರು ಸ್ವೀಮ್ಮಿಂಗ್ ಪೂಲ್‌ನಲ್ಲಿ ನಿಂತಿರುವ ಫೋಟೋ ಹಂಚಿಕೊಂಡು 'ನಾನು ಯಸ್ ಎಂದು ನನ್ನ ಪಾಂಡಾಗೆ ಹೇಳಿದೆ,' ಎಂದು ಬರೆದುಕೊಂಡಿದ್ದಾರೆ.
ಶುಭ್ರಾ ಅಪ್ಲೋಡ್ ಮಾಡಿರುವ ಫೋಟೋವನ್ನು ಹಂಚಿಕೊಂಡು 'ಈ ಪ್ರಪಂಚದ ಲಕ್ಕಿ ಮ್ಯಾನ್ ನಾನು,' ಎಂದು ವಿಶಾಲ್ ಬರೆದುಕೊಂಡಿದ್ದಾರೆ.
ಬಿಳಿ ಬಣ್ಣದ ಸ್ವಿಮ್ ವೇರ್‌ನಲ್ಲಿ ವಿಶಾಲ್ ಹಾಗೂ ಕೆಂಪು ಬಣ್ಣದ ಬಿಕಿನಿ ಡಿಸೈನಲ್ಲಿರುವ ಉಡುಪಿನಲ್ಲಿ ಇಬ್ಬರೂ ಕಾಣಿಸಿಕೊಂಡಿದ್ದಾರೆ. ಬಿಸಿಲು ಇಲ್ಲಿದ್ದು, ಫೋಟೋದಲ್ಲಿ ಇಬ್ಬರೂ ಮಿಂಚುತ್ತಿದ್ದಾರೆ.
'ನನ್ನ ಪ್ರಪಂಚವೇ ನೀನು ಶುಭ್ರಾ. ನಾವು ಕನಸು ಕಂಡಂತೆ ಜೀವನ ನಡೆಸಲು ಆ ಭಗವಂತನ ಆಶೀರ್ವಾದ ನಮ್ಮ ಮೇಲಿರಲಿ. ನನ್ನ ಕನಸಿನ ರಾಣಿ ಯಸ್ ಹೇಳಿದಳು,' ಎಂದು ವಿಶಾಲ್ ಬರೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.