- Home
- Entertainment
- Sandalwood
- ಬಾತ್‌ರೂಮ್ ಫೋಟೋಸ್ ಹಂಚಿಕೊಂಡ ರಾಗಿಣಿ: ತುಪ್ಪದ ಬೆಡಗಿ ಪೋಸ್ ನೋಡಿ ನೆಟ್ಟಿಗರು ಸುಸ್ತು!
ಬಾತ್‌ರೂಮ್ ಫೋಟೋಸ್ ಹಂಚಿಕೊಂಡ ರಾಗಿಣಿ: ತುಪ್ಪದ ಬೆಡಗಿ ಪೋಸ್ ನೋಡಿ ನೆಟ್ಟಿಗರು ಸುಸ್ತು!
ರಾಗಿಣಿ ಹೆಚ್ಚಾಗಿ ಮಾಡರ್ನ್ ಡ್ರೆಸ್‌ಗಳಲ್ಲಿ ಅದರಲ್ಲೂ ಹೆಚ್ಚಾಗಿ ಸ್ವಿಮ್ ಸೂಟ್, ತುಂಡುಡುಗೆಯಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಇದೀಗ ನಟಿ ಬಾತ್‌ರೂಮ್ ಫೋಟೋಸ್ ಹಂಚಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಆಗಿ ಮಿಂಚಿತ್ತಿರುವ ರಾಗಿಣಿ ದ್ವಿವೇದಿ ದಕ್ಷಿಣ ಭಾರತದ ಚಲನಚಿತ್ರ ನಟಿ ಮತ್ತು ರೂಪದರ್ಶಿ, ಇವರು ಕನ್ನಡ ಮತ್ತು ತಮಿಳು ಎರಡೂ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ.
ಇತ್ತೀಚೆಗಷ್ಟೇ ರಾಗಿಣಿ ದ್ವಿವೇದಿ ವಿರುದ್ಧದ ಮಾದಕವಸ್ತು ಸೇವನೆ ಹಾಗೂ ಮಾರಾಟಕ್ಕೆ ರೇವ್ ಪಾರ್ಟಿ ಆಯೋಜಿಸಿದ್ದರು ಎನ್ನಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿತ್ತು.
ರಾಗಿಣಿ ಹೆಚ್ಚಾಗಿ ಮಾಡರ್ನ್ ಡ್ರೆಸ್‌ಗಳಲ್ಲಿ ಅದರಲ್ಲೂ ಹೆಚ್ಚಾಗಿ ಸ್ವಿಮ್ ಸೂಟ್, ತುಂಡುಡುಗೆಯಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಇದೀಗ ನಟಿ ಬಾತ್‌ರೂಮ್ ಫೋಟೋಸ್ ಹಂಚಿಕೊಂಡಿದ್ದಾರೆ.
ಹೌದು! ರಾಗಿಣಿ, ಮಾರ್ನಿಂಗ್ ಜಿಮ್ ವರ್ಕೌಟ್ ಮುಗಿಸಿ, ಜಿಮ್ ಡ್ರೆಸ್‌ನಲ್ಲಿ ಬಾತ್‌ರೂಮ್ ಕನ್ನಡಿ ಮುಂದೆ ನಿಂತು ಪೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಜೊತೆಗೆ ಡಿಫರೆಂಟ್ ಪೋಸ್ ಸಹ ಕೊಟ್ಟಿದ್ದಾರೆ.
ರಾಗಿಣಿ ಫೋಟೋಸ್ ನೋಡಿ ನೆಟ್ಟಿಗರು ಫುಲ್ ಸುಸ್ತು ಆಗಿದ್ದಾರೆ. ಬ್ಯೂಟಿಫುಲ್ ಗರ್ಲ್, ಹಾಟ್‌ನೆಸ್ ತುಪ್ಪದ ಬೆಡಗಿ ಅಂತೆಲ್ಲಾ ಕಮೆಂಟ್ ಮಾಡಿದ್ದಾರೆ. ಸದ್ಯ ನಟಿ ರಾಗಿಣಿ ಇದೀಗ ಮಹಾರಾಷ್ಟ್ರದಲ್ಲಿದ್ದಾರೆ.
ರಾಗಿಣಿ ಕನ್ನಡ, ತಮಿಳು, ಮಲಯಾಲಂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ವರ್ಷ ನಟಿ ತಮಿಳಿನ ಕಿಕ್ ಮತ್ತು ಇಮೇಲ್ ಎನ್ನುವ ಸಿನಿಮಾಗಳಲ್ಲಿ ನಟಿಸಿದ್ದರು.
ಇದೀಗ ಕನ್ನಡದಲ್ಲಿ ವೃಷಭ, ಸಾರಿ ಕರ್ಮ ರಿಟರ್ನ್ಸ್ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಜೊತೆಗೆ ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ನಟನೆಯ ಸಂಜು ವೆಡ್ಸ್ ಗೀತಾ 2 ಸಿನಿಮಾದಲ್ಲಿ ವಿಲನ್ ಪಾತ್ರದಲ್ಲೂ ರಾಗಿಣಿ ಕಾಣಿಸಿಕೊಂಡಿದ್ದಾರೆ.