- Home
- Entertainment
- Sandalwood
- ವಿದೇಶದಲ್ಲಿ ಓಣಂ ಆಚರಿಸಿದ 'ಶಾಸ್ತ್ರಿ' ನಟಿ; ಪಬ್ ಪಾರ್ಟಿ ಅಂತ ಸುತ್ತಾಡುವವರಿಗೆ ನೀವು ಮಾದರಿ ಎಂದ ನೆಟ್ಟಿಗರು!
ವಿದೇಶದಲ್ಲಿ ಓಣಂ ಆಚರಿಸಿದ 'ಶಾಸ್ತ್ರಿ' ನಟಿ; ಪಬ್ ಪಾರ್ಟಿ ಅಂತ ಸುತ್ತಾಡುವವರಿಗೆ ನೀವು ಮಾದರಿ ಎಂದ ನೆಟ್ಟಿಗರು!
ವಿದೇಶಕ್ಕೆ ಹಾರಿದರೂ ಸಂಪ್ರದಾಯ ಮರೆತಿಲ್ಲ ಮಾನ್ಯಾ ನಾಯ್ಡು. ಊಟ ಸೂಪರ್ ಎಂದು ಪೋಸ್ಟ್ ಹಾಕಿದ ನಟಿ....

ಬಾಲನಟಿಯಾಗಿ ಒಂದೆರಡು ಸಿನಿಮಾಗಳಲ್ಲಿ ಮಿಂಚಿದ ಮಾನ್ಯಾ ನಾಯ್ತು ನಾಯಕಿಯಾಗಿ ಜರ್ನಿ ಆರಂಭಿಸಿದ್ದು 1997ರಲ್ಲಿ. ಮಲಯಾಳಂ, ಕನ್ನಡ, ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.
2005ರಲ್ಲಿ ಕನ್ನಡ ಸಿನಿಮಾ ಜರ್ನಿ ಅರಂಭಿಸಿದ ಮಾನ್ಯಾ...ವರ್ಷ, ಶಾಸ್ತ್ರಿ, ಶಂಬು, ಬಿಳಿ ಬೆಟ್ಟ, ಅಂಬಿ ಮತ್ತು ಸುಂಟರಗಾಳಿ ಚಿತ್ರದಲ್ಲಿ ನಟಿಸಿದ್ದಾರೆ.
2010ರಲ್ಲಿ ಕನ್ನಡ ಚಿತ್ರರಂಗಕ್ಕೆ ಗುಡ್ ಬೈ ಹೇಳಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಂತೆ ವಿದೇಶಕ್ಕೆ ಹಾರಿದ ಮಾನ್ಯಾ ನಾಯ್ಡು ಫ್ಯಾಮಿಲಿಯಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.
ನಟನೆಗೆ ಗುಡ್ ಬೈ ಹೇಳಿದ ಮಾನ್ಯಾ ಕೊಲಂಬಿಯಾ ಯೂನಿವರ್ಸಿಟಿಯಲ್ಲಿ ಎಂಬಿಎ ಮುಗಿಸಿ ನ್ಯೂ ಯಾರ್ಕ್‌ನಲ್ಲಿ ಬ್ಯಾಂಕ್‌ವೊಂದರಲ್ಲಿ ಉನ್ನತ ಸ್ಥಾನದಲ್ಲಿ ಕೆಲಸ ಮಾಡುತ್ತಿದ್ದಾರೆ.
ಇದೀಗ ಮಾನ್ಯ ನಾಯ್ಡು ವಿದೇಶದಲ್ಲಿ ಓಣಂ ಆಚರಿಸಿದ್ದಾರೆ. ರುಚಿ ರುಚಿಯಾದ ಸಾದ್ಯವನ್ನು ಸವಿಯುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ವಿದೇಶದಲ್ಲಿ ಇದ್ದರೂ ಸಂಪ್ರದಾಯವನ್ನು ಪಾಲಿಸುತ್ತಿರುವ ಚೆಲುವೆ ನೀವು ಅಲ್ಲದೆ ನೀವೇ ಪ್ರತಿಯೊಂದನ್ನು ಅಡುಗೆ ಮಾಡಿರುವುದಕ್ಕೆ ಖುಷಿಯಾಗುತ್ತಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.