- Home
- Entertainment
- Sandalwood
- BBK 12: ದೂರ ಆಗೋಕೆ ಕುಡಿಬೇಕು / ಚಟ ಇರ್ಬೇಕು ಅಂತೇನಿಲ್ಲ; ಡಿವೋರ್ಸ್ ಬಗ್ಗೆ ಅಶ್ವಿನಿ ಗೌಡ ಏನು ಹೇಳಿದ್ರು?
BBK 12: ದೂರ ಆಗೋಕೆ ಕುಡಿಬೇಕು / ಚಟ ಇರ್ಬೇಕು ಅಂತೇನಿಲ್ಲ; ಡಿವೋರ್ಸ್ ಬಗ್ಗೆ ಅಶ್ವಿನಿ ಗೌಡ ಏನು ಹೇಳಿದ್ರು?
Bigg Boss Kannada Season 12: ಬಿಗ್ ಬಾಸ್ ಕನ್ನಡ ಮನೆಗೆ ಅಶ್ವಿನಿ ಗೌಡ ಅವರು ಎಂಟ್ರಿ ಕೊಟ್ಟಿದ್ದಾರೆ. ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಅಶ್ವಿನಿ ಗೌಡ ಅವರು ಈ ಹಿಂದೆ ಮದುವೆ, ಅತ್ತೆ-ಮಾವನ ಬಗ್ಗೆ ಮಾತನಾಡಿದ್ದಾರೆ. ಹಾಗಾದರೆ ಅವರು ಏನು ಹೇಳಿದ್ದರು?

ಮದುವೆ ಬಗ್ಗೆ ಏನು ಹೇಳಿದ್ರು?
ಕನ್ನಡ ಚಿತ್ರರಂಗ ಮತ್ತು ಬೆಳ್ಳಿತೆರೆಯಲ್ಲಿ ಮಿಂಚಿರುವ ಅಶ್ವಿನಿ ಗೌಡ ಸದ್ಯ ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಮದುವೆ ಬಗ್ಗೆ ಮಾತನಾಡಿದ್ದಾರೆ.
ಮದುವೆಯಾದಾಗ ವಯಸ್ಸು 17
ಮದುವೆ ಆದಾಗ ನನಗೆ 17 ವರ್ಷ ಆಗಿತ್ತು. 18 ವರ್ಷವಿದ್ದಾಗ ನನ್ನ ಮದುವೆ ಆದ್ಮೇಲೆ ನನ್ನ ಗಂಡನ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದೆ. ಅವರ ಹೆಸರು ಈಗ ಬೇಡ, ಏಕೆಂದರೆ ನಾವು ಒಟ್ಟಿಗಿಲ್ಲ ಎಂದು ರಘುರಾಮ್ ಸಂದರ್ಶನದಲ್ಲಿ ಹೇಳಿದ್ದರು.
ಸಾಧನೆ ಮಾಡಲು ಅತ್ತೆ-ಮಾವ ಕಾರಣ
ಇದರಲ್ಲಿ ಮುಚ್ಚಿಡುವ ವಿಚಾರ ಏನೂ ಇಲ್ಲ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಿರುವಾಗ ನಾವು ಟ್ರಾನ್ಸ್‌ಪರೆಂಟ್ ಆಗಿರಬೇಕು. ಆ ಕುಟುಂಬ ನನಗೆ ಸದಾ ಸಪೋರ್ಟ್ ಮಾಡಿದ್ದಾರೆ. ಜೀವನದಲ್ಲಿ ನಾನು ಸಾಧನೆ ಮಾಡಿರುವೆ ಅಂದ್ರೆ ನನ್ನ ಅತ್ತೆ ಮಾವ ಕಾರಣ.
ಡಿವೋರ್ಸ್‌ಗೆ ಬೇರೆ ಕಾರಣ ಇರತ್ತೆ
ಸಾಮಾನ್ಯವಾಗಿ ಹೆಣ್ಣುಮಕ್ಕಳು ಕುಟುಂಬ ತೊರೆದು ಹೋದಾಗ ಕೆಟ್ಟದಾಗಿ ಮಾತನಾಡುತ್ತಾರೆ ಆದರೆ ಇವರು ಹಾಗೆ ಮಾಡಿಲ್ಲ ಪ್ರತಿ ಹುಟ್ಟುಹಬ್ಬಕ್ಕೂ ವಿಶ್ ಮಾಡುತ್ತಾರೆ ಹಬ್ಬಕ್ಕೆ ಮನೆಗೆ ಕರೆಯುತ್ತಾರೆ. ಅಷ್ಟು ಚೆನ್ನಾಗಿದ್ದೀವಿ. ಎಲ್ಲೂ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ. ಪತಿಯಿಂದ ದೂರವಾಗಬೇಕು ಅಂದ್ರೆ ಕುಡಿಯಲೇ ಬೇಕು ಅಥವಾ ಕೆಟ್ಟ ಚಟಗಳು ಆಗಿರಬೇಕು ಅನ್ನೋದು ಏನೂ ಇಲ್ಲ, ಬೇರೆ ಬೇರೆ ಕಾರಣಗಳು ಇರುತ್ತದೆ.
ನನ್ನ ಮಗನ ಸೇತುವೆ
ಆ ಕುಟುಂಬದಿಂದ ನನಗೆ ಎಲ್ಲೂ ಕೆಟ್ಟದಾಗಿಲ್ಲ. ನಮ್ಮ ಕುಟುಂಬಕ್ಕೂ ಅವರ ಕುಟುಂಬಕ್ಕೂ ಸೇತುವೆ ಅಂದ್ರೆ ನನ್ನ ಮಗ. ನನಗಿಂತ ಅವರ ತಂದೆ ಜೊತೆ ಆತ ತುಂಬಾ ಫ್ರೆಂಡ್ಲಿಯಾಗಿದ್ದಾನೆ. ನಾನು ಬೈಯುವೆ ಆದರೆ ಅವರ ಅಪ್ಪ ಏನೂ ಮಾಡಲ್ಲ ಎಂದು ಅಶ್ವಿನಿ ಹೇಳಿದ್ದಾರೆ. ನನ್ನ ಮಗ ಅವನ ಫ್ರೀಡಂ ಅವನು ಎಂಜಾಯ್ ಮಾಡುತ್ತಿದ್ದಾನೆ ನನ್ನ ಫ್ರೀಡಂನ ನಾನು ಎಂಜಾಯ್ ಮಾಡುತ್ತಿರುವೆ. ನಾವು ಜಗಳ ಮಾಡಿಕೊಂಡು ದೂರ ಆಗಿಲ್ಲ ಮಾತನಾಡಿಕೊಂಡು ಈ ನಿರ್ಧಾರ ತೆಗೆದುಕೊಂಡಿರುವುದು ಎಂದಿದ್ದಾರೆ ಅಶ್ವಿನಿ.