- Home
- Entertainment
- TV Talk
- Bigg Boss Kannada Season 12 ಮನೆಗೆ ಹೋಗುವ ಸ್ಪರ್ಧಿಗಳ ಕಂಪ್ಲೀಟ್ ಲಿಸ್ಟ್ ಲೀಕ್! ಒಬ್ರಿಗಿಂತ ಒಬ್ರು ಭಯಂಕರ
Bigg Boss Kannada Season 12 ಮನೆಗೆ ಹೋಗುವ ಸ್ಪರ್ಧಿಗಳ ಕಂಪ್ಲೀಟ್ ಲಿಸ್ಟ್ ಲೀಕ್! ಒಬ್ರಿಗಿಂತ ಒಬ್ರು ಭಯಂಕರ
ಈ ಬಾರಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿರುವ ಬಿಗ್ ಬಾಸ್ ಕನ್ನಡ ಸೀಸನ್ 12 ಮನೆಗೆ ವಿಭಿನ್ನ ವ್ಯಕ್ತಿತ್ವವುಳ್ಳ ಸ್ಪರ್ಧಿಗಳು ಭಾಗವಹಿಸಿದ್ದಾರೆ. ಹಾಗಾದರೆ ಅವರು ಯಾರು? ಯಾರು?

ವಿಭಿನ್ನ ವ್ಯಕ್ತಿತ್ವ
ಈ ಬಾರಿ ದೊಡ್ಮನೆಗೆ ಸೋಶಿಯಲ್ ಮೀಡಿಯಾ ಸ್ಟಾರ್ಸ್, ಸೀರಿಯಲ್ ಕಲಾವಿದರು, ಸಿನಿಮಾ ನಟ-ನಟಿಯರು, ಬಾಡಿ ಬಿಲ್ಡರ್ಸ್, ಆರ್‌ಜೆ ಕೂಡ ಬಂದಿದ್ದಾರೆ.
ಕರಿಬಸಪ್ಪ
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೌಂಡ್ ಮಾಡಿರುವ ಕರಿಬಸಪ್ಪ ಕೂಡ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರಂತೆ.
ಮಲ್ಲಮ್ಮ
ಉತ್ತರ ಕರ್ನಾಟಕ ಮೂಲದ ಮಲ್ಲಮ್ಮ ಈ ಬಾರಿ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಈಗಾಗಲೇ ಸೌಂಡ್ ಮಾಡಿದ್ದಾರೆ.
ನಟಿ ಮಂಜುಭಾಷಿಣಿ
ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟಿ ಮಂಜುಭಾಷಿಣಿ ಅವರು ಈ ಬಾರಿಯ ಬಿಗ್ ಬಾಸ್ ಶೋನಲ್ಲಿ ಭಾಗವಹಿಸಲಿದ್ದಾರಂತೆ. ‘ಸಿಲ್ಲಿ ಲಲ್ಲಿ’ ಧಾರಾವಾಹಿ ಖ್ಯಾತಿಯ ನಟಿ ಈ ಬಾರಿ ದೊಡ್ಮನೆ ಪ್ರವೇಶ ಮಾಡಿರೋದು ಕುತೂಹಲ ಮೂಡಿಸಿದೆ.
ಕಾಕ್ರೋಚ್ ಸುಧಿ
ಕಾಕ್ರೋಚ್ ಸುಧಿ ಕೂಡ ದೊಡ್ಮನೆ ಪ್ರವೇಶ ಮಾಡಿದ್ದಾರೆ. ನಾನು ಬಿಗ್ ಬಾಸ್ ಮನೆಗೆ ಹೋಗಲ್ಲ ಎಂದು ಅವರು ಸಂದರ್ಶನದಲ್ಲಿ ಹೇಳಿದ್ದರು. ‘ಟಗರು’, ‘ಮಾದೇವ’ ಮುಂತಾದ ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿದ್ದಾರೆ.
ಗಿಲ್ಲಿ ನಟ, ಸೂರಜ್, ಚಂದ್ರಪ್ರಭ
ಈಗಾಗಲೇ ಸಾಕಷ್ಟು ಕಾಮಿಡಿ ಶೋಗಳಲ್ಲಿ ಪ್ರಾಪರ್ಟಿ ಕಾಮಿಡಿ ಮಾಡಿ, ಜನಪ್ರಿಯತೆ ಪಡೆದಿರುವ ಅವರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಕೆಲ ಸೀಸನ್‌ಗಳಿಂದ ಗಿಲ್ಲಿ ನಟ ಭಾಗವಹಿಸಲಿದ್ದಾರೆ ಎನ್ನಲಾಗಿತ್ತು. ಸೂರಜ್, ಚಂದ್ರಪ್ರಭ ಕೂಡ ಈ ಶೋನಲ್ಲಿ ಭಾಗಿ ಆಗಲಿದ್ದಾರಂತೆ.
ಚರಿತ್ ಬಾಳಪ್ಪ
‘ಲವ ಲವಿಕೆ’ ಹಾಗೂ ಮುದ್ದುಲಕ್ಷ್ಮೀ ಧಾರಾವಾಹಿ ನಟ ಚರಿತ್ ಬಾಳಪ್ಪ ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶ ಮಾಡಲಿದ್ದಾರೆ ಎನ್ನಲಾಗಿದೆ.
ಕಾವ್ಯ ಶೈವ, ಸ್ಪಂದನಾ ಸೋಮಣ್ಣ
ಕೆಂಡಸಂಪಿಗೆ ಧಾರಾವಾಹಿ ನಟಿ ಕಾವ್ಯ ಶೈವ ಅವರು ‘ಕೊತ್ತಲವಾಡಿ’ ಸಿನಿಮಾದಲ್ಲಿ ನಟಿಸಿದ್ದರು. ಇವರು ಕೂಡ ದೊಡ್ಮನೆ ಪ್ರವೇಶ ಮಾಡ್ತಾರಂತೆ.
‘ಕರಿಮಣಿ’ ಧಾರಾವಾಹಿ ನಟಿ ಸ್ಪಂದನಾ ಸೋಮಣ್ಣ ಕೂಡ ಭಾಗವಹಿಸಿದ್ದಾರಂತೆ.
ರಾಮಾಚಾರಿ ಧಾರಾವಾಹಿ ನಟಿ ದೇವಿಕಾ ಭಟ್, ಮೌನ ಗುಡ್ಡೇಮನೆ ಕೂಡ ಇರಲಿದ್ದಾರಂತೆ.
ನಟ ಧನುಷ್ ಗೌಡ, ಅಭಿಷೇಕ್ ಶ್ರೀಕಾಂತ್
ಗೀತಾ ಧಾರಾವಾಹಿ ನಟ ಧನುಷ್ ಗೌಡ, ಲಕ್ಷಣ ಧಾರಾವಾಹಿ ನಟ ಅಭಿಷೇಕ್ ಶ್ರೀಕಾಂತ್ ಕೂಡ ಭಾಗವಹಿಸಲಿದ್ದಾರಂತೆ.
ಆರ್‌ಜೆ ಅಮಿತ್, ರಾಶಿಕಾ ಶೆಟ್ಟಿ
ಅಷ್ಟೇ ಅಲ್ಲದೆ ಆರ್‌ಜೆ ಅಮಿತ್ ಕೂಡ ಇರಲಿದ್ದಾರೆ. ಇನ್ನು ರಿಯಾಲಿಟಿ ಶೋನಲ್ಲಿ ಹೆಸರು ಮಾಡಿರುವ ಅನನ್ಯಾ ಅಮರ್ ಕೂಡ ಇರಲಿದ್ದಾರೆ. ‘ಮನದ ಕಡಲು’ ಸಿನಿಮಾ ನಟಿ ರಾಶಿಕಾ ಶೆಟ್ಟಿ ಕೂಡ ಇರಲಿದ್ದಾರಂತೆ.
ಶ್ರೇಯಸ್ ಮಂಜು, ಅಶ್ವಿನಿ ಗೌಡ
ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಮಂಜು ಹಾಗೂ ಕನ್ನಡದ ಸಾಕಷ್ಟು ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿರುವ ಅಶ್ವಿನಿ ಗೌಡ ಕೂಡ ಇರಲಿದ್ದಾರಂತೆ.