ಇದ್ಯಾವ ತರ ಡ್ರೆಸ್? ಸ್ವಲ್ಪ ಕನ್ನಡತಿ ತರ ಇರಿ; ಮಾಲಾಶ್ರೀ ಮಗಳ ಹಾಟ್ ಲುಕ್ ವೈರಲ್
ವಿವಾದಗಳ ಬೆನ್ನಲೆ ಹಾಟ್ ಫೋಟೋ ಹಂಚಿಕೊಂಡ ರಾಧನಾ ರಾಮ್. ಡಬ್ಬೂ ರತ್ನಾನಿ ಕ್ಯಾಮೆರಾ ಪವರ್ ನೋಡಿ....

ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡಿರುವ ಕಾಟೇರ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸುಂದರಿ ಆರಾಧನಾ ರಾಮ್.
ಮಾಲಾಶ್ರೀ ಮಗಳು ಮೊದಲ ಚಿತ್ರದಲೇ ಸೂಪರ್ ಆಕ್ಟಿಂಗ್ ಮಾಡಿದ್ದಾಳೆ ಎಂದು ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು, ಇದಾದ ಮೇಲೆ ಸಾಕಷ್ಟು ಕಥೆಗಳು ಬಂದಿದೆ ಎನ್ನಲಾಗಿದೆ.
ಆರಾಧನಾ ರಾಮ್ ತಮ್ಮ ಮುಂದಿನ ಚಿತ್ರದ ಬಗ್ಗೆ ಮಾಹಿತಿ ನೀಡಿಲ್ಲ ಆದರೆ ಸಾಕಷ್ಟು ಲುಕ್‌ಗಳಲ್ಲಿ ಆಗಾಗ ಫೋಟೋಶೂಟ್ ಮಾಡಿಸುತ್ತಿರುತ್ತಾರೆ.
ಬಾಲಿವುಡ್ ಪ್ರತಿಷ್ಠಿತ ಫೋಟೋಗ್ರಾಫರ್ ಫ್ಯಾಷನ್ ಡಿಸೈನರ್ ಡಬ್ಬೂ ರತ್ನಾನಿ ಬಳಿ ಫೋಟೋಶೂಟ್ ಮಾಡಿಸಿದ್ದಾರೆ. ಇದಕ್ಕೆ 'Playing dress up' ಎಂದು ಬರೆದುಕೊಂಡಿದ್ದಾರೆ.
ಈ ಲುಕ್‌ನಲ್ಲಿ ಆರಾಧನಾಗೆ ಮೆಕಪ್ ಮಾಡಿರುವುದದು ರಂಜಿತಾ, ಹೇರ್ ಸ್ಟೈಲ್ ಮಾಡಿರುವುದು ಶಿವು ಮೇಕ್‌ಓವರ್ ಹಾಗೂ ವಸ್ತ್ರ ವಿನ್ಯಾಸ ಮಾಡಿರುವುದು ಎಎಸ್‌ಆರ್‌ಸಿ ಡಿಸೈನ್ ಹೌಸ್.
ಮಾಲಾಶ್ರೀ ಮಗಳಾಗಿ ನೀವು ಕನ್ನಡಿಗರಿಗೆ ಹತ್ತಿರವಾಗಬೇಕು ದಯಿಟ್ಟು ಈ ಬಾಲಿವುಡ್ ಹಾಲಿವುಡ್ ತರ ಫೋಟೋಶೂಟ್ ಮಾಡಿಸಬೇಡಿ, ನಮ್ಮ ಕನ್ನಡತಿ ತರ ಇರಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.