Amulya twin kids: ಪುಸ್ತಕಗಳ ಸುತ್ತ ಅವಳಿ ಮಕ್ಕಳ ಫೋಟೋಶೂಟ್ ಮಾಡಿಸಿರುವ ಅಮೂಲ್ಯ!
ಗಣೇಶ ಹಬ್ಬದ ಪ್ರಯುಕ್ತ 'ನಮ್ಮ ಮನೆ ಗಣೇಶ' ಎಂದು ಅವಳಿ ಮಕ್ಕಳ ಫೋಟೋ ಹಂಚಿಕೊಂಡ ನಟಿ ಅಮೂಲ್ಯ.....

ಕನ್ನಡ ಚಿತ್ರರಂಗದ ಗೋಲ್ಡನ್ ಕ್ವೀನ್ ಅಮೂಲ್ಯ (Amulya Jagadish) ಗಣೇಶ ಹಬ್ಬದಂದು ತಮ್ಮ ಅವಳಿ ಮಕ್ಕಳ ಮುದ್ದಾದ ಫೋಟೋ ಹಂಚಿಕೊಂಡಿದ್ದಾರೆ.
'ನಮ್ಮ ಮನೆಯ ಪುಟ್ಟ ಗಣಪಗಳಿಂದ ನಿಮ್ಮಗೆ ಪ್ರೀತಿಯ ಗಣೇಶ ಚತುರ್ಥಿಯ ಹಾರ್ಧಿಕ ಶುಭಾಶಯಗಳು' ಎಂದು ಅಮೂಲ್ಯ ಬರೆದುಕೊಂಡಿದ್ದಾರೆ.
ಡೆನಿಮ್ ಡಂಗ್ರಿ ವೈಟ್ ಶರ್ಟ್ ಮತ್ತು ಬೋ ಟೈ ಕಾಂಬಿನೇಷನ್‌ನಲ್ಲಿ ಇಬ್ಬರೂ ಮಕ್ಕಳು ನಗುತ್ತಿರುವ ಫೋಟೋವನ್ನು ಅಮೂಲ್ಯ ಅಪ್ಲೋಡ್ ಮಾಡಿದ್ದಾರೆ.
ಈ ಫೋಟೋಶೂಟ್ ವಿಶೇಷತೆ ಏನೆಂದರೆ ಇಂಗ್ಲಿಷ್, ಕನ್ನಡ ಮತ್ತು ಹಿಂದಿ ಪುಸ್ತಗಳ ಮಗುವೆ ಮಕ್ಕಳನ್ನು ಮಲಗಿಸಿದ್ದಾರೆ. ಮಕ್ಕಳ ನಗುವಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಬರೋಬ್ಬರಿ ಐದೂವರೆ ತಿಂಗಳ ಬಳಿಕ ನಟಿ ಅಮೂಲ್ಯ ತಮ್ಮ ಅವಳಿ ಮಕ್ಕಳ ಫೋಟೋ ಬಹಿರಂಗ ಪಡಿಸಿದ್ದಾರೆ. ಶ್ರೀ ಕೃಷ್ಣಜನ್ಮಾಷ್ಟಮಿಯಿಂದು ಮಕ್ಕಳನ್ನು ಪರಿಚಯಿಸುತ್ತಿದ್ದೇನೆ. ನಿಮ್ಮ ಆಶೀರ್ವಾದ ಇರಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಮೂಲ್ಯ ಮನವಿ ಮಾಡಿದ್ದಾರೆ.
ಗೋಲ್ಡನ್ ಕ್ವೀನ್ ಎಂದೇ ಗುರುತಿಸಿಕೊಂಡಿರುವ ಅಮೂಲ್ಯ ಮಾರ್ಚ್ 1, 2022ರಂದು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ರು. ಇದಾದ ನಾಲ್ಕು ತಿಂಗಳ ಬಳಿಕ ಮಕ್ಕಳ ಕ್ಯೂಟ್ ಕೈಗಳ ಪೋಟೋವನ್ನು ರಿವೀಲ್ ಮಾಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.