ಹಾಂಗ್ ಕಾಂಗ್‌ನಲ್ಲಿ ಏಜೆಂಟ್ ಐಶಾನಿ ಶೆಟ್ಟಿ; ಪಕ್ಕದಲ್ಲಿರುವ ಹುಡುಗನ ಮೇಲೆ ನೆಟ್ಟಿಗರ ಕಣ್ಣು!
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ನಟಿ ಐಶಾನಿ ಶೆಟ್ಟಿ ಪ್ರವಾಸದ ಫೋಟೋ. ಬಾಯ್‌ಫ್ರೆಂಡ್ ಯಾರೆಂದು ಪ್ರಶ್ನೆ ಮಾಡಿದ ನೆಟ್ಟಿಗರು....
2015ರಲ್ಲಿ ವಾಸ್ತು ಪ್ರಕಾರ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಐಶಾನಿ ಶೆಟ್ಟಿ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ.
ಕೆಲವು ದಿನಗಳಿಂದ ಐಶಾನಿ ಶೆಟ್ಟಿ ಹಾಂಗ್ ಕಾಂಗ್ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ನಟಿ ಫೋಟೋ ಅಪ್ಲೋಡ್ ಮಾಡಿದ್ದಾರೆ.
ಐಶಾನಿ ಅಪ್ಲೋಡ್ ಮಾಡಿರುವ ಫೋಟೋದಲ್ಲಿ ಅವರ ಕುಟುಂಬವನ್ನು ತೋರಿಸಿದ್ದಾರೆ. ಅಲ್ಲದೆ ಐಶಾನಿ ಪಕ್ಕದಲ್ಲಿರುವ ಹುಡುಗ ಯಾರೆಂದು ಪ್ರಶ್ನೆ ಮಾಡಿದ್ದಾರೆ.
ಆನಂತರ 'ಪ್ರೀತಿಯ ತಮ್ಮ' ಎಂದು ಬರೆದುಕೊಂಡಿರುವ ಸಾಲುಗಳನ್ನು ಗಮನಿಸಿದ ಹುಡುಗರ ಹಾರ್ಟ್ ಬೀಟ್ ಕಡಿಮೆ ಆಗಿದೆ. ಬಾಯ್‌ಫ್ರೆಂಡ್ ಅಲ್ಲ ಎಂದು ಸುಮ್ಮನಾಗಿದ್ದಾರೆ.
'ಹಾಂಗ್ ಕಾಂಗ್‌ನಲ್ಲಿ ಏಜೆಂಟ್ ಐಶಾನಿ' ಎಂದು ಬರೆದುಕೊಂಡಿದ್ದಾರೆ. ಸೂಪರ್ ಕೂಲ್ ಆಗಿರುವ ಮಾಡ್ರನ್ಸ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ.
ಹೊಂದಿಸಿ ಬರೆಯಿರಿ ಮತ್ತು ಧರಣಿ ಮಂಡಳ ಮಧ್ಯೆದೊಳೆ ಎನ್ನುವ ಸಿನಿಮಾದಲ್ಲಿ ಐಶಾನಿ ಶೆಟ್ಟಿ ಅಭಿನಯಿಸಿದ್ದಾರೆ. ಮುಂದಿನ ಸಿನಿಮಾ ಬಗ್ಗೆ ಮಾಹಿತಿ ಕೊಟ್ಟಿಲ್ಲ.