- Home
- Entertainment
- Sandalwood
- ಕನ್ನಡದ ಈ ಪ್ರತಿಭಾನ್ವಿತ ನಟರಿಗೆ ಬೇರೆ ಭಾಷೆಯಲ್ಲಿ ಸಿಗುತ್ತಿದೆ ಆಫರ್… ಆದ್ರೆ ಕನ್ನಡದಲ್ಲಿ ಅವಕಾಶವೇ ಇಲ್ಲ!
ಕನ್ನಡದ ಈ ಪ್ರತಿಭಾನ್ವಿತ ನಟರಿಗೆ ಬೇರೆ ಭಾಷೆಯಲ್ಲಿ ಸಿಗುತ್ತಿದೆ ಆಫರ್… ಆದ್ರೆ ಕನ್ನಡದಲ್ಲಿ ಅವಕಾಶವೇ ಇಲ್ಲ!
ಕನ್ನಡದಲ್ಲಿ ಸ್ಟಾರ್ ನಟರ ಫೈಟ್, ಅಬ್ಬರ ಎಷ್ಟು ಜೋರಾಗಿದೆ ಅಂದ್ರೆ, ನಿಜವಾದ ಟ್ಯಾಲೆಂಟ್ ಗಳಿಗೆ ಇಲ್ಲಿ ಅವಕಾಶವೇ ಸಿಗುತ್ತಿಲ್ಲ. ಬೇರೆ ಭಾಷೆಯಲ್ಲಿ ಮಿಂಚುತ್ತಿರುವ ಕನ್ನಡದ ಅದ್ಭುತ ಪ್ರತಿಭೆಗಳಿವರು.

ಕನ್ನಡ ಚಿತ್ರರಂಗದಲ್ಲಿರುವ ಸ್ಟಾರ್ ನಟರು ಅತ್ಯುತ್ತಮ ನಟರು ಹೌದು, ಆದರೆ ಅವರಿಗಿರುವ ಬೆಲೆ, ಅವಕಾಶಗಳು ಕನ್ನಡದ ಹಲವು ಪ್ರತಿಭಾನ್ವಿತ ನಟ -ನಟಿಯರಿಗೆ (talented actors) ಸಿಕ್ಕಿಯೇ ಇಲ್ಲ. ಆದರೆ ಅವರಿಗೆ ಬೇರೆ ಭಾಷೆಯಲ್ಲಿ ಸಿಕ್ಕಾಪಟ್ಟೆ ಅವಕಾಶಗಳು ಸಿಗುತ್ತಿವೆ.
ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರುಗಳ ಸಿನಿಮಾ ಸಪ್ಪೆಯಾಗಿದ್ದರೂ ಸಹ, ಅವರಿಗೆ ಸಿಗುವಷ್ಟು ಅವಕಾಶಗಳು, ಕೆಲವು ಪ್ರತಿಭಾನ್ವಿತ ನಟರಿಗೆ ಸಿಗೋದೆ ಇಲ್ಲ. ಕೊನೆಗೆ ಚಿತ್ರರಂಗದಿಂದ ಕೇಳಿ ಬರೋದು ಒಂದೇ ಮಾತು ಜನರು ಸಿನಿಮಾ ನೋಡೋದಕ್ಕೆ ಬರೋದೆ ಇಲ್ಲ ಎಂದು.
ಕನ್ನಡದ ಪ್ರತಿಭಾನ್ವಿತ ನಟರಲ್ಲಿ ಒಬ್ಬ ವಿಜಯ್ ಕೃಷ್ಣ (Vijay Krishna). ಇವರೊಬ್ಬ ನೈಜ್ಯ ಅಭಿನಯದ ಮೂಲಕ ಜನಮನ ಗೆಲ್ಲುತ್ತಿರುವ ನಟ ಅಂತಾನೆ ಹೇಳಬಹುದು. ಆದರೆ ಈ ನಟನಿಗೆ ಬೇರೆ ಸಿನಿಮಾ ಇಂಡಷ್ಟ್ರಿಯಲ್ಲಿ ಸಿಗುತ್ತಿರುವಷ್ಟು ಖ್ಯಾತಿ ಉತ್ತಮ ಅವಕಾಶಗಳು, ಕನ್ನಡ ಸಿನಿಮಾದಲ್ಲಿ ಸಿಗುತ್ತಿದೆಯೇ? ಖಂಡಿತಾ ಇಲ್ಲ.
ಸದ್ಯ ಕನ್ನಡಲ್ಲಿ ವಿಜಯ್ ನಟಿಸಿರುವ ದೂರ ತೀರ ಯಾನಕ್ಕೆ ಉತ್ತಮ ಅಭಿಪ್ರಾಯಗಳು ಬಂದಿವೆ. ಕೆಲವು ಕನ್ನಡ ಸಿನಿಮಾದಲ್ಲೂ ಇವರು ನಟಿಸಿದ್ದಾರೆ. ಆದರೆ ಇವರು ಇದಕ್ಕೂ ಮುನ್ನ ಮಲಯಾಳಂನಲ್ಲಿ ಬ್ಯಾಸ್ಟರ್, ಹಿಂದಿಯಲ್ಲಿ ದಿ ಕೇರಳ ಸ್ಟೋರಿ (The Kerala Story), ಕಾಶ್ಮೀರ್ ಫೈಲ್ಸ್ ಮತ್ತು ಅವರೋಧ್ 2, ಮೊದಲಾದ ಸಿನಿಮಾಗಳಲ್ಲಿ ನೆನಪಿನಲ್ಲಿ ಉಳಿಯುವಂತಹ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ಇನ್ನು ನಟಿಯರ ಬಗ್ಗೆ ಹೇಳೋದಾದ್ರೆ ಸುಶ್ಮಿತಾ ಭಟ್ (Sushmitha Bhat). ಈಕೆ ಕಣ್ಣುಗಳಲ್ಲೇ ಅಭಿನಯ ಮಾಡುವ ಚತುರೆ. ಆದರೆ ಕನ್ನಡ ಚಿತ್ರರಂಗದಲ್ಲಿ ಇಂಥಹ ಪ್ರತಿಭೆಯನ್ನು ಗುರುತಿಸಲೇ ಇಲ್ಲ. ಅದಕ್ಕಾಗಿಯೇ ಈಗ ಸದ್ಯ ತಮಿಳು ಮತ್ತು ಮಲಯಾಳಂ ಸಿನಿಮಾದಲ್ಲಿ ಮಿಂಚುತ್ತಿದ್ದಾರೆ.
ಸುಶ್ಮಿತಾ ಮಲಯಾಳಂನಲ್ಲಿ ಮಮ್ಮೂಟಿಯಂತಹ (Mammootty) ಸೂಪರ್ ಸ್ಟಾರ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಡೊಮೆನಿಕಾ ದ ಲೇಡೀಸ್ ಪರ್ಸ್ ಸಿನಿಮಾ ಸೂಪರ್ ಹಿಟ್ ಆಗಿತ್ತು, ಅಲ್ಲದೇ ಇವರು ಲವ್ ಮ್ಯಾರೇಜ್ ಎನ್ನುವ ತಮಿಳು ಸಿನಿಮಾದಲ್ಲೂ ನಟಿಸಿದ್ದರು, ಆ ಸಿನಿಮಾ ಕೂಡ ಗೆದ್ದಿತ್ತು. ಆದರೆ ಕನ್ನಡದಲ್ಲಿ ಮಾತ್ರ ಅವಕಾಶ ಇಲ್ಲ.
ಇನ್ನು ದೀಕ್ಷಿತ್ ಶೆಟ್ಟಿ (Deekshith Shetty) ನಾಗಿಣಿ ಸೀರಿಯಲ್ ನಲ್ಲಿ ನಟಿಸಿದ ಬಳಿಕ ದಿಯಾ ಎನ್ನುವ ಅದ್ಭುತ ಸಿನಿಮಾದಲ್ಲಿ ನಟಿಸಿ ಗೆದ್ದರು. ಸದ್ಯ ಸಿನಿಮಾ ಇಂಡಸ್ಟ್ರಿಯ ಬ್ಯುಸಿ ನಟ ಎನ್ನಬಹುದು. ಯಾಕಂದ್ರೆ ಇವರ ಕೈಯಲ್ಲಿ 6 ಸಿನಿಮಾಗಳಿವೆ. ಆದರೆ ಇವರ ಪ್ರತಿಭೆಯನ್ನು ಸರಿಯಾಗಿ ಬಳಸಿಕೊಂಡದ್ದು ಕಡಿಮೆ.
ಕಿಟಿಎಂ ಮತ್ತು ಬ್ಲಿಂಕ್ ನಲ್ಲಿ ಅದ್ಭುತ ಸಿನಿಮಾಗಳಲ್ಲಿ ದೀಕ್ಷಿತ್ ನಟಿಸಿದ್ದಾರೆ. ಅದರೆ ಜೊತೆಗೆ ಇವರಿಗೆ ಮಲಯಾಳಂ ಮತ್ತು ತೆಲುಗು ಇಂಡಸ್ಟ್ರಿಯಿಂದ ಹೆಚ್ಚಿನ ಅವಕಾಶಗಳು ಬರುತ್ತಿವೆ. ದಸರಾ ಚಿತ್ರದಲ್ಲಿ ನಾಣೀ ಜೊತೆ ನಟಿಸಿದ್ದರು, ಇದೀಗ ಕೆಜೆಕ್ಯೂ ಮತ್ತು ದಿ ಗರ್ಲ್ ಫ್ರೆಂಡ್ ಎನ್ನುವ ತೆಲುಗು ಸಿನಿಮಾದಲ್ಲೂ ಒಪೀಸ್ ಎನ್ನುವ ಮಲಯಾಲಂ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.
ಪ್ರಿಯಾಂಕಾ ಮೋಹನ್ (Priyanka Mohan) ಕೂಡ ಅದ್ಭುತ ನಟಿ ಕನ್ನಡದ ಮೂಲಕವೇ ಸಿನಿಮಾ ರಂಗಕ್ಕೆ ಪರಿಚಿತರಾದ ನಟಿ, ಬಳಿಕ ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿ ಗೆದ್ದರು, ಆದರೆ ಕನ್ನಡದಲ್ಲಿ ಮತ್ಯಾವ ಸಿನಿಮಾದಲ್ಲೂ ಈ ನಟಿ ನಟಿಸಲೇ ಇಲ್ಲ.
ಭರತ್ ಬೋಪಣ್ಣ (Bharath Bopanna) ಸಹ ಉತ್ತಮ ನಟ, ಇವರು ತಮಿಳಿನಲ್ಲಿ ಮಿಶನ್ ಚಾಪ್ಟರ್ 1 ಹಾಗೂ ಮಲಯಾಲಂನಲ್ಲಿ ಬ್ರೊಮ್ಯಾನ್ಸ್ ಸಿನಿಮಾದಲ್ಲಿ ನಟಿಸಿ ಸಿನಿ ರಸಿಕರ ಮನ ಗೆದ್ದಿದ್ದರು. ಆದರೆ ಕನ್ನಡದಲ್ಲಿ ಎರಡು ಸಿನಿಮಾದಲ್ಲಿ ನಟಿಸಿದ್ದು ಬಿಟ್ಟರೆ, ಬಂದ ಬೇರೆ ಅವಕಾಶಗಳು ಕಡಿಮೆಯೇ.
ಚಿತ್ರರಂಗ ಮುಳುಗುತ್ತಿದೆ ಎನ್ನುವ ಬದಲು ಇಂತಹ ಅದ್ಭುತ ನಟ -ನಟಿಯರನ್ನು ಬಳಸಿ, ಒಂದೊಳ್ಳೆ ಕಥೆಯನ್ನು ಹುಟ್ಟು ಹಾಕಿ ಸಿನಿಮಾ ಮಾಡಿದ್ರೆ, ಎಲ್ಲಾ ಪ್ರೇಕ್ಷಕರು ಖಂಡಿತವಾಗಿಯೂ ಸಿನಿಮಾ ನೋಡಿಯೇ ನೋಡುತ್ತಾರೆ.