MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • Happy Birthday Sri Murali: ಆಚರಣೆಗೆ ಬ್ರೇಕ್, ಊರಿನಲ್ಲಿರೋಲ್ಲ ಎಂದ ಮದಗಜ!

Happy Birthday Sri Murali: ಆಚರಣೆಗೆ ಬ್ರೇಕ್, ಊರಿನಲ್ಲಿರೋಲ್ಲ ಎಂದ ಮದಗಜ!

ಇಂದು ರೋರಿಂಗ್ ಸ್ಟಾರ್ ಶ್ರೀಮುರಳಿ ಜನ್ಮದಿನ. ಈ ವರ್ಷ ಅಭಿಮಾನಿಗಳ ಜೊತೆ ಆಚರಿಸಿಕೊಳ್ಳುವುದಕ್ಕೆ ಬ್ರೇಕ್ ಹಾಕಿದ್ದಾರೆ.... 

2 Min read
Suvarna News | Asianet News
Published : Dec 17 2021, 11:22 AM IST
Share this Photo Gallery
  • FB
  • TW
  • Linkdin
  • Whatsapp
110

ಕನ್ನಡ ಚಿತ್ರರಂಗದ ರೋರಿಂಗ್ ಸ್ಟಾರ್ ಶ್ರೀಮುರಳಿ (Sri Murali) ಇಂದು 40ರ ವಸಂತಕ್ಕೆ ಕಾಲಿಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮದಗಜ (Madhagaja) ಕ್ರೇಜ್ ಹೆಚ್ಚಾಗುತ್ತಿದೆ. 

210

 ಸೋಷಿಯಲ್ ಮೀಡಿಯಾದಲ್ಲಿ (Social Media) ಆ್ಯಕ್ಟಿವ್ ಆಗಿರುವ ನಟ, ಆಚರಣೆಗೆ ಬ್ರೇಕ್ ಹಾಕಿರುವ ಬಗ್ಗೆ ಬರೆದುಕೊಂಡಿದ್ದಾರೆ. ಅಭಿಮಾನಿಗಳಿಗಾಗಿ ಸೆಲ್ಫಿಯೊಂದನ್ನು (Selfie) ಹಂಚಿಕೊಂಡಿದ್ದಾರೆ. 

310

'ನನ್ನ ಪ್ರೀತಿಯ ಅಭಿಮಾನಿಗಳೇ (Fans). ಈ ಬಾರಿ ನಿಮ್ಮೊಂದಿಗೆ ನನ್ನ ಹುಟ್ಟು ಹಬ್ಬವನ್ನು (Birthday) ಆಚರಿಸಿಕೊಳ್ಳಲಾಗುವುದಿಲ್ಲ. ಕಾರಣವೇನೆಂದು ನಿಮಗೆ ಗೊತ್ತಿರುವುದೆಂದು ಭಾವಿಸುವೆ.'

410

'ನಾನು ಬೆಂಗಳೂರಿನಲ್ಲೂ (Bengaluru) ಇರುವುದಿಲ್ಲ. ಸದಾ ನಿಮ್ಮ ಪ್ರೀತಿ ಹಾಗೂ ಆಶೀರ್ವಾದವನ್ನು ಬಯಸುವೆ. ನಿಮ್ಮ ಶ್ರೀಮುರಳಿ ಅಭಿಮಾನಿಗಳ ಅಭಿಮಾನಿ (Fan's Fan)' ಎಂದು ಬರೆದುಕೊಂಡಿದ್ದಾರೆ. 

510

ಶ್ರೀಮುರಳಿ ಅವರು ಹಂಚಿಕೊಂಡಿರುವ ಫೋಸ್ಟ್‌ ಅನ್ನು ಅವರ ಪತ್ನಿ ವಿದ್ಯಾ (Vidya Sri Murali) ಅವರೂ ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿದ್ಯಾ ಅವರು ಕೂಡ ಒಂದೂವರೆ ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. 

610

ಮದಗಜ ಸಿನಿಮಾ ಯಶಸ್ಸಿನಲ್ಲಿರುವ ಮುರಳಿ ಚಿತ್ರತಂಡ ಜೊತೆ ಕೆಲವು ದಿನಗಳಿಂದ ವಿಜಯ ಯಾತ್ರೆ (Vijaya Yatre) ಮಾಡುತ್ತಿದ್ದಾರೆ. ಸಿನಿಮಾ ಒಂದೇ ವಾರಕ್ಕೆ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ (Box Office collection) ಮಾಡಿದೆ. 

710

ನೂರಾರು ಕೋಟಿ ಬಂಡವಾಳ ಹಾಕಿ ಸಿನಿಮಾ ಮಾಡಿರುವ ನಿರ್ಮಾಪಕ ಉಮಾಪತಿ ಶ್ರೀನಿವಾಸ್ (Umapathy Srinivas) ಒಂದೇ ವಾರದಲ್ಲಿ 25 ಕೋಟಿ ರೂ. ಬಾಚಿಕೊಂಡಿದ್ದಾರೆ ಎನ್ನಲಾಗಿದೆ. ಈಗಿನ್ನೂ ಚಿತ್ರ ಬಿಡುಗಡೆಯಾಗಿ ವಾರ ಕಳೆದಿದ್ದು, ಇನ್ನೂ ಹೆಚ್ಚು ಗಳಿಸುವ ನಿರೀಕ್ಷೆ ಇದೆ. 

810

ಮದಗಜ ಸಿನಿಮಾದ ಡಿಜಿಟಲ್ ರೈಟ್ಸ್‌ (Digital rights), ಸ್ಯಾಟಿಲೈಟ್ ರೈಟ್ಸ್ ಮತ್ತು ಡಬ್ಬಿಂಗ್ ರೈಟ್ಸ್‌ (Dubbing rights) ಸಿನಿಮಾ ಬಿಡುಗಡೆಗೂ ಮುನ್ನವೇ ದೊಡ್ಡ ಮೊತ್ತಕ್ಕೆ ಮಾರಾಟವಾಯ್ತು. ಅದರಲ್ಲೂ ಹಿಂದಿ ಡಬ್ಬಿಂಗ್ 8 ಕೋಟಿಗೆ ಮಾರಾಟವಾಗಿದೆ. 

910

ಅಕ್ಟೋಬರ್ 29ರಂದು ಹೃದಯಾಘಾತದಿಂದ (Cardiac Arrest) ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಇಹಲೋಕ ತ್ಯಜಿಸಿದ್ದರು. ಈ ನೋವಿನಲ್ಲಿರುವ ಕುಟುಂಬಸ್ಥರು ಒಂದು ವರ್ಷ ಯಾವುದೇ ಆಚರಣೆ ಬೇಡ ಎಂದು ನಿರ್ಧರಿಸಿಕೊಂಡಿದ್ದಾರೆ. 

1010

ನೂರಾನು ಜನರು ಹಲವು ತಿಂಗಳ ಕಾಲ ಶ್ರಮ ಹಾಕಿ ದೊಡ್ಡ ಬಂಡವಾಳ ಹಾಕಿರುವ ಸಿನಿಮಾಗಳಿಗೆ ಯಾವುದೇ ತೊಂದರೆ ಆದಬಾರದು ಎನ್ನುವ ಕಾರಣ ಸಿನಿಮಾ ಕೆಲಸಗಳಲ್ಲಿ ಪುನೀತ್ ಪತ್ನಿ ಅಶ್ವಿನಿ (Ashwini Puneeth Rajkumar) ತೊಡಗಿಸಿಕೊಂಡg, ನಂತರ ಕುಟುಂಬಸ್ಥರು ಒಬ್ಬೊಬ್ಬರಾಗಿ ಕೆಲಸಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ

About the Author

SN
Suvarna News
ಸ್ಯಾಂಡಲ್‌ವುಡ್
ಹುಟ್ಟುಹಬ್ಬ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved