- Home
- Entertainment
- Sandalwood
- Photos: 37 ವರ್ಷದ ಹಿಂದೆ ಒಟ್ಟಿಗೆ ಶುರುವಾದ ಕರಿಯರ್; ಇಂದು ನಟ ರಂಗಾಯಣ ರಘು, ಮಂಗಳಾ ಅನ್ಯೋನ್ಯ ದಂಪತಿ!
Photos: 37 ವರ್ಷದ ಹಿಂದೆ ಒಟ್ಟಿಗೆ ಶುರುವಾದ ಕರಿಯರ್; ಇಂದು ನಟ ರಂಗಾಯಣ ರಘು, ಮಂಗಳಾ ಅನ್ಯೋನ್ಯ ದಂಪತಿ!
ಕನ್ನಡ ಚಿತ್ರರಂಗದ ಹಾಗೂ ರಂಗಭೂಮಿಯ ಇಬ್ಬರು ಅಪ್ರತಿಮ ಪ್ರತಿಭೆಗಳಾಗಿರುವ ನಟ ರಂಗಾಯಣ ರಘು ಮತ್ತು ನಟಿ ಮಂಗಳಾ ಎನ್ ಅವರ ಕರಿಯರ್ ಒಂದೇ ಮೂಲದಿಂದ ಚಿಗುರೊಡೆದದ್ದು ಎಂಬುದು ವಿಶೇಷವಾಗಿದೆ. ಇವರಿಬ್ಬರ ವೃತ್ತಿಜೀವನದ ಅಡಿಪಾಯವು ರಂಗಾಯಣದಲ್ಲಿ ಆರಂಭ ಆಗಿತ್ತು.

ರಂಗಭೂಮಿಯಲ್ಲಿ ನಟನೆ
80 ದಶಕದ ಅಂತ್ಯದಲ್ಲಿ ಬಿ.ವಿ. ಕಾರಂತರ ಮಾರ್ಗದರ್ಶನದಲ್ಲಿ 'ರಂಗಾಯಣ' ಸಂಸ್ಥೆ ಆರಂಭವಾಯಿತು. ಅಲ್ಲಿ ಆಯ್ಕೆಯಾದ ಮೊದಲ ತಂಡದಲ್ಲಿ ಕೆಸಿ ರಘುನಾಥ್ ಮತ್ತು ಎನ್ ಮಂಗಳಾ ಕೂಡ ಇದ್ದರು. ಇವರಿಬ್ಬರು ದಶಕಗಳ ಕಾಲ ರಂಗಭೂಮಿಯಲ್ಲಿ ಒಟ್ಟಿಗೆ ನಟಿಸಿದ್ದರು, ಕೆಲಸ ಮಾಡಿದ್ದರು.
ರಂಗಭೂಮಿಯಲ್ಲಿ ಕೆಲಸ
ಕೇವಲ ವೃತ್ತಿಜೀವನದಲ್ಲಷ್ಟೇ ಅಲ್ಲದೆ ಈ ಜೋಡಿ ವೈಯಕ್ತಿಕ ಜೀವನದಲ್ಲೂ ದಂಪತಿ ಆಗಿದೆ. ಇವರಿಗೆ ಚುಕ್ಕಿ ಎಂಬ ಮಗಳಿದ್ದಾಳೆ. ರಂಗಭೂಮಿಯ ಶಿಸ್ತು, ಅದರಲ್ಲಿಯೂ ವಿಭಿನ್ನ ಪಾತ್ರ ಪ್ರಯೋಗಗಳು ಇವರಿಬ್ಬರನ್ನು ದೊಡ್ಡ ಕಲಾವಿದರನ್ನಾಗಿ ಮಾಡಿದೆ.
ಸಂಚಾರಿ ಥಿಯೇಟರ್ ಆರಂಭ
1998ರಲ್ಲಿ ರಘು ಅವರು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ರಂಗಭೂಮಿಯಿಂದ ಚಿತ್ರರಂಗಕ್ಕೆ ಬಂದು, ಇಲ್ಲಿ ಆಕ್ಟಿವ್ ಆದರು. ಅಷ್ಟೇ ಅಲ್ಲದೆ ಹಾಸ್ಯನಟ, ಪೋಷಕ ನಟನಾಗಿ ನಿಜಕ್ಕೂ ಉತ್ತಮ ಛಾಪು ಮೂಡಿಸಿದ್ದಾರೆ. ವಿಶಿಷ್ಟ ಸಂಭಾಷಣಾ ಶೈಲಿ, ನೈಸರ್ಗಿಕ ಅಭಿನಯದಿಂದಲೇ ಹೆಸರು ಮಾಡಿದರು. ಇವರ ಪತ್ನಿ ಕೂಡ ಸಂಚಾರಿ ಎನ್ನುವ ಥಿಯೇಟರ್ ಆರಂಭಿಸಿದ್ದು, ಅಲ್ಲಿ ನಾಟಕಗಳನ್ನು ನಿರ್ದೇಶನ ಮಾಡುತ್ತಾರೆ, ನಟಿಸುತ್ತಾರೆ, ಆ ತಂಡವನ್ನು ನಿಭಾಯಿಸುತ್ತಾರೆ.
ಜನಪ್ರಿಯತೆ ತಂದ ದುನಿಯಾ ಸಿನಿಮಾ
ನಿರ್ದೇಶಕ ಸೂರಿ ಅವರ ‘ದುನಿಯಾ’ ಸಿನಿಮಾದಲ್ಲಿ ರಂಗಾಯಣ ರಘು ನಟಿಸಿದ್ದರು. ಅಲ್ಲಿಂದಲೇ ಇವರು ಜನಪ್ರಿಯತೆ ಗಳಿಸಲು ಆರಂಭಿಸಿದರು. ಇವರ ನೈಜ ಅಭಿನಯವು ಈ ಸಿನಿಮಾದ ಯಶಸ್ಸಿಗೆ ದೊಡ್ಡ ಬಲ ತಂದಿತ್ತು. ರಂಗಾಯಣ ರಘು ಮತ್ತು ಮಂಗಳಾ ಎನ್ ಅವರು ಶ್ರಮ, ಪ್ರತಿಭೆಯ ಮೂಲಕ ರಂಗಭೂಮಿಯಿಂದ ಬೆಳ್ಳಿತೆರೆಯವರೆಗೆ ಸಾಗಿ ಬಂದ ಹಾದಿ ಅನೇಕರಿಗೆ ಮಾದರಿ ಆಗಿದೆ.
ಮಂಗಳಾ ಎನ್ ಪೋಸ್ಟ್ ಏನು?
ನಾವು ನಮ್ಮ ವೃತ್ತಿ ಪ್ರಾರಂಭಿಸಿ 37 ವರ್ಷಗಳಾದವು ಈ ಸಂಕ್ರಾಂತಿಗೆ. ಎಲ್ಲೆಲ್ಲಿಂದಲೋ ಬಂದವರು ಇಲ್ಲಿ ಒಂದಾದೆವು ಎಂದು ರಂಗಾಯಣ ರಘು ಅವರ ಪತ್ನಿ ಮಂಗಳಾ ಎನ್ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

