- Home
- Entertainment
- Sandalwood
- ಪವರ್ ಸ್ಟಾರ್ ಅಷ್ಟೂ ಸಿನಿಮಾಗಳನ್ನು ಬೆನ್ನಿನ ಮೇಲೆ ಅಚ್ಚೆ ಹಾಕಿಸಿಕೊಂಡ ಅಭಿಮಾನಿ; ಫೋಟೋ ವೈರಲ್
ಪವರ್ ಸ್ಟಾರ್ ಅಷ್ಟೂ ಸಿನಿಮಾಗಳನ್ನು ಬೆನ್ನಿನ ಮೇಲೆ ಅಚ್ಚೆ ಹಾಕಿಸಿಕೊಂಡ ಅಭಿಮಾನಿ; ಫೋಟೋ ವೈರಲ್
ಅಪ್ಪಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್......
16

ಕನ್ನಡ ಚಿತ್ರರಂಗದ ಪವರ್ ಸ್ಟಾರ್, ಕರ್ನಾಟಕದ ರತ್ನ ಪುನೀತ್ ರಾಜ್‌ಕುಮಾರ್ ಅಗಲಿ ಅಕ್ಟೋಬರ್ 29ಕ್ಕೆ ಎರಡು ವರ್ಷ ಕಳೆಯುತ್ತದೆ.
26
ಇನ್ನೂ ಅಪ್ಪು ನೆನಪಿನಲ್ಲಿರುವ ಅಭಿಮಾನಿಗಳು ಪವರ್ ಸ್ಟಾರ್ ಹೆಸರು ಹೇಳಿಕೊಂಡು ಅದೆಷ್ಟೋ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ.
36
ಈಗ ಅಪ್ಪಟ ಪುನೀತ್ ಅಭಿಮಾನಿಯೊಬ್ಬರು ತಮ್ಮ ಬೆನ್ನಿನ ಮೇಲೆ ಸ್ಟಾರ್ ಹಾಕಿಸಿಕೊಂಡು ಪರಮಾತ್ಮ ಎಂದು ದೊಡ್ಡದಾಗಿ ಬರೆಸಿಕೊಂಡಿದ್ದಾರೆ.
46
ಅಷ್ಟೇ ಅಲ್ಲದೆ ಪುನೀತ್ ರಾಜ್‌ಕುಮಾರ್ ನಟಿಸಿರುವ ಅಷ್ಟೋ ಸಿನಿಮಾಗಳ ಹೆಸರು ಅಂದ್ರೆ....ಸುಮಾರು 30ಕ್ಕೂ ಸಿನಿಮಾಗಳ ಹೆಸರು ಅಚ್ಚೆ ಹಾಕಿಸಿಕೊಂಡಿದ್ದಾರೆ.
56
ಸಣ್ಣ ಪುಟ್ಟ ಅಚ್ಚೆ ಅಂದ್ರೆ ನೋವು ತಡೆದುಕೊಳ್ಳಬಹುದು ಆದರೆ ಬೆನ್ನು ಪೂರ್ತಿ ಅಚ್ಚೆ ಹಾಕಿಸಿಕೊಂಡಿರುವುದನ್ನು ನೋಡಿ ಇನ್ನಿತ್ತರ ಅಭಿಮಾನಿಗಳೇ ಶಾಕ್ ಆಗಿದ್ದಾರೆ.
66
ಇವತ್ತಿಗೂ ಅನೇಕರ ದೇವರ ಮನೆಯಲ್ಲಿ ಪುನೀತ್ ರಾಜ್‌ಕುಮಾರ್ ಫೋಟೋ ಇಟ್ಟು ಪೂಜೆ ಮಾಡುತ್ತಾರೆ, ಸೀಮಂತ ಕಾರ್ಯಕ್ರಮದಲ್ಲಿ ಡಿಕೋರೇಷನ್ ಆಗಿ ಪುನೀತ್ ಫೋಟೋ ಹಾಕುತ್ತಾರೆ.
Latest Videos