Puneeth Rajkumar Death:ಮರೆಯಾದ ನಗುವಿನ ಪರಮಾತ್ಮ
ಇಡೀ ಚಿತ್ರರಂಗಕ್ಕೆ ಇಂದು ಕರಾಳ ದಿನ. ಯಾರೂ ಊಹಿಸಿಕೊಳ್ಳಲಾಗದ ಸುದ್ದಿಯೊಂದು ಬರಸಿಡಿಲಿನಂತೆ ಬಂದೆರೆಗಿದೆ. ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ ಹಾಡಿನಂತೆ ನಮ್ಮನೆಲ್ಲ ಬಿಟ್ಟು ದೂರದ ಊರಿಗೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹೋಗಿದ್ದಾರೆ.

ಯಾರಿಗೂ ಕೂಡ ಈ ರೀತಿಯ ಸ್ಥಿತಿ ನಿರ್ಮಾಣವಾಗುತ್ತೆ ಅಂದುಕೊಂಡಿರಲಿಲ್ಲ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮನ್ನೆಲ್ಲ ಅಗಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹೊಸಬರ(New Youngsters) ಬೆನ್ನಿಗೆ ನಿಂತಿದ್ದ ಯುವರತ್ನ ಕೊನೆಯುಸಿರೆಳೆದಿದ್ದಾರೆ.
ಬಾಲ್ಯದಲ್ಲಿಯೇ ನಟನೆಯ ಕೌಶಲ್ಯ ಹೊಂದಿರುವ ಪುನೀತ್ ರಾಜ್ ಕುಮಾರ್ ತಂದೆ ರಾಜ್ ಕುಮಾರ್ ಅವರೊಂದಿಗೆ 1980ರಲ್ಲಿ ಮೂಡಿಬಂದ ವಸಂತ ಗೀತ ಸಿನಿಮಾದಲ್ಲಿ ಮೊದಲು ನಟಿಸಿದರು. ಹೊಸಬರನ್ನ ಪ್ರೋತ್ಸಾಹಿಸಲೆಂದೇ ತಮ್ಮ ಸ್ವಂತ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿದರು.
ದಿವಂಗತ ಡಾ. ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಅವರ ಕೊನೆಯ ಪುತ್ರ ಪುನೀತ್ ರಾಜ್ ಕುಮಾರ್ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಚಿಕ್ಕಂದಿನಿಂದಲೇ ತಂದೆಯೊಂದಿಗೆ ಪರದೆಯ ಮೇಲೆ ಮಿಂಚುವ ಮೂಲಕ ಕನ್ನಡಿಗರಿಗೆ ಅಚ್ಚುಮೆಚ್ಚು ಎನಿಸಿಕೊಂಡರು.
ಭಾಗ್ಯವಂತರು ಸಿನಿಮಾದಲ್ಲಿ ನಟ ಪುನೀತ್ ಅವರ ಬಾನ ದಾರಿಯಲ್ಲಿ ಹಾಡು ಇಂದಿಗೂ ಅಭಿಮಾನಿಗಳ ಫೇವರೇಟ್ ಎನಿಸಿಕೊಂಡಿದೆ. ಅಪ್ಪು, ಪವರ್ ಸ್ಟಾರ್, ಕನ್ನಡದ ರಾಜರತ್ನ ಎಂಬದು ಅವರಿಗೆ ಮತ್ತು ಅವರ ನಟನೆಗೆ ಸಿಕ್ಕ ಗೌರವ.
ಸಿನಿಮಾ ಮಾತ್ರದಲ್ಲದೆ, ಟಿವಿ ಶೋನಲ್ಲೂ ಅಪ್ಪು ಕಾಣಿಸಿಕೊಂಡಿದ್ದರು. ಕನ್ನಡ ಕೋಟ್ಯಾಧಿಪತಿ ನಿರೂಪಣೆಯನ್ನು ಮಾಡಿದ್ದರು. ಹೂ ವಾಂಟ್ಸ್ ಟು ಬಿ ಮಿಲಿಯನೇರ್ ಆವೃತ್ತಿಯಲ್ಲಿ ಮಿಂಚಿದ್ದರು.
27 ಕ್ಕೂ ಹೆಚ್ಚಿನ ಸಿನಿಮಾದಲ್ಲಿ ನಾಯಕ ನಟನಾಗಿ ಮಿಂಚಿದ್ದ ಪುನೀತ್ ರಾಜ್ ಕುಮಾರ್ ಫಿಟ್ನೆಸ್ ಅಷ್ಟೇ ಒತ್ತು ನೀಡುತ್ತಾ ಬಂದಿದ್ದರು. 46 ವರ್ಷ ವಯಸ್ಸಿನ ಅವರು ಇದ್ದಕ್ಕಿದ್ದಂತೆ ಚಿರನಿದ್ರೆಗೆ ಜಾರಿರುವ ವಿಚಾರ ಸ್ಯಾಂಡಲ್ವುಡ್ಗೆ ದೊಡ್ಡ ನೋವುಂಟು ಮಾಡಿದೆ.
ಚಿಕ್ಕಂದಿನಿಂದಲೇ ತಂದೆಯೊಂದಿಗೆ ಪರದೆಯ ಮೇಲೆ ಮಿಂಚುವ ಮೂಲಕ ಕನ್ನಡಿಗರಿಗೆ ಅಚ್ಚುಮೆಚ್ಚು ಎನಿಸಿಕೊಂಡರು. ರಾಘವೇಂದ್ರ ರಾಜ್ ಕುಮಾರ್, ಶಿವರಾಜ್ ಕುಮಾರ್ ಅವರ ಪ್ರೀತಿಯ ತಮ್ಮನಾಗಿ ಪುನೀತ್ ರಾಜ್ ಕುಮಾರ್ ಗುರುತಿಸಿಕೊಂಡಿದ್ದರು.
1982ರಲ್ಲಿ ಚಲಿಸುವ ಮೋಡ, 1983ರಲ್ಲಿ ಎರಡು ನಕ್ಷತ್ರಗಳು , 1985ರಲ್ಲಿ ಬೆಟ್ಟದ ಹೂವು ಸಿನಿಮಾದ ಮೂಲಕ ಅಭಿಮಾನಿಗಳನ್ನು ರಂಚಿಸುವ ಪ್ರವೃತ್ತಿ ಹೊಂದಿದ್ದರು. ಅಚ್ಚರಿ ವಿಚಾರವೆಂದರೆ ಬೆಟ್ಟದ ಹೂವು ಚಿತ್ರದ ರಾಮು ಪಾತ್ರದ ಬಾಲನಟನೆಗೆ ರಾಷ್ಟ್ರ ಚಲನಚಿತ್ರ ಪ್ರಶಸ್ತಿಗೆ ಪಾತ್ರರಾದರು.
ಸಂತೋಷ್ ಆನಂದರಾಮ್ ನಿರ್ದೇಶನದ ಯುವರತ್ನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳತ್ತ ಕೈ ಬೀಸಿದ ಕ್ಷಣ.
ಗಾಜನೂರಿನ ಮನೆಗೆ ಭೇಟಿ ನೀಡಿದ್ದಾಗ ಪುನೀತ್ ಈ ರೀತಿ ಪೋಸ್ ಕೊಟ್ಟಿದ್ದರು. ಇನ್ನು ಪ್ರತಿದಿನ ವ್ಯಾಯಾಮ, ಯೋಗಭ್ಯಾಸ ಮಾಡುತ್ತಿದ್ದ ಪುನೀತ್ ಈ ರೀತಿ ಮೃತಪಟ್ಟಿರುವುದು ಯಾರಿಂದಲೂ ನಂಬಲು ಸಾಧ್ಯವಾಗುತ್ತಿಲ್ಲ.