ಮುಖದಲ್ಲಿ ಮಹಾಲಕ್ಷ್ಮಿ ಕಳೆ; ನೆನಪಿರಲಿ ಪ್ರೇಮ್ ಪತ್ನಿ ಜ್ಯೋತಿ ಫೋಟೋಶೂಟ್ ವೈರಲ್!
ರೇಶ್ಮೆ ಸೀರೆ ಧರಿಸಿ ಲಕ್ಷಣವಾಗಿ ಅಲಂಕಾರ ಮಾಡಿಕೊಂಡು ಫೋಟೋಶೂಟ್ ಮಾಡಿಸಿದ ಜ್ಯೋತಿ ಪ್ರೇಮ್.ಫೋಟೋ ವೈರಲ್....
ಕನ್ನಡ ಚಿತ್ರರಂಗದ ಲವ್ಲಿ ಸ್ಟಾರ್ ಪ್ರೇಮ್ ಪತ್ನಿ ಜ್ಯೋತಿ ಪ್ರೇಮ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್ ಆಗಿದ್ದು ಹೊಸ ಫೋಟೋಶೂಟ್ ಮಾಡಿಸಿದ್ದಾರೆ..
ಇತ್ತೀಚಿಗೆ ಪ್ರೇಮ್ ಜೊತೆ ಖಾಸಗಿ ಟಿವಿ ಹಾಗೂ ಸಿನಿಮಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಪ್ರೇಮ್ ಅಭಿಮಾನಿಗಳು ಜ್ಯೋತಿ ಅಕ್ಕ ಎಂದು ಕರೆಯುತ್ತಾರೆ..
ಈಗ ಟ್ರೆಂಡ್‌ನಲ್ಲಿರುವ ಹಳದಿ ಮತ್ತು ನೇರಳೆ ಕಾಂಬಿನೇಷನ್ ಸೀರೆಯಲ್ಲಿ ಜ್ಯೋತಿ ಪ್ರೇಮ್ (Jyothi Prem) ಫೋಟೋಶೂಟ್ ಮಾಡಿಸಿದ್ದಾರೆ.
ಪ್ಯಾರೆಟ್ ಗ್ರೀನ್ ಮತ್ತು ರಾಮಾ ಗ್ರೀನ್ ಕಾಂಬಿನೇಷನ್ ರೇಶ್ಮೆ ಸೀರೆಯಲ್ಲಿ (Silk Saree) ಮತ್ತೊಂದು ಫೋಟೋಶೂಟ್ ಮಾಡಿಸಿದ್ದಾರೆ.
ಜ್ಯೋತಿ ಕೂಡ ಸಿನಿಮಾಗಳಲ್ಲಿ ನಟಿಸಲಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಇನ್ನು ಜೀ ಕನ್ನಡ ಜೋಡಿ ನಂ 1 ರಿಯಾಲಿಟಿ ಶೋನಲ್ಲಿ ಪ್ರೇಮ್ ಜಡ್ಜ್ ಆಗಿದ್ದಾರೆ. ಆಗಾಗ ಸ್ಪೆಷಲ್ ಗೆಸ್ಟ್ ಆಗಿ ಜ್ಯೋತಿ ಕೂಡ ಎಂಟ್ರಿ ಕೊಡುತ್ತಿದ್ದಾರೆ.
ಗುರು ಶಿಷ್ಯರು ಸಿನಿಮಾ ಮೂಲಕ ಪುತ್ರ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಟಗರು ಪಲ್ಯ ಸಿನಿಮಾ ಮೂಲಕ ಮಗಳು ಅಮೃತಾ ಚಂದನವನಕ್ಕೆ ಕಾಲಿಡುತ್ತಿದ್ದಾರೆ.