- Home
- Entertainment
- Sandalwood
- 16 ವರ್ಷದ ಬಳಿಕ ಸಿಕ್ಕಿತ್ತು ಸಕ್ಸಸ್; ಅಂಬರೀಶ್ ಮಾತು ನೆನೆದು ಭಾವುಕರಾಗಿದ್ರು ದಿಲೀಪ್ ರಾಜ್
16 ವರ್ಷದ ಬಳಿಕ ಸಿಕ್ಕಿತ್ತು ಸಕ್ಸಸ್; ಅಂಬರೀಶ್ ಮಾತು ನೆನೆದು ಭಾವುಕರಾಗಿದ್ರು ದಿಲೀಪ್ ರಾಜ್
ಕನ್ನಡದ ನಟ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನರಾಗಿದ್ದಾರೆ. 'ಬಾಯ್‌ಫ್ರೆಂಡ್' ಚಿತ್ರದ ಮೂಲಕ ಪಾದಾರ್ಪಣೆ ಮಾಡಿ, ಹಲವು ವರ್ಷಗಳ ಹೋರಾಟದ ನಂತರ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯ ಎಜೆ ಪಾತ್ರದ ಮೂಲಕ ಕರುನಾಡಿನ ಮನೆಮಾತಾಗಿದ್ದರು.

ನಟ ದಿಲೀಪ್ ರಾಜ್ ನಿಧನ
ಕನ್ನಡ ಚಿತ್ರರಂಗದ ನಟ, ನಿರ್ದೇಶಕ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದ ಬಹುಮುಖ ಪ್ರತಿಭೆ ದಿಲೀಪ್ ರಾಜ್ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. 2005ರಲ್ಲಿ ಬಾಯ್ ಫ್ರೆಂಡ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ದಿಲೀಪ್, ಬಿಗ್ ಸಕ್ಸಸ್ ಪಡೆಯಲು ಬರೋಬ್ಬರಿ 16 ವರ್ಷ ಕಾದಿದ್ದರು. ದಿಲೀಪ್ ರಾಜ್ ನಿಧನದ ಸುದ್ದಿ ಕೇಳಿ ಇಡೀ ಚಿತ್ರರಂಗ ಆಘಾತಕ್ಕೊಳಗಾಗಿದೆ.

ಸಕ್ಸಸ್ ಸಿಹಿ ನೀಡಿದ್ದು ಹಿಟ್ಲರ್ ಕಲ್ಯಾಣ ಸೀರಿಯಲ್
ಚಿತ್ರರಂಗದಲ್ಲಿ ಹಲವು ಸೋಲುಗಳನ್ನು ನೋಡಿದ್ದ ದಿಲೀಪ್ ರಾಜ್ ಅವರಿಗೆ ದೊಡ್ಡಮಟ್ಟದ ಯಶಸ್ಸು ನೀಡಿದ್ದು ಜೀ ಕನ್ನಡದ ಹಿಟ್ಲರ್ ಕಲ್ಯಾಣ ಸೀರಿಯಲ್. ಈ ಧಾರಾವಾಹಿಯಲ್ಲಿ AJ ಆಗಿ ಕಾಣಿಸಿಕೊಂಡಿದ್ದ, ದಿಲೀಪ್ ರಾಜ್ ಕರುನಾಡಿನ ಮನೆ ಮಾತಾಗಿದ್ದರು. ಕೆಲವು ಸಂದರ್ಶನಗಳಲ್ಲಿ ಅವಕಾಶಗಳ ಕೊರತೆ ಬಗ್ಗೆ ದಿಲೀಪ್ ರಾಜ್ ಮಾತನಾಡಿದ್ದರು.
ಪಾತ್ರೆಗಳ ಆಯ್ಕೆಯಲ್ಲಿ ತುಂಬಾ ಸೆಲೆಕ್ಟಿವ್
ಮೊದಲ ಚಿತ್ರ ಬಾಯ್‌ಫ್ರೆಂಡ್ ಮ್ಯೂಸಿಕಲಿ ಹಿಟ್ ಆಗಿತ್ತು. ನಂತರ ಪುನೀತ್ ರಾಜ್‌ಕುಮಾರ್ ನಟನೆಯ ಮಿಲನ ಸಿನಿಮಾದಲ್ಲಿ ನಟಿಸಿದ್ದರು. ಪಾತ್ರಗಳ ಆಯ್ಕೆಯಲ್ಲಿ ಸಿಕ್ಕಾಪಟ್ಟೆ ದಿಲೀಪ್ ರಾಜ್ ತುಂಬಾ ಸ್ಟ್ರಿಕ್ಟ್ ಆಗಿದ್ರು. ಇದಾದ ನಂತರ ಬಂದ ಯು ಟರ್ನ್ ಸಿನಿಮಾದಲ್ಲಿಯೂ ದಿಲೀಪ್ ರಾಜ್ ನಟಿಸಿದ್ದರು. ಪೋಷಕ ಪಾತ್ರಗಳ ಮೂಲಕವೇ ಜನಪ್ರಿಯರಾದರು.
ಸಂಗಾತಿ ಬಗ್ಗೆ ಮೆಚ್ಚುಗೆ ಮಾತುಗಳು
ಸಿನಿಮಾಗಳ ನಂತ್ರ ಕಿರುತೆರೆ ಲೋಕಕ್ಕೆ ಬಂದ ದಿಲೀಪ್ ರಾಜ್ ಅವರನ್ನು ಕರುನಾಡು ಅಪ್ಪಿ ಮುದ್ದಾಡಿತ್ತು. ಹಿಟ್ಲರ್ ಕಲ್ಯಾಣ ಸೀರಿಯಲ್‌ಗೆ ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ತಮ್ಮ ಸಿನಿ ಜೀವನದ ಕಷ್ಟಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಹಾಗೆಯೇ ತಮ್ಮೆಲ್ಲಾ ಕಷ್ಟಗಳಲ್ಲಿ ಜೊತೆಯಾಗಿ ನಿಂತ ಪತ್ನಿ ವಿದ್ಯಾ ಅವರನ್ನು ಸಹ ಹಾಡಿ ಹೊಗಳಿದ್ದರು.
ಅಂಬಿ ಮಾತು
ರೆಬೆಲ್ ಸ್ಟಾರ್ ಅಂಬರೀಶ್ ಅವರ ಕೊನೆಯ ಚಿತ್ರ 'ಅಂಬಿ ನಿಂಗ್ ವಯಸ್ಸಾಯ್ತೋ' ನಲ್ಲಿ ಅಂಬಿ ಮಗನಾಗಿ ದಿಲೀಪ್ ರಾಜ್ ನಟಿಸಿದ್ದರು. ಈ ಸಿನಿಮಾದಲ್ಲಿ ದಿಲೀಪ್ ಅವರ ನಟನಾ ಸಾಮರ್ಥ್ಯವನ್ನು ಅಂಬರೀಶ್ ಗುರುತಿಸಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ, ಅವಕಾಶಗಳ ಕೊರತೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು ಎಂಬ ವಿಷಯವನ್ನು ನಟ ದಿಲೀಪ್ ರಾಜ್ ಹೇಳಿಕೊಂಡು ಭಾವುಕರಾಗಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

