Devaraj In Mafia: ಪುತ್ರ ಪ್ರಜ್ವಲ್ ಜೊತೆ ಮತ್ತೆ ದೇವರಾಜ್ ಖಾಕಿ ಖದರ್!
ಹಿರಿಯ ನಟ ಪೊಲೀಸ್ ಡ್ರೆಸ್‌ನಲ್ಲಿ ಕಂಡರು. ಅವರ ಜತೆಗೆ ಪ್ರಜ್ವಲ್ ದೇವರಾಜ್ ಕೂಡ ಖಾಕಿ ವೇಷದಲ್ಲಿ ಎಂಟ್ರಿ ಕೊಟ್ಟರು. ಹೀಗೆ ಇಬ್ಬರನ್ನು ಮತ್ತೆ ಖಾಕಿ ಖದರ್‌ನಲ್ಲಿ ತೋರಿಸುತ್ತಿರುವ ಸಿನಿಮಾ ‘ಮಾಫಿಯಾ’.

ಮೊನ್ನೆಯಷ್ಟೆ ಚಿತ್ರಕ್ಕೆ ಮುಹೂರ್ತ ನಡೆಯಿತು. ಈಗ ಚಿತ್ರೀಕರಣ ಸೆಟ್‌ನಲ್ಲಿ ಚಿತ್ರತಂಡ ಮಾಧ್ಯಮಗಳಿಗೆ ಎದುರಾಯಿತು. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಕಲಾ ನಿರ್ದೇಶಕ ಶ್ರೀನಿವಾಸ್ ಅವರು ಪೊಲೀಸ್ ಕಂಟೊ್ರೀಲ್ ರೂಮ್ ಸೆಟ್ ಹಾಕಿದ್ದರು. ಅದೇ ಸೆಟ್‌ನಲ್ಲಿ ಚಿತ್ರತಂಡ ಮಾತಿಗೆ ಹಾಜರಾಯಿತು.
‘ನಾನು ಮತ್ತು ನನ್ನ ಮಗ ಇಬ್ಬರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದೇವೆ. ಇಬ್ಬರು ಮೊದಲ ಬಾರಿಗೆ ಒಂದೇ ಚಿತ್ರದಲ್ಲಿ ಪೊಲೀಸ್ ಪಾತ್ರ ಮಾಡುತ್ತಿದ್ದೇವೆ. ಯುವ ತಂಡದ ಜತೆಗೆ ಕೆಲಸ ಮಾಡುತ್ತಿರುವ ಖುಷಿ ಇದೆ’ ಎಂದರು ದೇವರಾಜ್.
ಸಾಧು ಕೋಕಿಲ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಲೋಹಿತ್ ನಿರ್ದೇಶನ ಮಾಡುತ್ತಿದ್ದಾರೆ. ‘ಒಂದು ಒಳ್ಳೆಯ ಸೆಟ್ ಹಾಕಿದ್ದಾರೆ. ಅಪ್ಪನ ಜತೆಗೆ ಕೆಲಸ ಮಾಡುವ ಅವಕಾಶ ಮತ್ತೆ ಸಿಕ್ಕಿದೆ' ಎಂದರು
' ಇಲ್ಲಿ ನನ್ನ ತಂದೆ ಅವರು ನನ್ನ ಹಿರಿಯ ಪೊಲೀಸ್ ಅಧಿಕಾರಿ ಪಾತ್ರ. ಈ ಚಿತ್ರದ ಮೂಲಕ ಹೊಸ ಮಾಫಿಯಾ ಕತೆ ಹೇಳುತ್ತಿದ್ದಾರೆ ನಿರ್ದೇಶಕರು. ತುಂಬಾ ಅಚ್ಚುಕಟ್ಟಾಗಿ ಚಿತ್ರವನ್ನು ರೂಪಿಸುತ್ತಿದ್ದಾರೆ’ ಎಂದು ಪ್ರಜ್ವಲ್ ದೇವರಾಜ್ ಹೇಳಿಕೊಂಡರು.
‘ಶೂಟಿಂಗ್ ತಯಾರಿ ನೋಡಿದಾಗ ಇವರು ಹೊಸಬರು ಅನಿಸುವುದಿಲ್ಲ. ಎಲ್ಲರು ನುರಿತ ತಂತ್ರಜ್ಞರಂತೆ ಕಾಣುತ್ತಿದ್ದಾರೆ. ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಜತೆಗೆ ಕೆಲಸ ಮಾಡುತ್ತಿರುವುದಕ್ಕೆ ಖುಷಿ ಇದೆ’ ಎಂದು ಹೇಳಿದ್ದು ಸಾಧು ಕೋಕಿಲ.
ನಿರ್ದೇಶಕ ಲೋಹಿತ್, ನಿರ್ಮಾಪಕ ಕುಮಾರ್ ಬಿ ಚಿತ್ರದ ಕುರಿತು ಹೇಳಿಕೊಂಡರು. ಇಂದು ತಂದೆ ಮಗನ ಜುಗಲ್ ಬಂದಿ ಅಂತ ಬೇಕಾದರೂ ಅಂದುಕೊಳ್ಳಬಹುದು. ಮಾಫಿಯಾ ಮತ್ತು ಖಾಕಿ ಖದರ್ ಎರಡು ಒಟ್ಟಿಗೆ ಇರುವ ಕತೆ ಈ ಚಿತ್ರದಲ್ಲಿದೆ ಎಂಬುದು ಚಿತ್ರತಂಡದ ಮಾತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.