ದರ್ಶನ್‌ನ ತಬ್ಬಿಕೊಂಡ ಯುವರಾಜ್‌ಕುಮಾರ್; ದೊಡ್ಡಮನೆ ಹುಡುಗನಿಗೆ ದಚ್ಚು ಸಪೋರ್ಟ್!
ದೊಡ್ಡಮಗ ಕುಡಿಗೆ ಸಪೋರ್ಟ್ ಮಾಡಿದ ದಚ್ಚು. ಯುವ ಚಿತ್ರತಂಡದಲ್ಲಿ ಕಾಣಿಸಿಕೊಂಡ ಚಾಲೆಂಜಿಂಗ್ ಸ್ಟಾರ್....

ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ದೊಡ್ಡಮನೆ ಕುಡಿ ಯುವರಾಜ್‌ಕುಮಾರ್ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗುತ್ತಿದೆ.
ಸಂತೋಷನ್ ಆನಂದ್ ರಾಮ್ ನಿರ್ದೇಶನದ ಯುವ ಸಿನಿಮಾದಲ್ಲಿ ಯುವರಾಜ್‌ಕುಮಾರ್ ಮತ್ತು ಸಪ್ತಮಿ ಗೌಡ ನಟಿಸುತ್ತಿದ್ದಾರೆ. ಚಿತ್ರೀಕರಣ ಭರದಿಂದ ಸಾಗುತ್ತಿದೆ.
ಸಿನಿಮಾ ಸೆಟ್‌ಗೆ ದರ್ಶನ್ ಸರ್ಪ್ರೈಸ್ ಕೊಟ್ಟಿರುವ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ದಚ್ಚು ಸಪೋರ್ಟ್‌ಗೆ ಮೆಚ್ಚುಗೆ ವ್ಯಕ್ತವಾಗಿದೆ.
ದರ್ಶನ್ ಜೊತೆ ನಟ ತರುಣ್ ಸುಧೀರ್ ಕೂಡ ಸೆಟ್‌ಗೆ ಆಗಮಿಸಿ ವಿಶ್ ಮಾಡಿದ್ದಾರೆ. ಯುವ ರಾಜ್‌ಕುಮಾರ್ ಮತ್ತು ದರ್ಶನ್ ತಬ್ಬಿಕೊಂಡಿರುವ ಫೋಟೋ ಸಖತ್ ವೈರಲ್ ಆಗುತ್ತಿದೆ.
ಈ ಹಿಂದೆ ಅವಕಾಶ ಸಿಕ್ಕರೆ ಖಂಡಿತ ಒಟ್ಟಿಗೆ ನಟಿಸುತ್ತೀವಿ ಎಂದು ಪುನೀತ್ ರಾಜ್‌ಕುಮಾರ್ ಬಗ್ಗೆ ದರ್ಶನ್ ಹೇಳಿದ್ದರು. ಈಗ ಯುವ ಮತ್ತು ದಚ್ಚು ಸಿನಿಮಾ ಮಾಡಲಿ ಎನ್ನುತ್ತಾರೆ ಅಭಿಮಾನಿಗಳು.
ಚಿತ್ರರಂಗವನ್ನು ರೂಲ್ ಮಾಡಿರುವ ಸ್ಟಾರ್ ನಟರು ಹೀಗೆ ಪ್ರತಿಯೊಬ್ಬರನ್ನು ಸಪೋರ್ಟ್ ಮಾಡಿ ಭೇಟಿ ಮಾಡಿದರೆ ನಮ್ಮ ಚಿತ್ರರಂಗದಲ್ಲಿ ಒಗ್ಗಟ್ಟಿರುತ್ತದೆ ಎನ್ನುತ್ತಾರೆ ಫ್ಯಾನ್ಸ್.