ನಟ Anishಗೆ ಕೊರೋನಾ ಪಾಸಿಟಿವ್!
ನನ್ನ ಸಂಪರ್ಕಕ್ಕೆ ಬಂದವರು ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದ ನಟ ಅನೀಶ್.
ಇಷ್ಟು ದಿನ ಬಾಲಿವುಡ್ (Bollywood) ಸೆಲೆಬ್ರಿಟಿಗಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಳ್ಳುತ್ತಿತ್ತು. ಆದರೀಗ ಸ್ಯಾಂಡಲ್‌ವುಡ್ (Sandalwood) ನಟರಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.
'ರಾಮಾರ್ಜುನ' (Ramarjuna) ಚಿತ್ರದ ನಟ ಕಮ್ ನಿರ್ದೇಶಕ ನಟ ಅನೀಶ್‌ಗೆ (Anish) ಕೊರೋನಾ ಸೋಂಕು ತಗುಲಿದೆ ಎಂದು ಬರೆದುಕೊಂಡಿದ್ದಾರೆ.
'ಹಾಯ್ ನನಗೆ ಕೊರೋನಾ ಪಾಸಿಟಿವ್ (Covid19 positive) ಆಗಿದೆ ಎಂದು ಇಂದು ತಿಳಿದು ಬಂದಿದೆ. ನಾನು ಐಸೋಲೇಟ್ ಆಗಿದ್ದೀನಿ,' ಎಂದು ಅನೀಶ್ ಬರೆದುಕೊಂಡಿದ್ದಾರೆ.
'ಆರೋಗ್ಯ ಇಲಾಖೆ ನೀಡಿರುವ ಮಾರ್ಗ ಸೂಚಿಗಳನ್ನು (Guidelines of Health Department) ನಾನು ಪಾಲಿಸುತ್ತಿರುವೆ. ಮೂರ್ನಾಲ್ಕು ದಿನಗಳಲ್ಲಿ ನನ್ನ ಸಂಪರ್ಕದಲ್ಲಿದ್ದವರು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ,' ಎಂದು ಕೇಳಿ ಕೊಂಡಿದ್ದಾರೆ.
ಸಂಕ್ರಾಂತಿ ಹಬ್ಬದ ದಿನ ಅನೀಶ್ ತಮ್ಮ ಹೊಸ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಚಿತ್ರದ ಶೀರ್ಷಿಕೆ ಬೆಂಕಿ (Benki) ಎನ್ನಲಾಗಿದೆ.
ಪೋಸ್ಟರ್‌ನಲ್ಲಿ ಅನೀಶ್ ಕಾಣಿಸಿಕೊಂಡಿರುವ ರೀತಿ ನೋಡಿ ಇದು ಮಾಸ್ ಲುಕ್ ಇರಬಹುದು ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಕೆಲವು ನೀವು ತಮಿಳು ನಟನಂತೆ ಕಾಣುತ್ತೀರ ಎಂದಿದ್ದಾರೆ.