ವೀರ ಕಂಬಳ ಸಿನಿಮಾದಲ್ಲಿ ಆದಿತ್ಯ ಗ್ಯಾಂಗ್‌ಸ್ಟರ್!
ತಂದೆ ನಿರ್ದೇಶನದ ಚಿತ್ರದಲ್ಲಿ ಮಗನೇ ವಿಲನ್. ಕಂಬಳ ಕಥೆ ಹೇಳಲು ಹೊರಟಿದ್ದಾರೆ ರಾಜೇಂದ್ರ ಸಿಂಗ್ ಬಾಬು.....

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ವೀರ ಕಂಬಳ (veera kambala) ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದಲ್ಲಿ ಪುತ್ರ ಆದಿತ್ಯನೇ ಗ್ಯಾಂಗ್‌ಸ್ಟರ್.
'ವೀರ ಕಂಬಳ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವೆ. ಚಿತ್ರದ ಎರಡನೇ ಭಾಗದಲ್ಲಿ ಪಾತ್ರಕ್ಕೆ ತೂಕ ಹೆಚ್ಚಲಿದೆ'
'ಕಂಬಳ ರೇಸ್‌ನ ಸಪೋರ್ಟ್ ಮಾಡುವ ವ್ಯಕ್ತಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತೀನಿ. ತುಳು ಕಲ್ಚರ್‌ನ ಜನಪ್ರಿಯ ಕ್ರೀಡೆ ಇದಾಗಿರಲಿದೆ'
'ಕಂಬಳ ಕ್ರೀಡೆಯಲ್ಲಿ ಪ್ರಾಣಿಗಳಿಗೆ ತೊಂದರೆ ಆಗುತ್ತದೆ ಎಂದು ಕೋರ್ಟ್ ವಿರೋಧವಿದೆ. ಅನೇಕರು ಈ ಕ್ರೀಡೆ ನಡೆಯುವುದು ಬೇಡ ಎನ್ನುತ್ತಾರೆ'
'ಈ ಚಿತ್ರದಲ್ಲಿ ನನಗೆ ಯೂನಿಕ್ ಲುಕ್ ಇರಲಿದೆ ಆದರೆ ಯಾವ ಶೇಡ್ ಗ್ಯಾಂಗ್‌ಸ್ಟರ್ ಎಂದು ಕಾದು ನೋಡಬೇಕಿದೆ. ಇದುವರೆಗೂ ಯಾರೂ ನೋಡಿರದ ಏಮೋಷನ್ ನನ್ನ ಪಾತ್ರಕ್ಕೆ ಇರಲಿದೆ'
'ಮೇ ತಿಂಗಳ ಮೊದಲ ವಾರದಲ್ಲಿ ನಮ್ಮ ಲುಕ್ ರಿವೀಲ್ ಮಾಡಲಾಗುತ್ತದೆ. ಮಂಗಳೂರಿನಲ್ಲಿ ಸಿನಿಮಾ ಚಿತ್ರೀಕರಣ ಮಾಡಲಾಗುತ್ತಿದೆ ಸ್ಥಳೀಯರು ಬಿಗ್ ಸಪೋರ್ಟ್ ನೀಡುತ್ತಿದ್ದಾರೆ'
ಬಂಧನ 2 ಸಿನಿಮಾದಲ್ಲೂ ಆದಿತ್ಯ ನಟಿಸುತ್ತಿದ್ದು ತಂದೆನೇ ಶಿಪ್ ಕ್ಯಾಪ್ಟನ್, ನಾಯಕನಾಗಿ ಅವರು ಏನು ಹೇಳುತ್ತಾರೆ ಅದನ್ನ ಮಾಡುತ್ತೀನಿ.
'ಹಲವಾರು ಕಥೆಗಳನ್ನು ಕೇಳುತ್ತಿದ್ದೀನಿ ಹೊಸ ತಂಡಗಳು ಮುಂದೆ ಬರುತ್ತಿದೆ. ಹಿಂದಿ ವೆಬ್ ಸೀರಿಸ್‌ನಲ್ಲಿ ಕೂಡ ನನ್ನ ಕೈಯಲ್ಲಿದೆ' ಎಂದು ಆದಿತ್ಯ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.