- Home
- Entertainment
- Sandalwood
- ಸಿನಿಮಾಕ್ಕೆ ಅಷ್ಟೆಲ್ಲ ಕಷ್ಟಪಟ್ರೆ ಆತ ನಾಯೀನ ಇಟ್ಕೊಂಡು ಕಾಸು ಮಾಡ್ತಾನೆ: ಜೋಗಿ ಪ್ರೇಮ್
ಸಿನಿಮಾಕ್ಕೆ ಅಷ್ಟೆಲ್ಲ ಕಷ್ಟಪಟ್ರೆ ಆತ ನಾಯೀನ ಇಟ್ಕೊಂಡು ಕಾಸು ಮಾಡ್ತಾನೆ: ಜೋಗಿ ಪ್ರೇಮ್
ರಘು ನಿರ್ದೇಶನದ ‘ನಾನು ಮತ್ತು ಗುಂಡ 2’ ಸಿನಿಮಾದ ಹಾಡು ಬಿಡುಗಡೆ ಮಾಡಿ ಪ್ರೇಮ್ ಮಾತನಾಡಿದರು. ರಘು ನನ್ನ ಜೊತೆ ಬಹಳ ಸಮಯ ಕೆಲಸ ಮಾಡಿದ್ದಾರೆ.

‘ನಾವ್ ಏನೆಲ್ಲ ಕಷ್ಟ ಪಟ್ಟು ಸಿನಿಮಾ ಮಾಡ್ತೀವಿ, ಬಡ್ಡೀಮಗ ನೀನು ನಾಯಿನ ಇಟ್ಕೊಂಡು ಕಾಸು ಮಾಡ್ತಿದ್ದೀಯ..’ ನಿರ್ದೇಶಕ ಜೋಗಿ ಪ್ರೇಮ್ ಹೀಗೆ ಕಾಲೆಳೆದದ್ದು ನಿರ್ದೇಶಕ ರಘು ಹಾಸನ್ ಅವರನ್ನು.
ರಘು ನಿರ್ದೇಶನದ ‘ನಾನು ಮತ್ತು ಗುಂಡ 2’ ಸಿನಿಮಾದ ಹಾಡು ಬಿಡುಗಡೆ ಮಾಡಿ ಪ್ರೇಮ್ ಮಾತನಾಡಿದರು. ರಘು ನನ್ನ ಜೊತೆ ಬಹಳ ಸಮಯ ಕೆಲಸ ಮಾಡಿದ್ದಾರೆ. ನಾನು ಅವರನ್ನು ಕಾಲೆಳೆದರೂ ನಾಯಿಯನ್ನು ಪಳಗಿಸಿ ಸಿನಿಮಾ ಮಾಡೋದು ಸಣ್ಣ ಕೆಲಸ ಅಲ್ಲ.
ಆರ್‌ಪಿ ಪಟ್ನಾಯಕ್ ಸಂಗೀತ ನಿರ್ದೇಶನ ಕ್ಷೇತ್ರದ ದಂತಕತೆ. ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿ ಅದ್ಭುತ ಹಾಡು ಕೊಟ್ಟಿದ್ದಾರೆ. ಮುಂದೆ ಅವರ ಜೊತೆ ಒಂದು ಲವ್‌ಸ್ಟೋರಿ ಮಾಡ್ತೀನಿ ಎಂದರು.
‘ನಾನು ಮತ್ತು ಗುಂಡ ಸಿನಿಮಾ ಒಂದು ನಾಯಿ ಮತ್ತು ಹುಡುಗನ ನಡುವಿನ ಸೋಲ್‌ಫುಲ್ ಲವ್‌ಸ್ಟೋರಿ. ಇದನ್ನು ನೋಡುವ ಯಾರೇ ಆದರೂ ಇವರಿಬ್ಬರ ಮೇಲೆ ಲವ್ವಲ್ಲಿ ಬೀಳ್ತಾರೆ’ ಎಂದೂ ಹೇಳಿದರು.
ನಿರ್ದೇಶಕ ರಘು ಹಾಸನ, ‘ನಿರ್ದೇಶಕ ಪ್ರೇಮ್‌ಗೆ ಮೀಟರ್ ಹಿಡ್ದೂ ಹಿಡ್ದೂ ಈಗ ನಾನೂ ಮೀಟರ್ ಹಿಡಿಯೋ ಹಂಗಾಗಿದ್ದೀನಿ’ ಎಂದರು. ನಾಯಕ ರಾಕೇಶ್ ಅಡಿಗ, ನಾಯಿಯಿಂದಾಗಿ ತನ್ನನ್ನು ಯಾರೂ ಕೇಳುವವರಿಲ್ಲದಂತಾಗಿದೆ ಎಂದು ತಮಾಷೆ ಮಾಡಿದರು.