ಕರುನಾಡ ಕಲ್ಲುಕಲ್ಲಿನಲೂ ಕನ್ನಡದ ನುಡಿ ಕೇಳಿಸಿದ ಗಾಯಕಿಗೆ ಹುಟ್ಟು ಹಬ್ಬದ ಶುಭಾಶಯಗಳು
ಕೇಳಿಸದೇ ಕಲ್ಲು ಕಲ್ಲಿನಲಿ ಕನ್ನಡ ನುಡಿ ಎಂದು ತಮ್ಮ ಸುಮಧುರ ಕಂಠದ ಮೂಲಕ ಕಲ್ಲಿಗೂ ಕನ್ನಡದ ಉಸಿರನ್ನು ಸ್ಪರ್ಶಿಸಿದ ಬಹುಭಾಷಾ ಗಾಯಕಿ ಕೆ ಎಸ್ ಚಿತ್ರಾ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು .

1963 ಜುಲೈ 27ರಂದು ತಿರುವನಂತಪುರಂನಲ್ಲಿ ಜನಿಸಿದ ಕೆ.ಎಸ್.ಚಿತ್ರ ಅವರ ಪೂರ್ಣಹೆಸರು ಕೃಷನ್ ನಾಯರ್ ಶಾಂತಕುಮಾರಿ ಚಿತ್ರಾ .

ಚಿತ್ರಾ ಅವರು ತಮ್ಮ ತಂದೆ ಸಂಗೀತ ವಿದ್ವಾಂಸಕ ಕೃಷ್ಣನ್ ಅಯ್ಯರ್ ರವರ ಮಾರ್ಗದರ್ಶನದಲ್ಲಿ ಸಂಗೀತ ಅಭ್ಯಾಸ ಪ್ರಾರಂಭಿಸಿ ಮುಂದೆ ಪ್ರಖ್ಯಾತ ಕರ್ನಾಟಕ ಸಂಗೀತ ವಿದುಷಿ ಡಾ. ಒಮನಕುಟ್ಟಿ ಅವರಲ್ಲಿ ಸಂಗೀತ ಕಲಿತರು.ತಮ್ಮ ತಾಯಿ ಶಾಂತಾ ಅವರಲ್ಲಿ ವೀಣೆಯನ್ನು ಕೂಡ ಕಲಿತರು.

ಕೇರಳ ವಿಶ್ವವಿದ್ಯಾನಿಲಯದಲ್ಲಿ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದ ಚಿತ್ರಾ ಅವರು ಸತತ 6 ವರ್ಷಗಳ ಕಾಲ ಭಾರತ ಸರ್ಕಾರದಿಂದ ರಾಷ್ಟೀಯ ಪ್ರತಿಭಾ ಪುರಸ್ಕಾರ ವಿದ್ಯಾರ್ಥಿವೇತನ ಪಡೆದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

1979ರಲ್ಲಿ ಮಲಯಾಳಂ ಚಿತ್ರರಂಗದ ಮೂಲಕ ಹಿನ್ನಲೆಗಾಯಕಿಯಾಗಿ ಹೊರಹೊಮ್ಮಿದ ಚೈತ್ರಾ ,1986ರಲ್ಲಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಕನ್ನಡದ ಗಾನಕೋಗಿಲೆಯೆಂದು ಪ್ರಸಿದ್ಧಿ ಪಡೆದರು.

1995ರಲ್ಲಿ `ಆಡಿಯೊಟ್ರಾಕ್ಸ' ಎಂಬ ಮ್ಯೂಸಿಕ್ ಕಂಪನಿ ಸ್ಥಾಪಿಸಿ ಚಿತ್ರಗೀತೆಗಳಿಗೆ ಹೊರತಾದ ಭಕ್ತಿಗೀತೆಗಳು,ಜನಪದ ಗೀತೆಗಳಿಗೆ ಪ್ರೋತ್ಸಾಹ ಕೊಟ್ಟರು.

ಸರಿಸುಮಾರು ಹತ್ತು ಭಾಷೆಗಳಲ್ಲಿ 25,000ಕ್ಕೂ ಹೆಚ್ಚು ಗೀತೆಗಳನ್ನು ಹಾಡಿರುವ ಚಿತ್ರಾ ಭಾರತದ ಎಲ್ಲಾ ಪ್ರಮುಖ ಸಂಗೀತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ.

6 ಬಾರಿ ರಾಷ್ಟ್ರಪ್ರಶಸ್ತಿ ಪಡೆದಿರುವ ಚಿತ್ರಾ ಬ್ರಿಟಿಷ್ ಸಂಸತ್ತಿನಲ್ಲಿ ಮತ್ತು ಚೀನಾ ದೇಶದ ರಾಷ್ಟೀಯ ಚಲನಚಿತ್ರ ಮಹೋತ್ಸವದಲ್ಲಿ ಸನ್ಮಾನಗೊಂಡ ಭಾರತದ ಮೊದಲ ಮಹಿಳೆ.

ಚಿತ್ರಾ ಅವರು ಉದ್ಯಮಿ ಹಾಗೂ ಇಂಜಿನಿಯರ್ ವಿಜಯಶಂಕರ್ ಅವರನ್ನು ಮದುವೆಯಾಗಿದ್ದಾರೆ. 2011ರಲ್ಲಿ ದುಬೈಗೆ ಸಂಗೀತ ಕಚೇರಿ ನೀಡಲು ಹೋದಾಗ ಇವರ ಮಗು ನಂದಿನಿ ಈಜುಕೊಳದಲ್ಲಿ ಮುಳುಗಿ ವಿಧಿವಶವಾದದ್ದು ಈ ಗಾನಕೋಗಿಲೆಯ ಬದುಕಿನ ಬಹುದೊಡ್ಡ ದುರಂತ ಘಟನೆಯಾಗಿದೆ.

ನಿವೃತ್ತ ಸಂಗೀತಗಾರರು ಮತ್ತು ಹಿನ್ನಲೆ ಗಾಯಕರ ಸಮಸ್ಯೆಗಳಿಗೆ ಸ್ಪಂದಿಸುವುದಕ್ಕೋಸರ ಕೇರಳದ ಟಿವಿ ಚಾನಲ್ ಒಂದರ ಜೊತೆಗೂಡಿ `ಸ್ನೇಹ ನಂದನಾ' ಎಂಬ ಸಂಸ್ಥೆ ಸ್ಥಾಪಿಸಿ ಸಮಾಜಸೇವೆಯಲ್ಲಿ ತೊಡಗಿದ್ದಾರೆ.

ಇಷ್ಟೇ ಅಲ್ಲದೆ ಸಂಗೀತ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಾ ಯುವ ಗಾಯಕ ಗಾಯಕಿಯರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.