ತಂದೆ ಇಲ್ಲದ ಮಗುವಾಗಿದ್ದೆ, ಭಿನ್ನವಾಗಿ ಗುರುತಿಸಿಕೊಂಡಿದ್ದೆ: ನಟಿ ರಮ್ಯಾ
ತಮ್ಮ ಕುಟುಂಬದ ಬಗ್ಗೆ ಹೇಳುವಾಗ ನಾನು ಡಿಫರೆಂಟ್ ಅನಿಸುತ್ತಿತ್ತು. ಸಿಂಗಲ್ ಪೇರೆಂಟ್, ಸರ್‌ನೇಮ್ ಇಲ್ಲದ ಖಾಲಿತನವನ್ನು ನಾನಾಗ ಅನುಭವಿಸುತ್ತಿದ್ದೆ ಇವು ರಮ್ಯಾ ಅವರ ಮಾತುಗಳು.

ನನಗೆ ಅಮ್ಮ ಮಾತ್ರ ಇದ್ದದ್ದು, ಚಿಕ್ಕ ವಯಸ್ಸಿನಲ್ಲೇ ಅಪ್ಪನನ್ನು ಕಳೆದುಕೊಂಡೆ. ಬೋರ್ಡಿಂಗ್ ಸ್ಕೂಲ್ ನಲ್ಲಿ ಎಲ್ಲರೂ ಅಪ್ಪನ ಬಗ್ಗೆ, ತಮ್ಮ ಕುಟುಂಬದ ಬಗ್ಗೆ ಹೇಳುವಾಗ ನಾನು ಡಿಫರೆಂಟ್ ಅನಿಸುತ್ತಿತ್ತು.
ಸಿಂಗಲ್ ಪೇರೆಂಟ್, ಸರ್‌ನೇಮ್ ಇಲ್ಲದ ಖಾಲಿತನವನ್ನು ನಾನಾಗ ಅನುಭವಿಸುತ್ತಿದ್ದೆ ಇವು ರಮ್ಯಾ ಅವರ ಮಾತುಗಳು. ನಟಿ ಶುಭ್ರಾ ಅಯ್ಯಪ್ಪ ಪಾಡ್‌ಕಾಸ್ಟ್‌ನಲ್ಲಿ ತನ್ನ ಅಂತರಂಗ ತೆರೆದಿಟ್ಟರು ರಮ್ಯಾ.
ಸಿನಿಮಾರಂಗಕ್ಕೆ ಬಂದ ಮೇಲೂ ನಾನು ಈ ಕಾರಣಕ್ಕೇ ಹೆಚ್ಚು ಅಂತರ್ಮುಖಿಯಾಗಿದ್ದೆ. ನನ್ನ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳಬೇಕಾಗುತ್ತದೆ ಎಂಬ ಕಾರಣಕ್ಕೆ ಯಾರ ಜೊತೆಗೂ ಅಗತ್ಯಕ್ಕಿಂತ ಹೆಚ್ಚು ಬೆರೆಯುತ್ತಿರಲಿಲ್ಲ ಎಂದಿದ್ದಾರೆ.
ನನಗೆ ಗೊತ್ತಿಲ್ಲದೇ ಸಾಕಷ್ಟು ಬಾರಿ ಮದುವೆ, ಮಕ್ಕಳೂ ಆಗಿ ಹೋಗಿದೆ. ವಿದೇಶಗಳಲ್ಲಿಯೂ ಮಕ್ಕಳು ಇದ್ದಾರೆ ಎನ್ನುವ ಗಾಸಿಪ್ ಕೂಡ ಮಾಡ್ತಾರೆ. ಇದೆಲ್ಲ ವಿಚಿತ್ರ ಎಂದೆನಿಸುತ್ತೆ. ತಾವೇ ಕಲ್ಪನೆ ಮಾಡಿಕೊಂಡು ನನಗೆ ಎಷ್ಟೋ ಮದುವೆ ಮಾಡಿಸಿದ್ದಾರೆ ಎಂದೂ ರಮ್ಯಾ ಹೇಳಿದ್ದಾರೆ.
ಇತ್ತೀಚೆಗೆ ಮಹಿಳಾ ಪ್ರಧಾನ ಸಿನಿಮಾ ಬರುತ್ತಿಲ್ಲ. ಹೆಣ್ಣುಮಕ್ಕಳು ಸ್ಟ್ರಾಂಗ್ ಅನೋದನ್ನು ತೋರಿಸುತ್ತಿಲ್ಲ. ಸದ್ಯ ವೈಯಕ್ತಿಕ ಬದುಕಿನ ಕುರಿತಾದ ರಮ್ಯಾ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿವೆ.