- Home
- Entertainment
- Sandalwood
- ದಪ್ಪ ಪಿಂಪಲ್ ಮತ್ತು ಫೇಶಿಯಲ್ ಹೇರ್ ಹೆಚ್ಚಾಗಿತ್ತು; PCOS ಎದುರಿಸುತ್ತಿರುವ 'ಗಾಳಿಪಟ' ನಟಿ ಭಾವನಾ ರಾವ್
ದಪ್ಪ ಪಿಂಪಲ್ ಮತ್ತು ಫೇಶಿಯಲ್ ಹೇರ್ ಹೆಚ್ಚಾಗಿತ್ತು; PCOS ಎದುರಿಸುತ್ತಿರುವ 'ಗಾಳಿಪಟ' ನಟಿ ಭಾವನಾ ರಾವ್
ಎರಡು ಮೂರು ವರ್ಷಗಳ ಹಿಂದೆ PCOS ಎದುರಿಸಿದ ನಟಿ ಭಾವನಾ ರಾವ್ ಯಾವ ರೀತಿ ಚಿಕಿತ್ಸೆ ಪಡೆದರು? ಎಂದು ಮೊದಲ ಸಲ ಹಂಚಿಕೊಂಡಿದ್ದಾರೆ.

ಗಾಳಿಪಟ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಿನಿ ಜರ್ನಿ ಆರಂಭಿಸಿದ ಭಾವನಾ ರಾವ್ ಬಾಡಿ ಶೇಮಿಂಗ್ ಎದುರಿಸಲು ಕಾರಣವೇ ತಮ್ಮಗಿದ್ದ PCOS ಎಂದು ಹೇಳಿಕೊಂಡಿದ್ದಾರೆ.
'ಕೆಲವರ ದೇಹದ ತೂಕ ಎಲ್ಲಾ ಮೆಡಿಕಲ್ ಕಂಡಿಷನ್ ಮೇಲೆ ಪರಿಣಾಮ ಬೀರುತ್ತದೆ. ನನಗೆ PCOS ಇತ್ತು ಈಗ ಅದು ಪರಿಹರಿಸಲಾಗಿದೆ. ಅನೇಕರು ಗುಣಪಡಿಸಲು ಆಗಲ್ಲ ಅಂದುಕೊಂಡಿದ್ದಾರೆ ಆದರೆ ಇಲ್ಲ ಮೆಡಿಸಿನ್‌ಗಳಲ್ಲಿ ಗುಣಪಡಿಸಬಹುದು' ಎಂದು ಭಾವನಾ ತಮ್ಮ ಯೂಟ್ಯೂಬ್ ಚಾನೆಲ್‌ಗಳನ್ನು ಮಾತನಾಡಿದ್ದಾರೆ.
'PCOSನಿಂದ ಮುಖದ ತ್ವಚೆ ಹಾಳಾಗುತ್ತದೆ. ತುಂಬಾ ದಪ್ಪ ಆಗುತ್ತೀವಿ. ನಾವಾಗೆ ನಾವು ಅದನ್ನು ಗುರುತಿಸಬೇಕು. ನಾನು ಹೇಗೆ ಪಿಸಿಓಎಸ್ ಇದೆ ಎಂದು ಕಂಡು ಹಿಡಿದುಕೊಂಡು ವೈದ್ಯರ ಬಳಿ ಹೋಗಿದೆ ಅಂದ್ರೆ ತುಂಬಾ ಹಸಿವು ಆಗುತ್ತಿತ್ತು ಆದರೆ ತಿನ್ನಲು ಆಗುತ್ತಿರಲಿಲ್ಲ' ಎಂದು ಭಾವನಾ ಹೇಳಿದ್ದಾರೆ.
'ಗದ್ದ ಭಾಗದಲ್ಲಿ ಮಾತ್ರ ಪಿಂಪಲ್ ಆಗುತ್ತಿತ್ತು. ಇದ್ದಕ್ಕಿದ್ದಂತೆ ಹೇರ್‌ಫಾಲ್ ಹೆಚ್ಚಾಗಿ ಹೇರ್ ಲಾಸ್ ಅಗುತ್ತಿತ್ತು. ಅಷ್ಟೇ ಅಲ್ಲ ಫೇಷಿಯಲ್ ಹೇರ್ ಕೂಡ ಹೆಚ್ಚಾಗುತ್ತಿತ್ತು. ಇದೆಲ್ಲಾ ಗಮನಿಸಿ ವೈದ್ಯರ ಸಂಪರ್ಕ ಮಾಡಿದೆ' ಎಂದಿದ್ದಾರೆ ಭಾವನಾ.
'ಕೆಳೆದ ಮೂರ್ನಾಲ್ಕು ವರ್ಷದಿಂದ ಆರೋಗ್ಯವಾಗಿರುವೆ. ಕೆಲವರಿಗೆ ಥೈರಾಯ್ಡ್ ಇರುತ್ತೆ. ನನ್ನ ಹಣೆ ಮೇಲೆ ದೊಡ್ಡ ಪಿಂಪಲ್ ಆಗಿತ್ತು ಅದಿಕ್ಕೆ ಬ್ಯಾಂಡ್ ಹಾಕಿಕೊಂಡಿದ್ದೆ ಆಗ ಅಲ್ಲಿದ್ದ ಸ್ನೇಹಿತರು ಹಾಗೆ ಬ್ಯಾಂಡ್ ಕಟ್ಟಬೇಡ ಎಂದು ಒತ್ತಾಯ ಮಾಡಿದ್ದರು.' ಎಂದು ಭಾವನಾ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಭಾವನಾ ರಾವ್ ತುಂಬಾನೇ ಆಕ್ಟಿವ್ ಆಗಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಭಾವನಾ 670 ಪೋಸ್ಟ್ ಹಾಕಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.