ಜನ ಹೇಗೆ ಫೀಲ್ ಮಾಡ್ತಾರೆ ಅಂತ ತಿಳಿದುಕೊಳ್ಳಲು ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ: ವಜ್ರಕಾಯ ನಟಿ ಹೇಳಿಕೆ ವೈರಲ್!
ನನ್ನ ಸ್ನೇಹಿತರಿಗೆ ನಾನು ಸದಾ go to person ಆಗಿರುತ್ತಿದ್ದೆ. ಈ ಗುಣವನ್ನು ನನ್ನ ಪೋಷಕರಿಂದ ಬಂದಿರುವುದು ಎಂದ ಶುಭ್ರ....
18 ವರ್ಷಕ್ಕೆ ವಿದ್ಯಾಭ್ಯಾಸ ತೊರೆದು ಮಾಡಲಿಂಗ್ ಆಕ್ಟಿಂಗ್ ಲೋಕಕ್ಕೆ ಕಾಲಿಟ್ಟ ಶುಭ್ರ ಅಯ್ಯಪ್ಪ ತಮ್ಮ ಸುತ್ತಮುತ್ತ ವಾತಾವರಣ ತುಂಬಾ ಮುಖ್ಯವಾಗುತ್ತದೆ ಎನ್ನುತ್ತಾರೆ.
'ನಾನು ನಟಿ ಆಗಿಲ್ಲವಾದರೆ ಒಳ್ಳೆ ಥೆರಪಿಸ್ಟ್ ಅಗುತ್ತಿದ್ದೆ ಎಂದು ನನ್ನ ಸ್ನೇಹಿತರು ಆಗಾಗ ಹೇಳುತ್ತಾರೆ. ಜೀವನದಲ್ಲಿ ನಾನು ಏನೇ ಕಲಿತಿದ್ದರೂ ಅದು ಪುಸ್ತಕ ಮತ್ತು ಅನುಭವಗಳಿಂದ'
'ಹಲವಾರು ಕಥೆಗಳು ನನ್ನ ಜೀವನಕ್ಕೆ ಒಳ್ಳೆ ಸ್ಫೂರ್ತಿಯಾಗಿದೆ. ನನ್ನ ಜೊತೆ ಜನರು ಮುಕ್ತ ಮತ್ತು vulnerable ಆಗಿರಲು ಇಷ್ಟ ಪಡುತ್ತೀನಿ' ಎಂದು ಶುಭ್ರ ಅಯ್ಯಪ್ಪ ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಹೇಳಿದ್ದಾರೆ.
'ಯಾರ್ಯಾರು ತಮ್ಮ ಕಥೆಗಳನ್ನು ನನ್ನ ಜೊತೆ ಹಂಚಿಕೊಳ್ಳುತ್ತಾರೆ...ಅವರನ್ನು ಕೇಳಿಸಿಕೊಂಡು ಇನ್ನಿತ್ತರರಿಗೆ ಸ್ಫೂರ್ತಿಯಾಗುತ್ತದೆ ಎಂದು ಭಾವಿಸುತ್ತೀನಿ'
'ಯಶಸ್ಸು ನಮ್ಮ ದಾರಿಯಲ್ಲಿದೆ ಅಂದ ಮೇಲೆ ಫೆಲ್ಯೂರ್ ಕೂಡ ಎದುರಾಗುತ್ತದೆ. ನನ್ನ ಸ್ನೇಹಿತರು ಏನೇ ಇದ್ದರೂ ನನ್ನೊಟ್ಟಿಗೆ ಶೇರ್ ಮಾಡಿಕೊಳ್ಳುತ್ತಾರೆ'
ಪಕ್ಕಾ ಸೌತ್ ಇಂಡಿಯನ್ ಫ್ಯಾಮಿಲಿಯಲ್ಲಿ ಹುಟ್ಟಿ ಬೆಳೆದಿರುವ ಶುಭ್ರ ಮಾಡಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದ ಮೇಲೆ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಲು ತೀರ್ಮಾನಿಸಿದಾಗ ಫೋಷಕರು ಸಪೋರ್ಟ್ ಮಾಡಿದರಂತೆ.