MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
US Tariff on India
Mysuru Dasara 2026
Abhishek Sharma
Bengaluru Cantonment Railway Station
Kalyana Karnataka Development
Vande Mataram Row
Karnataka SSLC Mid-term Exam
Mangaluru Dharmasthala Railway Line
Shivamogga Mega Job Fair
Bengaluru Traffic
Mangaluru Cabinet Meeting
  • Home
  • Entertainment
  • Sandalwood
  • ಕುಂದಾಪುರದಲ್ಲಿ ಹುಟ್ಟಿಕೊಂಡ ಕಾಂತಾರ ಅಂತಾರಾಷ್ಟ್ರೀಯ ಮಟ್ಟ ತಲುಪಿದೆ; ದಾಖಲೆ ಬಗ್ಗೆ ಸತ್ಯ ಹಂಚಿಕೊಂಡ ರಿಷಬ್ ಶೆಟ್ಟಿ

ಕುಂದಾಪುರದಲ್ಲಿ ಹುಟ್ಟಿಕೊಂಡ ಕಾಂತಾರ ಅಂತಾರಾಷ್ಟ್ರೀಯ ಮಟ್ಟ ತಲುಪಿದೆ; ದಾಖಲೆ ಬಗ್ಗೆ ಸತ್ಯ ಹಂಚಿಕೊಂಡ ರಿಷಬ್ ಶೆಟ್ಟಿ

ಮುಂದೆ ಬರೋದು ಕಾಂತಾರ ಚಿತ್ರದ ಪಾರ್ಚ್‌ 2 ಅಲ್ಲ, ಭಾಗ 1: ರಿಷಬ್‌ ಶೆಟ್ಟಿ. ಪ್ರದರ್ಶಕರು, ಚಿತ್ರದ ತಾಂತ್ರಿಕ ತಂಡ, ಕಲಾವಿದರು, ವಿತರಕರು ಸೇರಿದಂತೆ 500ಕ್ಕೂ ಹೆಚ್ಚು ಮಂದಿಗೆ ‘ಕಾಂತಾರ’ ಚಿತ್ರದ ನೆನಪಿನ ಕಾಣಿಕೆಯನ್ನು ನೀಡಲಾಯಿತು.

2 Min read
Author : Vaishnavi Chandrashekar
Published : Feb 06 2023, 09:32 AM IST
Share this Photo Gallery
  • FB
  • TW
  • Linkdin
  • Whatsapp
19

ಒಂದು ಸಿನಿಮಾ 50, 75 ಅಥವಾ ನೂರು ದಿನ ಪ್ರದರ್ಶನ ಕಂಡರೆ ಆ ಚಿತ್ರತಂಡದವರು ಮಾಧ್ಯಮಗಳ ಮುಂದೆ ಬಂದು ಇಂತಿಷ್ಟುಚಿತ್ರಮಂದಿರಗಳಲ್ಲಿ, ಇಂತಿಷ್ಟುಗಳಿಕೆ, ಯಶಸ್ಸು, ಸಾಧನೆ, ಮುಂದಿನ ಯೋಜನೆಗಳು ಇತ್ಯಾದಿಗಳ ಬಗ್ಗೆ ವರದಿ ಒಪ್ಪಿಸುವುದು ಕಾಮನ್‌. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
29

ಆದರೆ, ಒಂದು ಚಿತ್ರಕ್ಕೆ ತೆರೆ ಮೇಲೆ, ತೆರೆ ಹಿಂದೆ ಹಾಗೂ ಚಿತ್ರದ ಆಚೆಗೆ ಚಿತ್ರದ ಯಶಸ್ಸಿಗೆ ಕಾರಣರಾದ ಮಾಧ್ಯಮಗಳು, ಅಭಿಮಾನಿಗಳು, ಬಂಧು-ಬಳಗ, ಸ್ನೇಹಿತರು ಒಟ್ಟಿಗೆ ಸೇರಿ ಹಬ್ಬದಂತೆ ಆಚರಿಸಿದ್ದು ‘ಕಾಂತಾರ’ ಚಿತ್ರದ ನೂರು ದಿನಗಳ ಸಂಭ್ರಮ ಆಚರಣೆಯ ವಿಶೇಷ. 

39

ಈ ಕಾರ್ಯಕ್ರಮಕ್ಕಾಗಿ ಬೆಂಗಳೂರಿನ ವಿಜಯನಗರದಲ್ಲಿರುವ ಬಂಟರ ಭವನ ‘ಕಾಂತಾರ’ ಚಿತ್ರದ ಸೆಟ್‌ನಂತೆ ಬದಲಾಗಿತ್ತು. ಇಡೀ ಭವನವನ್ನು ತುಳುನಾಡಿನ ಸಂಪ್ರದಾಯದಂತೆ ಸಿಂಗಾರ ಮಾಡಲಾಗಿತ್ತು. 

49

ಚಿತ್ರಕ್ಕೆ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ನೆನಪಿನ ಕಾಣಿಗೆ ನೀಡುವ ಜತೆಗೆ ಎಲ್ಲರು ಒಟ್ಟಿಗೆ ಸೇರಿ ಊಟ ಮಾಡುವ ಮೂಲಕ ಚಿತ್ರದ ಯಶಸ್ಸನ್ನು ಊರಿನ ಹಬ್ಬದಂತೆ ಆಚರಿಸಲಾಯಿತು.

59

ಪ್ರದರ್ಶಕರು, ಚಿತ್ರದ ತಾಂತ್ರಿಕ ತಂಡ, ಕಲಾವಿದರು, ವಿತರಕರು ಸೇರಿದಂತೆ 500ಕ್ಕೂ ಹೆಚ್ಚು ಮಂದಿಗೆ ‘ಕಾಂತಾರ’ ಚಿತ್ರದ ನೆನಪಿನ ಕಾಣಿಕೆಯನ್ನು ನೀಡಲಾಯಿತು. ‘ಈ ಚಿತ್ರದ ಯಶಸ್ಸಿಗೆ ನಾನು ಒಬ್ಬನೇ ಕಾರಣ ಅಲ್ಲ. ನಮ್ಮ ಚಿತ್ರಕ್ಕೆ ಕೆಲಸ ಮಾಡಿದ ಕಲಾವಿದರು, ತಂತ್ರಜ್ಞರು, ಪ್ರಚಾರಕರ್ತರು, ಮಾಧ್ಯಮಗಳು, ಅಭಿಮಾನಿಗಳು, ಪ್ರೇಕ್ಷಕರು ಹೀಗೆ ಎಲ್ಲರ ಪ್ರೀತಿ- ಅಭಿಮಾನ ಮತ್ತು ಬೆಂಬಲ ಜತೆಯಾಗಿ ‘ಕಾಂತಾರ’ ಚಿತ್ರಕ್ಕೆ ಶತ ದಿನೋತ್ಸವ ಸಂಭ್ರಮ ತಂದು ಕೊಟ್ಟಿದೆ.

69

ಎಲ್ಲಕ್ಕಿಂತ ಮುಖ್ಯವಾಗಿ ಕುಂದಾಪುರದ ಕೆರಾಡಿ ಎಂಬ ಪುಟ್ಟಗ್ರಾಮದಲ್ಲಿ ಹುಟ್ಟಿಕೊಂಡ ನಮ್ಮ ಈ ಚಿತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲುಪಲು ಹೊಂಬಾಳೆ ಫಿಲಮ್ಸ್‌ ಕಾರಣ. ಚಿತ್ರಕ್ಕೆ ಬಜೆಟ್‌ಗಿಂತ ಕಂಟೆಂಟ್‌ ಮುಖ್ಯ ಎಂಬುದು ಸಾಬೀತು ಆಗಿದೆ. 

79

ಈ ಚಿತ್ರವನ್ನು ನೆಟ್‌ಫ್ಲಿಕ್ಸ್‌ನವರು ಡಬ್‌ ಮಾಡಿ ಬಿಡುಗಡೆ ಮಾಡಲು ರೆಡಿಯಾಗಿದ್ದಾರೆ. ಇದು ಸಾಧ್ಯವಾದರೆ 7 ಭಾಷೆಗಳಿಗೆ ‘ಕಾಂತಾರ’ ಚಿತ್ರ ಬಿಡುಗಡೆ ಆಗಲಿದೆ. ಇನ್ನೂ ಎಲ್ಲರು ಕಾಂತಾರ 2 ಯಾವಾಗ ಎಂದು ಕೇಳುತ್ತಿದ್ದಾರೆ. ನಿಜ ಹೇಳಬೇಕು ಎಂದರೆ ಈಗ ನೀವು ನೋಡಿರುವುದೇ ಕಾಂತಾರ 2. ಮುಂದೆ ಬರುವುದು ಕಾಂತಾರ 1’ ಎಂದು ರಿಷಬ್‌ ಶೆಟ್ಟಿಹೇಳಿಕೊಂಡರು.

89

ಅಂದಹಾಗೆ 2023ರ ಜನವರ 7ಕ್ಕೆ ‘ಕಾಂತಾರ’ ಸಿನಿಮಾ ತೆರೆಕಂಡು ನೂರು ದಿನಗಳನ್ನು ಪೂರೈಸಿತ್ತು. 300 ಕೇಂದ್ರಗಳಲ್ಲಿ 50 ದಿನ, 250 ಚಿತ್ರಮಂದಿರಗಳಲ್ಲಿ 75 ದಿನ, 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 100 ದಿನಗಳನ್ನು ಯಶಸ್ವಿಯಾಗಿ ಪೂರೈಸುವ ಮೂಲಕ ‘ಕಾಂತಾರ’ ಸಿನಿಮಾ ಹೊಸ ದಾಖಲೆ ಮಾಡಿತ್ತು. 

99

ಕನ್ನಡದ ಚಿತ್ರವಾಗಿ ಸೆಟ್ಟೇರಿ, ಮುಂದೆ ಪ್ಯಾನ್‌ ಇಂಡಿಯಾ ಸಿನಿಮಾ ಆಗಿ ಎಲ್ಲ ಭಾಷೆಗಳಲ್ಲೂ ತೆರೆಕಂಡಿತು. ಅಲ್ಲದೆ ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿ ಶಾರ್ಚ್‌ ಲೀಸ್ಟ್‌ಗೂ ಆಯ್ಕೆ ಆಗುವ ಮೂಲಕ ಮತ್ತೊಮ್ಮೆ ಭಾರತೀಯ ಚಿತ್ರರಂಗದ ಗಮನ ಸೆಳೆದ ಸಿನಿಮಾ ಎನಿಸಿಕೊಂಡಿದ್ದು ‘ಕಾಂತಾರ’ದ ಹೆಗ್ಗಳಿಕೆ.
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

VC
Vaishnavi Chandrashekar
6 ವರ್ಷಗಳ ಹಿಂದೆ ಸುವರ್ಣ ನ್ಯೂಸಲ್ಲಿ ಕೆಲಸ ಆರಂಭ. ಹಿರಿಯ ಉಪ ಸಂಪಾದಕಿ. ಕಥೆ, ಕವನ ಓದೋದು ಇಷ್ಟ. ಸೋಷಿಯಲ್ ಮೀಡಿಯಾ ತುಂಬಾ ಇಷ್ಟ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರು. ಸಿಲಿಕಾನ್ ಸಿಟಿ ಬಗ್ಗೆ ವಿಪರೀತ ಅಭಿಮಾನ, ಹೆಮ್ಮೆ. ಲೈಫ್‌ಸ್ಟೈಲ್ ಸುದ್ದಿ ಮೊದಲ ಆಯ್ಕೆ ಆಗಿತ್ತು. ಆದರೀಗ ಸಿನಿಮಾ, ಸೀರಿಯಲ್ ಕಡೆ ಹೆಚ್ಚು ಫೋಕಸ್ ಮಾಡುತ್ತೇನೆ. ಸುದ್ದಿಯ ಎಳೆ ಸಿಕ್ಕರೂ ಡೆವಲಪ್ ಮಾಡೋದು ಗೊತ್ತು. ಗಾಸಿಪ್ ಸಿಕ್ರಂತೂ ಖುಷಿಯೋ ಖುಷಿ. ಕೆಲವು ಸುದ್ದಿಗಳು ನಾನು ಬರೆದ ಮೇಲೆಯೇ ಗಾಸಿಪ್ ಆಗೋದೂ ಇದೆ.
ಸ್ಯಾಂಡಲ್‌ವುಡ್
ರಿಷಬ್ ಶೆಟ್ಟಿ
 

Latest Videos
Recommended Stories
Recommended image1
Dr Vishnuvardhan 75th Birthday: ವಿಷ್ಣುವರ್ಧನ್ ಬಗ್ಗೆ ನಿಮಗೆ ಇನ್ನೂ ಗೊತ್ತಿಲ್ಲದ ಹಲವು ಸೀಕ್ರೆಟ್‌ಗಳು ಇಲ್ಲಿವೆ ನೋಡಿ!
Recommended image2
ನಾನು ಕಾಯುತ್ತಿರುವ ಯಶಸ್ಸು 'ಕಾಮನ್‌ ಮ್ಯಾನ್‌'ನಿಂದ ಸಿಗಲಿದೆ: ಗೌರಿಶಂಕರ್ ಸಂದರ್ಶನ
Recommended image3
ರಂಗಭೂಮಿ ಕಲಾವಿದರ ಬದುಕಿನಿಂದ ಹುಟ್ಟಿದ 'ಟಾಸ್': ಅರ್ಜುನ್ ಕಾಪಿಕಾಡ್ ಜೊತೆ ವಿಶೇಷ ಸಂದರ್ಶನ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved