ಮತ್ತೆ ಬರ್ತಿದ್ದಾರೆ 'ಅಧ್ಯಕ್ಷ' ನಟಿ ಹೆಬ್ಬಾ ಪಟೇಲ್; 10 ವರ್ಷಗಳ ಬದಲಾವಣೆ ನೋಡಿ ನೆಟ್ಟಿಗರು ಶಾಕ್
10 ವರ್ಷಗಳ ನಂತರ ಮತ್ತೆ ಸ್ಯಾಂಡಲ್‌ವುಡ್ ಕಾಲಿಡುತ್ತಿದ್ದಾರೆ ಹೆಬ್ಬಾ ಪಾಟೇಲ್...ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್....
2014ರಲ್ಲಿ 'ಅಧ್ಯಕ್ಷ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಹೆಬ್ಬಾ ಪಾಟೇಳ್ ಒಂದು ಕನ್ನಡ ಸಿನಿಮಾ ಮಾಡಿದ್ದರೂ ಹೆಚ್ಚಾಗಿ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಮುಂಬೈನಲ್ಲಿ ಹುಟ್ಟಿ ಬೆಳೆದ ಹೆಬ್ಬಾ ಪಾಟೇಲ್ ಕನ್ನಡ ಮಾತನಾಡುವ ಮುಸ್ಲಿಂ ಕುಟುಂಬಕ್ಕ ಸೇರಿದ್ದವರು. ಆದರೆ ಕೆಲವರು ಹೆಬ್ಬಾ ಗುಜರಾತಿ ಎಂದುಕೊಂಡಿದ್ದಾರೆ.
ಹಾಸ್ಯ ನಟ ಶರಣ್ ಜೊತೆ ಅಧ್ಯಕ್ಷ ಸಿನಿಮಾದಲ್ಲಿ ನಟಿಸಿದ ನಂತರ ಯಾವುದೇ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಹೀಗಾಗಿ ಕನ್ನಡ ಸಿನಿಮಾ ಮಾಡುತ್ತಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದರು.
ಇದೀಗ ಗುರು ದೇಶಪಾಂಡೆ ನಿರ್ದೇಶನ ಮಾಡುತ್ತಿರುವ ಚಿತ್ರದ ಮೂಲಕ ಹೆಬ್ಬಾ ಪಾಟೇಲ್ ಕನ್ನಡಕ್ಕೆ ಕಮ್ ಬ್ಯಾಕ್ ಮಾಡಲಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.
ಗುರು ದೇಶಪಾಂಡೆ ನಿರ್ಮಾಣದ ಜಿ ಸಿನಿಮಾಸ್ ಹಾಗೂ ಸೆವೆನ್ ಸ್ಟಾರ್ ಸ್ಟುಡಿಯೋ ಮತ್ತು ಬಿ ಎಂ ಗಿರಿರಾಜ್ ನಿರ್ದೇಶನ 'ರಾಮರಸ' ಚಿತ್ರದಲ್ಲಿ ಹೆಬ್ಬಾ ಪಾಟೇಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್ ಆಗಿರುವ ಹೆಬ್ಬಾ ಪಾಟೇಲ್ ಸಿನಿಮಾಗಳಲ್ಲಿ ಅವಕಾಶ ಕಡಿಮೆ ಆದಾಗ ಓಟಿಟಿ ಲೋಕಕ್ಕೆ ಕಾಲಿಟ್ಟರು. ಅಲ್ಲದೆ ಸದ್ಯ ಹೆಬ್ಬಾ ಈಗ ಫಿಟ್ನೆಸ್ ಫ್ರೀಕ್ ಕೂಡ ಹೌದು.