ಅಬ್ಬಬ್ಬಾ! ಜೇಮ್ಸ್ ಫಸ್ಟ್ ಡೇ ವೀರೇಶ್ ಚಿತ್ರಮಂದಿರದಲ್ಲಿ ಅಭಿಮಾನಿಗಳ ಸಾಗರ ನೋಡಿ...
ಯಶಸ್ವಿ ಪ್ರದರ್ಶನ ಕಾಣುತ್ತಿದೆ ಪುನೀತ್ ರಾಜ್‌ಕುಮಾರ್ ಜೇಮ್ಸ್ ಸಿನಿಮಾ. ದೇಶ ವಿದೇಶಗಳಲ್ಲಿ 4000 ಸಾವಿರ ಶೋಗಳು...
Photo credit: ಕನ್ನಡ ಪ್ರಭ ವಿ ಮಣಿ
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟಿಸಿರುವ ಕೊನೆ ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಿದ ಅಭಿಮಾನಿ ಭಾವುಕರಾಗಿ ಹೊರ ಬರುತ್ತಿದ್ದಾರೆ.
ರಾಜ್ಯದಲ್ಲಿ ಒಟ್ಟು 376 ಸಿಂಗಲ್ ಸ್ಕ್ರೀನ್ ಮತ್ತು 180 ಕ್ಕೂ ಮಲ್ಟಿಫ್ಲೆಕ್ಸ್ ಸ್ಕ್ರೀನ್‌ಗಳಲ್ಲಿ ಜೇಮ್ಸ್ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಕರ್ನಾಟಕ ಸೇರಿದಂತೆ ದೇಶ ವಿದೇಶಗಳಲ್ಲಿ ಒಟ್ಟು 4000 ಸಾವಿರ ಶೋಗ ಪ್ರದರ್ಶನ ನಡೆಯುತ್ತಿದೆ. ಹೈದರಾಬಾದ್‌ನಲ್ಲಿ ಜೇಮ್ಸ್ ಚಿತ್ರಕ್ಕೆ ಭರ್ಜರಿ ಓಪನಿಂಗ್ ಹಾಗೂ ಒಳ್ಳೆಯ ರೆಸ್ಪಾನ್ಸ್ ಪಡೆಯುತ್ತಿದೆ.
ಇವತ್ತು ಒಂದೇ ದಿನಕ್ಕೆ 25 ರಿಂದ 30 ಕೋಟಿ ಕಲೆಕ್ಷನ್ ಎಂದು ಹೇಳಲಾಗುತ್ತಿದೆ. ಒಂದು ವಾರದೊಳಗೆ 100 ಕೋಟಿ ಕಲೆಕ್ಷನ್ ರಿಪೋರ್ಟ್ ಇದೆ.
ಜೇಮ್ಸ್ ಸಿನಿಮಾ ಕಲೆಕ್ಷನ್ ವಿಚಾರದಲ್ಲಿ ದಾಖಲೆಯ ಜೊತೆಗೆ ಅಭಿಮಾನಿಗಳ ಎಮೋಷನ್ ವಿಚಾರದಲ್ಲೂ ದಾಖಲೆ ಮಾಡಿದೆ. ಊರ ಹಬ್ಬದ ರೀತಿ ನಾಡಹಬ್ಬದ ರೀತಿ ಅದ್ದೂರಿಯಾಗಿ ಅಭಿಮಾನಿಗಳು ಅಪ್ಪು ಬರ್ತಡೇನ ಆಚರಿಸುತ್ತಿದ್ದಾರೆ.
ಎಷ್ಟೋ ಜನರು ತಮ್ಮ ತಮ್ಮ ಕೆಲಸ ಕಾರ್ಯಕ್ಕೆ ಅಘೋಷಿತ ರಜೆಯನ್ನ ಹಾಕಿದ್ದಾರೆ. ಫ್ಯಾಮಿಲಿ ಸಮೇತ ಥಿಯೇಟರ್ ಗಳಿಗೆ ಆಗಮಿಸಿ ಫಸ್ಟ್ ಡೇ ಫಸ್ಟ್ ಶೋ ನೋಡುತ್ತಿದ್ದಾರೆ.
ಚಿತ್ರದುರ್ಗದ ಬಸವೇಶ್ವರ ಹಾಗೂ ಪ್ರಸನ್ನ ಥಿಯೇಟರ್‌ಗಳನ್ನು ಕಟೌಟ್‌ಗಳಿಂದ ಮುಳುಗಿಸಲಾಗಿದೆ. ಜೆ ಜೆ ಹಟ್ಟಿಪವರ್‌ಸ್ಟಾರ್ ಯುವಕರ ಬಳಗ ಪುನೀತ್ ನೆನಪಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದೆ.
ಅಪ್ಪು 47ನೇ ಜನ್ಮದಿನದ ನೆನಪಿಗಾಗಿ 47 ಆಟೋಗಳ ಮೇಲೆ ಪುನೀತ್‌ರ ಚಿತ್ರಗಳಿಗೆ ಸಂಬಂಧಿಸಿದ ಕಟೌಟ್ ಇಟ್ಟು ಮೆರವಣಿಗೆ. ವಸಂತ ಚಿತ್ರ ಮಂದಿರದಲ್ಲಿ ಬೆಳಿಗ್ಗೆ 10ಕ್ಕೆ ಪುನೀತ್‌ರ ಕಟೌಟ್‌ಗೆ ಹಾಲಿನ ಅಭಿಷೇಕ.
ಮೈಸೂರಿನಲ್ಲಿ 5 ಸಿಂಗಲ್ ಸ್ಕ್ರೀನ್, ಮೂರು ಮಲ್ಟಿಪ್ಲೆಕ್ಸ್‌ಗಳಿವೆ. ಅಷ್ಟೂಸ್ಕ್ರೀನ್‌ಗಳಲ್ಲಿ ಮೊದಲ ದಿನದ ಟಿಕೇಟ್‌ಗಳು ಸೋಲ್ಡ್ ಔಟ್ ಆಗಿವೆ. ಮೈಸೂರಿನ ಇತಿಹಾಸದಲ್ಲಿ ಈ ಥರ ಆಗಿದ್ದು ಇದೆ ಮೊದಲ ಸಲ. ಒಂದೇ ದಿನ ಜೇಮ್ಸ್‌ನ ಒಟ್ಟು 85 ಶೋಗಳು ನಡೆಯಲಿವೆ.