- Home
- Entertainment
- Sandalwood
- ಕೂರ್ಗ್‌ನಲ್ಲಿ ನಡೆದ ಹರ್ಷಿಕಾ ಪೂಣಚ್ಚ, ಭುವನ್ ಪೊನ್ನಣ್ಣರ ಮುದ್ದಾದ ಮಗಳ ನಾಮಕರಣದ ಫೋಟೋಗಳಿವು!
ಕೂರ್ಗ್‌ನಲ್ಲಿ ನಡೆದ ಹರ್ಷಿಕಾ ಪೂಣಚ್ಚ, ಭುವನ್ ಪೊನ್ನಣ್ಣರ ಮುದ್ದಾದ ಮಗಳ ನಾಮಕರಣದ ಫೋಟೋಗಳಿವು!
ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಅವರು ತಮ್ಮ ಮಗಳಿಗೆ ನಾಮಕರಣ ಮಾಡಿದ್ದಾರೆ. ಕೊಡಗಿನಲ್ಲಿ ಈ ಕಾರ್ಯಕ್ರಮ ನಡೆದಿದೆ. ಕನ್ನಡ ಚಿತ್ರರಂಗದ ತಾರೆಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಹರ್ಷಿಕಾ ಪೂಣಚ್ಚ ಅವರು ಕಳೆದ ನವರಾತ್ರಿಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ನವರಾತ್ರಿ ಟೈಮ್‌ನಲ್ಲಿ ಮಗಳು ಹುಟ್ಟಿದ್ದು ಅವರಿಗೆ ತುಂಬ ಖುಷಿ ತಂದಿತ್ತು.
ನಟಿ ಅಮೂಲ್ಯ- ಆರ್ ಜಗದೀಶ್ ದಂಪತಿ, ಪೂಜಾ ಗಾಂಧಿ, ಚೈತ್ರಾ ವಾಸುದೇವನ್ ದಂಪತಿ, ಕಾರುಣ್ಯಾ ರಾಮ್ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕೊಡಗು ಸಂಪ್ರದಾಯದಂತೆ ತೊಟ್ಟಿಲು ಶಾಸ್ತ್ರ ನಡೆದಿದೆ. ಅಂದಹಾಗೆ ಮಗಳಿಗೆ ತ್ರಿದೇವಿ ಪೊನ್ನಕ್ಕ ಎಂದು ನಾಮಕರಣ ಮಾಡಿದ್ದಾರೆ.
ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಅವರು ತಮ್ಮ ಮುದ್ದಾದ ಮಗಳಿಗೆ ತ್ರಿದೇವಿ ಪೊನ್ನಕ್ಕ ಎಂದು ನಾಮಕರಣ ಮಾಡಿದ್ದಾರೆ. ಈ ಮೂಲಕ ಅವರು ಸಂಪ್ರದಾಯವನ್ನು ಬಿಟ್ಟಿಲ್ಲ.
ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಅವರು ಕೂರ್ಗ್‌ನಲ್ಲಿಯೇ ಮದುವೆಯಾಗಿದ್ದರು. 2023ರಲ್ಲಿ ಈ ಮದುವೆ ನಡೆದಿತ್ತು.
ನಿರೂಪಕಿ ಚೈತ್ರಾ ವಾಸುದೇವನ್ ಅವರು ಪಿಂಕ್ ಬಣ್ಣದ ಸೀರೆ ಉಟ್ಟು ಹರ್ಷಿಕಾ ಪೂಣಚ್ಚ ಮಗಳ ನಾಮಕರಣದಲ್ಲಿ ಭಾಗಿಯಾಗಿದ್ದಾರೆ.
ಇತ್ತೀಚೆಗೆ ಜಗದೀಪ್ ಎಲ್ ಅವರನ್ನು ಚೈತ್ರಾ ವಾಸುದೇವನ್ ಅವರು ಮದುವೆಯಾಗಿದ್ದಾರೆ. ಇದು ಎರಡನೇ ಮದುವೆ. ಇವರು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು.
ಚೈತ್ರಾ ವಾಸುದೇವನ್ ಹಾಗೂ ಜಗದೀಪ್ ಎಲ್ ಅವರು ಪ್ರೀತಿಸಿ ಮದುವೆಯಾಗಿದ್ದಾರೆ. ಕುಟುಂಬದವರನ್ನು ಒಪ್ಪಿಸಿ ಈ ಜೋಡಿ ಮದುವೆಯಾಗಿದೆ.
ಮಗಳ ನಾಮಕರಣದ ಖುಷಿಯಲ್ಲಿ ಭುವನ್ ಪೊನ್ನಣ್ಣ ಅವರು ಜಗದೀಪ್ ಎಲ್, ಕಾರುಣ್ಯಾ ರಾಮ್, ಚೈತ್ರಾ ವಾಸುದೇವನ್ ಜೊತೆ ಕಾಣಿಸಿಕೊಂಡಿದ್ದು ಹೀಗೆ.
ಇನ್ನು ಹರ್ಷಿಕಾ ಪೂಣಚ್ಚರ ಮಗಳಂತೂ ಯಾರು ಎತ್ತಿಕೊಂಡರೂ ಕೂಡ ಅಳೋದಿಲ್ಲ ಎನ್ನೋದು ವಿಶೇಷ. ಚಿಕ್ಕ ಮಕ್ಕಳು ತಂದೆ-ತಾಯಿ ಬಿಟ್ಟು ಎಲ್ಲರ ಬಳಿಯೂ ಹೋಗೋದಿಲ್ಲ. ಆದರೆ ತ್ರಿದೇವಿ ಮಾತ್ರ ಸ್ಪೆಷಲ್ ಎನ್ನಬಹುದು.